ದಳಪತಿ ವಿಜಯ್‌ಗೆ ಬ್ಯಾಕ್ ಟು ಬ್ಯಾಕ್ ಹಿನ್ನಡೆ ಆಗ್ತಿದೆ. ಒಂದ್ಕಡೆ ಸಿನಿಮಾದ ರಿಲೀಸ್‌ಗೆ ಸಾಕಷ್ಟು ಅಡ್ಡಿ ಆತಂಕ. ಮತ್ತೊಂದ್ಕಡೆ ಪತ್ನಿಯಿಂದ ಡಿವೋರ್ಸ್. ಹೌದು.. ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿರೋ ಮಡದಿ ಸಂಗೀತಾಗೆ 250 ಕೋಟಿ ಜೀವನಾಂಶ ನೀಡಿ, ಹೊರಗಡೆಯೇ ಸೆಟಲ್ ಮಾಡಿಕೊಳ್ಳೋಕೆ ಸಜ್ಜಾಗಿದ್ದಾರಂತೆ ದಳಪತಿ. ಇದರ ಮಧ್ಯೆ ತ್ರಿಶಾ ಪೋಸ್ಟ್‌ಗಳು ವೈರಲ್ ಆಗ್ತಿರೋದ್ಯಾಕೆ..? ಆ ಇನ್ಫಿನಿಟಿ ಸೀಕ್ರೆಟ್ ಆದ್ರೂ ಏನು ಅನ್ನೋದಕ್ಕೆ ಉತ್ತರ ಇಲ್ಲಿದೆ.
ದಳಪತಿ ವಿಜಯ್..68 ಸಿನಿಮಾಗಳಿಂದ ಬಹುದೊಡ್ಡ ಅಭಿಮಾನಿ ಬಳಗ ಸಂಪಾದಿಸಿ, ಕೋಟೆಯನ್ನೇ ಕಟ್ಟಿರೋ ತಮಿಳಿನ ಸೂಪರ್ ಸ್ಟಾರ್. ಸದ್ಯ ಅವರ ಜನ ನಾಯಗನ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಅದೇ ಅವರ ಕಟ್ಟ ಕಡೆಯ ಸಿನಿಮಾ ಕೂಡ ಹೌದು. ಅರೇ ಅದಾದ್ಮೇಲೆ ಏನ್ಮಾಡ್ತಾರೆ ಅಂದ್ರೆ.. ಪಾಲಿಟಿಕ್ಸ್. ಹೌದು.. ಟಿವಿಕೆ ಅನ್ನೋ ಸ್ವಂತ ಪಕ್ಷ ಕಟ್ಟಿರೋ ವಿಜಯ್, ರಾಜಕಾರಣದತ್ತ ಮುಖ ಮಾಡಿದ್ದಾರೆ. ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದಾರೆ.
ವಿಜಯ್ ಪತ್ನಿಗೆ 250Cr ಜೀವನಾಂಶ..ತ್ರಿಶಾ ಇನ್ಫಿನಿಟಿ ಸೀಕ್ರೆಟ್
ಅಭಿಮಾನಿ ಸಂಗೀತಾನ ಪ್ರೀತಿಸಿ ಮದ್ವೆ ಆಗಿದ್ದ ದಳಪತಿ ವಿಜಯ್

ಪಕ್ಷ ಸಂಘಟನೆ ವೆಳೆ ಕರೂರು ಕಾಲ್ತುಳಿತ ಪ್ರಕರಣದಿಂದ ಇಂದಿಗೂ ಕಾನೂನಿನ ಸುಳಿಗೆ ಸಿಲುಕಿದ್ದಾರೆ ದಳಪತಿ ವಿಜಯ್. ಮತ್ತೊಂದ್ಕಡೆ ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಸಂಕಷ್ಟ ಶುರುವಾಗಿ ರಿಲೀಸ್ ಆಗಲೇ ಇಲ್ಲ. ತಮಿಳುನಾಡು ಎಲೆಕ್ಷನ್ಸ್ ಮುಗಿಯೋ ತನಕ ರಿಲೀಸ್ ಆಗುವ ಸೂಚನೆ ಕೂಡ ಇಲ್ಲ. ಈ ಮಧ್ಯೆ ವೈಯಕ್ತಿಕ ಜೀವನದಲ್ಲೊಂದು ಮಹಾ ಬಿರುಗಾಳಿ ಬೇರೆ. ಯೆಸ್.. 27 ವರ್ಷ ಸಹ ಜೀವನ ನಡೆಸಿದ ಪತ್ನಿ ಸಂಗೀತಾ ನಟ ವಿಜಯ್‌ಗೆ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

