ಏಳೋ ಮಾದೇವ ಸಾಂಗ್‌ನಿಂದ ಗಾನಬಜಾನ ಶುರುವಿಟ್ಟಿದ್ದ ದಿ ರೈಸ್ ಆಫ್ ಅಶೋಕ ಟೀಂ, ಇದೀಗ ಸೆಕೆಂಡ್ ಸಿಂಗಲ್‌ನಿಂದ ಚಿತ್ರಪ್ರೇಮಿಗಳ ದಿಲ್ ದೋಚಿದೆ. ಕಾಂತಾರದ ಸಿಂಗಾರ ಸಿರಿ ಸಪ್ತಮಿ ಜೊತೆ ಅಭಿನಯ ಚತುರ ನೀನಾಸಂ ಸತೀಶ್ ಲವ್ ಡುಯೆಟ್ ಮಸ್ತ್ ಮಜಾ ಕೊಡ್ತಿದೆ.
ದಿ ರೈಸ್ ಆಫ್ ಅಶೋಕ..ನಟ ನೀನಾಸಂ ಸತೀಶ್ ನಟಿಸಿ, ನಿರ್ಮಾಣ ಮಾಡಿರೋ ಸಿನಿಮಾ. ಅವರ ಕರಿಯರ್‌ನಲ್ಲೇ ಬಿಗ್ ಬಜೆಟ್ ಹಾಗೂ ಬಿಗ್ ಸ್ಕೇಲ್ ಸಿನಿಮಾ ಇದಾಗಿದ್ದು, ದಿವಂಗತ ವಿನೋದ್ ದೋಂಡಲೆ ನಿರ್ದೇಶನ ಈ ಚಿತ್ರಕ್ಕಿದೆ. ಫಸ್ಟ್‌ಲುಕ್ ಟೀಸರ್ ಹಾಗೂ ಮೇಕಿಂಗ್‌ನಿಂದ ಸದ್ದು ಮಾಡ್ತಿದ್ದ ಈ ಸಿನಿಮಾ, ಇದೀಗ ಹಾಡುಗಳಿಂದ ಸಿಕ್ಕಾಪಟ್ಟೆ ಹಂಗಾಮ ಮಾಡ್ತಿದೆ.

ಲವ್ ಮೂಡ್‌ನಲ್ಲಿ ಸಪ್ತಮಿ ಜೊತೆ ಸತೀಶ್ ರೊಮ್ಯಾನ್ಸ್
ಹಳ್ಳಿ ಸೊಗಡಿನಲ್ಲಿ ದಿ ರೈಸ್ ಆಫ್ ಅಶೋಕ 2ನೇ ಸಾಂಗ್

ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಇತ್ತೀಚೆಗೆ ನೀನಾಸಂ ಸತೀಶ್ ಅವರೇ ಸಾಹಿತ್ಯ ರಚಿಸಿದ್ದ ಮಾದೇವನ ಕುರಿತ ಡಿವೋಷನಲ್ ಸಾಂಗ್ ಬಿಡುಗಡೆ ಆಗಿತ್ತು. ಭಕ್ತಿಯ ಪರಾಕಾಷ್ಟೆಯನ್ನ ಮೆರೆದ ಆ ಗೀತೆ ಬ್ಲಾಕ್ ಬಸ್ಟರ್ ಹಿಟ್ ಆಗ್ತಿದ್ದಂತೆ ಇದೀಗ ಮತ್ತೊಂದು ಲವ್ ಡುಯೆಟ್ ಸಾಂಗ್ ರಿಲೀಸ್ ಆಗಿದೆ. ಯಾಕೋ ಯಾಕೋ ಅನ್ನೋ ಈ ಹಾಡಲ್ಲಿ ಸಪ್ತಮಿ ಜೊತೆ ಸತೀಶ್ ಮಸ್ತ್ ರೊಮ್ಯಾನ್ಸ್ ಮಾಡ್ತಿದ್ದಾರೆ.

ಹಳ್ಳಿ ಸೊಗಡು, ರೈತರ ಬದುಕು ಬವಣೆಯ ಬ್ಯಾಕ್‌ಡ್ರಾಪ್‌ನಲ್ಲಿ ಈ ಹಾಡನ್ನ ಚಿತ್ರಿಸಿದ್ದು, ರೆಟ್ರೋ ಶೈಲಿಯ ಗೀತೆ ಸಖತ್ ಮಜಬೂತಾಗಿದೆ. ಕಾಂತಾರ ಫೇಮ್ ಸಿಂಗಾರ ಸಿರಿ ಸಪ್ತಮಿ ಸಿಂಪಲ್ ಸ್ಟೆಪ್ಸ್ ಕಿಕ್ ಕೊಡ್ತಿವೆ. ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಅವರೇ ಸಾಹಿತ್ಯ ರಚಿಸಿದ್ದು, ಪಂಚಮ್ ಜೀವಾ-ಪೃಥ್ವಿ ಭಟ್ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಸತೀಶ್ ಹಾಗೂ ಅವರ ನಡುವಿನ ಕೆಮಿಸ್ಟ್ರಿ ಕೂಡ ಮೆಚ್ಚುವಂತಿದ್ದು, ಈ ಹಾಡು ಮಿಲಿಯನ್‌ಗಟ್ಟಲೆ ವೀವ್ಸ್‌ನಿಂದ ಚಿತ್ರಪ್ರೇಮಿಗಳ ದಿಲ್ ದೋಚಿದೆ.





