ನಾಯಕನ್ ಬಳಿಕ ಒಂದಾದ ಕಮಲ್ ಹಾಸನ್- ಮಣಿರತ್ನಂ ಜೋಡಿ ಥಗ್ ಲೈಫ್ ಗೆ ಮುನ್ನುಡಿ ಬರೆದಿತ್ತು. ಇದೀಗ ಚೆನ್ನೈನಲ್ಲಿ ನಡೆದ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ನಲ್ಲಿ ಅದರ ಫಸ್ಟ್ ಸಾಂಗ್ ಲಾಂಚ್ ಆಗಿದೆ. ಕಮಲ್- ಶಿಂಬು ಸಿಗ್ನೇಚರ್ ಸ್ಟೆಪ್ಸ್ ಹೇಗಿದೆ..? ದಿಗ್ಗಜರ ಸಮಾಗಮದ ಅವಿಸ್ಮರಣೀಯ ಕ್ಷಣಗಳು ಹೇಗಿತ್ತು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
ಇಲ್ಲಿಯವರೆಗೂ ಟೀಸರ್ ಗಳಿಂದಲೇ ಸದ್ದು ಮಾಡ್ತಿದ್ದ ತಮಿಳಿನ ಥಗ್ ಲೈಫ್ ಮೂವಿ, ಇದೀಗ ಎ ಆರ್ ರೆಹಮಾನ್ ಸಂಗೀತದ ಹಾಡುಗಳಿಂದಲೂ ಹೈಪ್ ಕ್ರಿಯೇಟ್ ಮಾಡ್ತಿದೆ. ಚೆನ್ನೈನಲ್ಲಿ ಇಂದು ಥಗ್ ಲೈಫ್ ಚಿತ್ರದ ಫಸ್ಟ್ ಸಾಂಗ್ ಲಾಂಚ್ ಮಾಡಲಾಯಿತು. ಕಮಲ್ ಹಾಸನ್ ಹಾಗೂ ಶಿಂಬು ಜೋಡಿಯಾಗಿ ನಟಿಸಿರೋ, ಮಣಿರತ್ನಂ ನಿರ್ದೇಶನದ ಈ ಚಿತ್ರದ ಹಾಡಿಗೆ ಕಮಲ್ ಹಾಸನ್ ಅವ್ರೇ ಸಾಹಿತ್ಯ ರಚಿಸಿರೋದು ವಿಶೇಷ.
ಮದ್ವೆಯಲ್ಲಿ ನಡೆಯೋ ಈ ಹಾಡಿನ ಚಿತ್ರೀಕರಣ ಡೆಲ್ಲಿಯಲ್ಲಿ ನಡೆದಿದ್ದು, ಸಾಕಷ್ಟು ಮಂದಿ ಕಲಾವಿದರು ಭಾಗಿಯಾಗಿದ್ದಾರೆ. ಕಮಲ್- ಶಿಂಬು ಸ್ಟೆಪ್ಸ್ ನೆಕ್ಸ್ಟ್ ಲೆವೆಲ್ ಗಿರೋದು ಫ್ಯಾನ್ಸ್ ಗೆ ಖುಷಿ ತಂದಿದೆ.
ನಟ ಕಮಲ್ ಹಾಸನ್ ಇದ್ರೆ ನಿರ್ದೇಶನ ಶೇಕಡಾ 50ರಷ್ಟು ಸುಲಭ ಅಂದ್ರು ಮಣಿರತ್ನಂ. ಅತ್ತ ಕಮಲ್ ಹಾಸನ್ ಮಾತಾಡ್ತಾ, ನಾನು ಕೂಡ ತುಂಬಾ ಕಲಿತೆ. ನಿಮಗೆ ಈ ಚಿತ್ರ ಹೊಸ ಅನುಭವ ನೀಡಲಿದೆ ಎಂದರು.
ಇನ್ನು ನಟಿ ತ್ರಿಶಾ, ನಟಿ ಅಭಿರಾಮಿ, ನಟ ಶಿಂಬು, ಮಲಯಾಳಂ ನಟ ಜೋಜು ಜಾರ್ಜ್ ಸೇರಿದಂತೆ ಇಡೀ ಚಿತ್ರತಂಡ ಕಮಲ್ ಹಾಸನ್ ಹಾಗೂ ಮಣಿರತ್ನಂನ ಕೊಂಡಾಡಿದ್ರು.
ಒಟ್ಟಾರೆ ಗ್ಯಾಂಗ್ ಸ್ಟರ್ ಸಿನಿಮಾ ಥಗ್ ಲೈಫ್ ವಿಕ್ರಮ್ ಗಿಂತ ಕೊಂಚ ಜಾಸ್ತಿ ಕಿಕ್ ಕೊಡಲಿದ್ದು, ಜೂನ್ 5ಕ್ಕೆ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಲಿದೆ. ಇಂದಿನಿಂದ ಪ್ರಮೋಷನ್ಸ್ ಕಿಕ್ ಸ್ಟಾರ್ಟ್ ಮಾಡಿರೋ ಟೀಂ, ಭರ್ಜರಿ ಪ್ರಮೋಷನ್ಸ್ ಮಾಡೋ ಯೋಜನೆಯಲ್ಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್