27 ವರ್ಷದ ದಾಂಪತ್ಯ ಅಂತ್ಯ..ಕೋರ್ಟ್ ಹೊರಗೆ ಸೆಟಲ್ಮೆಂಟ್?
ತಂದೆಯನ್ನ ಅನ್‌ಫಾಲೋ ಮಾಡಿದ ಪುತ್ರ ಜೇಸನ್ ಸಂಜಯ್..!
ಎಲ್ಲವನ್ನೂ ಕೂಲ್ ಆಗಿಯೇ ನಿಭಾಯಿಸುತ್ತಾ ಬರ್ತಿರೋ ವಿಜಯ್‌ಗೆ ಪತ್ನಿಗೆ ಡಿವೋರ್ಸ್ ನೀಡೋ ವಿಚಾರ ಸಾಕಷ್ಟು ಅಪಜಯವಾಗಿದೆ. ಆಗ್ತಿದೆ. ಅದಕ್ಕೆ ಕಾರಣ ಮೂರನೇ ವ್ಯಕ್ತಿ ಎನ್ನಲಾಗ್ತಿರೋ ನಟಿ ತ್ರಿಶಾ. ಹೌದು.. ಸಂಗೀತಾ ವಿಜಯ್‌ರಿಂದ ಡಿವೋರ್ಸ್ ಪಡೆಯುತ್ತಿರೋದಕ್ಕೆ ಆತನಿಗೆ ತ್ರಿಶಾ ಜೊತೆಗಿರೋ ಅಕ್ರಮ ಸಂಬಂಧ ಅನ್ನೋದು ದೂರಿನಲ್ಲಿ ಉಲ್ಲೇಖವಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ವಿಜಯ್-ತ್ರಿಶಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು, ವಿಡಿಯೋಗಳು ಸಖತ್ ವೈರಲ್ ಆಗ್ತಿವೆ.

ಅದರಲ್ಲೂ ತ್ರಿಶಾ ನಟ ವಿಜಯ್ ಕುರಿತು ಮಾಡಿರೋ ಬಹುತೇಕ ಪೋಸ್ಟ್‌ಗಳಲ್ಲಿ ಇನ್ಫಿನಿಟಿ ಚಿಹ್ನೆ ಹಾಗೂ ಹಾರ್ಟ್ ಸಿಂಬಲ್ ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ ಲಿಫ್ಟ್‌ನಲ್ಲಿನ ಸೆಲ್ಫಿ, ಏರ್‌ಪೋರ್ಟ್ ಫೋಟೋಸ್, ಫಾರಿನ್ ಶೂಟಿಂಗ್ ಫೋಟೋಸ್, ತ್ರಿಶಾ ಫೇವರಿಟ್ ಶ್ವಾನದ ಜೊತೆಗಿನ ವಿಜಯ್ ಫೋಟೋ.. ಹೀಗೆ ಸಾಕಷ್ಟು ಸಾಕ್ಷಿಗಳು ಅವರ ಬಾಂಧವ್ಯಕ್ಕೆ ಪುಷ್ಠಿ ನೀಡುತ್ತಿವೆ.

ಇದೆಲ್ಲಾ ತಿಳಿಯುತ್ತಿದ್ದಂತೆ ಡೈರೆಕ್ಟರ್ ಆಗುವ ಕನಸು ಕಂಡಿರೋ ವಿಜಯ್ ಪುತ್ರ ಜೇಸನ್ ಸಂಜಯ್ ತಮ್ಮ ತಂದೆ ವಿಜಯ್ ದಳಪತಿಯ ಇನ್ಸ್‌ಟಾನ ಅನ್ ಫಾಲೋ ಮಾಡಿದ್ದಾರೆ. ಅಲ್ಲಿಗೆ ತಾಯಿ ಪರ ನಿಂತಿರೋ ಜೇಸನ್, ತನ್ನ ತಂದೆಯ ಮೇಲಿನ ಕೋಪವನ್ನ ನೇರವಾಗಿಯೇ ಹೊರಹಾಕಿದ್ದಾರೆ. ಅಲ್ಲದೆ, ಕೋರ್ಟ್ ಮೆಟ್ಟಿಲೇರಿರುವ ಮಡದಿ ಸಂಗೀತಾಗೆ 250 ಕೋಟಿ ಜೀವನಾಂಶ ನೀಡುತ್ತೇನೆ. ಕೋರ್ಟ್‌ನಿಂದ ಹೊರಗೆ ಸೆಟಲ್ಮೆಂಟ್ ಮಾಡಿಕೊಳ್ಳೋಣ ಎಂದಿದ್ದಾರಂತೆ ವಿಜಯ್. ಹೀದೊಂದು ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ.

ಈ ಮಧ್ಯೆ ಸಂಗೀತಾ ತಮ್ಮ ದೂರಿನಲ್ಲಿ ಉಲ್ಲೇಖಿಸಿರೋ ಮೂರನೇ ವ್ಯಕ್ತಿ ತ್ರಿಶಾ ಅಲ್ಲ. ಆಕೆ ನನ್ನ ಕ್ಲೈಂಟ್. ಮಾಧ್ಯಮಗಳು ದಯವಿಟ್ಟಿ ಆಕೆಯ ಹೆಸರು ಹಾಗೂ ಫೋಟೋಗಳನ್ನ ಸುದ್ದಿ ಮಾಡೋದನ್ನ ನಿಲ್ಲಿಸಿ ಅಂತ ತ್ರಿಶಾ ಪರ ಲಾಯರ್ ಸುತ್ತೋಲೆ ಹೊರಡಿಸಿದ್ದಾರೆ. ಇವುಗಳ ನಡುವೆ ತ್ರಿಶಾ ಹಳೆಯ ಇನ್ಸ್‌ಟಾ ಸ್ಟೋರಿ ಒಂದು ಸಖತ್ ಚರ್ಚೆಗೆ ಗ್ರಾಸವಾಗಿದೆ. ‘ಏನೇ ಆಗಲಿ, ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ಸಹ ನಾನು ಮಾತ್ರ ನಿನ್ನ ಕೈ ಬಿಡಲ್ಲ’ ಅನ್ನೋ ಪೋಸ್ಟ್ ಆಡಿಕೊಳ್ಳೋರಿಗೆ ಆಹಾರವಾಗಿದೆ. ಮುಂದೆ ಇದು ಯಾವೆಲ್ಲಾ ರೂಪಗಳನ್ನ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.





