ಎಲ್ಲೆಲ್ಲೂ ಈಗ AI ಕಾರುಬಾರು, ಸಿನಿಮಾ, ಮನರಂಜನಾ ಕ್ಷೇತ್ರದಲ್ಲಿ ಕೂಡ ಹೊಸ ಕ್ರಾಂತಿಗೆ ಇದು ನಾಂದಿ ಹಾಡ್ತಿದೆ. ಇಂಟೆರೆಸ್ಟಿಂಗ್ ಏನಂದ್ರೆ ವಿಶ್ವದ ಮೊಟ್ಟ ಮೊದಲ ಎಐ ಸಿನಿಮಾ ಕನ್ನಡದಲ್ಲಿ ಸಿದ್ದವಾಗಿದೆ ಅದುವೇ ಲವ್ ಯು. ಸದ್ಯ ಈ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ಲವ್ ಯು ತಂಡ ಮಾಹಿತಿ ಶೇರ್ ಮಾಡಿದ್ದಾರೆ.
ಈಗಾಗ್ಲೇ ಅನೇಕ ಸಿನಿಮಾ ತಂಡಗಳು ಮೇಕಿಂಗ್ನಲ್ಲಿ ಎಐ ಬಳಕೆ ಮಾಡ್ತಾ ಇವೆ. ಆದ್ರೆ ಇಲ್ಲೊಬ್ರು ಇಡೀ ಸಿನಿಮಾವನ್ನೇ AI ಬಳಕೆ ಮಾಡಿಕೊಂಡು ರೆಡಿಮಾಡಿದ್ದಾರೆ. ‘ಲವ್ ಯು’ ಅನ್ನೋ ಈ ಸಿನಿಮಾವನ್ನ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಲಾಗಿದೆ. ನಿರ್ದೇಶಕ, ನಿರ್ಮಾಪಕ, AI ಇನ್ಸ್ಟ್ರಕ್ಟರ್ ಹಾಗೂ ಪಿಆರ್ಓ ಬಿಟ್ಟು ಬೇರೆ ನಿಜ ವ್ಯಕ್ತಿಗಳು ಈ ಚಿತ್ರಕ್ಕೆ ಕೆಲಸ ಮಾಡಿಲ್ಲ. ಎಲ್ಲಾ AIಮಯ
ಡೈರೆಕ್ಟರ್ ನರಸಿಂಹ ಮೂರ್ತಿ ಮತ್ತು AI ತಂತ್ರಜ್ಞ ನೂತನ್ ಸೇರಿ ಇಬ್ಬರೇ ಕೆಲಸ ಮಾಡಿದ್ದಾರೆ. AI ಟೆಕ್ನಾಲಜಿ ಬಳಕೆ ಮಾಡಿ ಕೇವಲ 10 ಲಕ್ಷ ವೆಚ್ಚದಲ್ಲಿ 95 ನಿಮಿಷದ ಈ ಚಿತ್ರದ ಹವಾ ಇದೀಗ ಜೋರಾಗಿದೆ ಲವ್ ಯು ಚಿತ್ರದಲ್ಲಿ ಎಲ್ಲವೂ AI ಮಯವೇ ಇದೆ. ಹೀರೋ..ಹೀರೋಯಿನ್, ಸಂಗೀತ, ಹಿನ್ನೆಲೆ ಸಂಗೀತ, ಡಬ್ಬಿಂಗ್ ಹೀಗೆ ಎಲ್ಲವನ್ನೂ AI ಸಹಾಯದಿಂದಲೇ ಮಾಡಲಾಗಿದೆ. AI ಸಿನಿಮಾ ಆದ್ರೂ ಹಾಡುಗಳಿಗೆ ಏನು ಕೊರತೆ ಇಲ್ಲ ಬರೋಬ್ಬರಿ 12ಹಾಡುಗಳು ಈ ಚಿತ್ರದಲ್ಲಿದೆ. ಇವರಿಬ್ಬರ ಶ್ರಮದ ಫಲದಿಂದಲೇ ಲವ್ ಯು ಸಿನಿಮಾ ಅದ್ಭುತ ರೂಪತಾಳಿದೆ.
ಸೆನ್ಸಾರ್ ಕೂಡ ಮುಗಿಸಿರೋ ಈ ಸಿನಿಮಾ ಯುಐ ಸರ್ಟಿಫಿಕೇಟ್ ಪಡೆದುಕೊಂಡಿದ್ದು ಮೇ 2ನೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲಿಗೆ ವಿಶ್ವದ ಮೊದಲ ಎಐ ಸಿನಿಮಾ ನಿರ್ಮಿಸಿದ ಖ್ಯಾತಿ ಸ್ಯಾಂಡಲ್ವುಡ್ಗೆ ಸಿಕ್ತಾ ಇದೆ. ಈ ಖ್ಯಾತಿಯ ಖುಷಿ ಜೊತೆಗೆ ಮುಂದಿನ ದಿನಗಳಲ್ಲಿ ಎಐ ಟೆಕ್ನಾಲಜಿ, ಸಿನಿಮಾ ಕಲಾವಿದರ-ತಂತ್ರಜ್ಞರ ಕೆಲಸ ಕಿತ್ತುಕೊಳ್ಳುತ್ತೆ ಅನ್ನೋ ಆತಂಕವೂ ಶುರುವಾಗಿದೆ.