ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಮಾರ್ಚ್ 24ರಂದು ಅರೆಸ್ಟ್ ಆಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಗಳು ನೋಟೀಸ್ ನೀಡಿದ ನಂತರ ಅದೇ ದಿನ ಮಧ್ಯರಾತ್ರಿ ಬಿಡುಗಡೆಯಾಗಿದ್ದಾರೆ. ಆದರೆ, ಜೈಲಿನಿಂದ ರಿಲೀಸ್ ಆದರೂ ಅವರಿಗೆ ಮುಗಿಯದು ಸಂಕಟ. ಅವರು ಈಗ ಮತ್ತೆ ವಿಚಾರಣೆಗೆ ಒಳಗಾಗಬೇಕಿದೆ.
ವಿನಯ್ ಮತ್ತು ರಜತ್ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರ ರಿಯಾಲಿಟಿ ಶೋ ಮುಗಿದ ನಂತರ ಸೋಶಿಯಲ್ ಮೀಡಿಯಾದಲ್ಲಿ “ಮಚ್ಚು ಹಿಡಿದು” ರೀಲ್ಸ್ ಅಪ್ಲೋಡ್ ಮಾಡಿದ್ದರು. ಇದರಲ್ಲಿ ಅವರು ಒಬ್ಬರನ್ನೊಬ್ಬರು ಹಾಸ್ಯದ ಧಾಟಿಯಲ್ಲಿ “ಝಳಪಿಸುವ” ದೃಶ್ಯಗಳಿದ್ದವು. ಕ್ಯಾಪ್ಶನ್ನಲ್ಲಿ “ಸೆಟ್ ಪ್ರಾಪರ್ಟಿ” ಎಂದು ಸ್ಪಷ್ಟಪಡಿಸಿದ್ದರೂ, ಅದನ್ನು ನಿಜವಾದ ಮಚ್ಚು ಎಂದು ಸಂಶಯಿಸಿದ ಪೊಲೀಸರು ಇಬ್ಬರನ್ನೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಂಧಿಸಿದರು.
ಮಧ್ಯರಾತ್ರಿ ಬಿಡುಗಡೆ ರಹಸ್ಯ
ಬೆಂಗಳೂರು ಪೊಲೀಸರು ಮಚ್ಚನ್ನು ಪರೀಕ್ಷಿಸಿದ ನಂತರ ಅದು “ಫೈಬರ್” ಕೃತಕ ಮಚ್ಚು ಎಂದು ದೃಢಪಡಿಸಿದ್ದಾರೆ. ವಿನಯ್ ಮತ್ತು ರಜತ್ ಅವರನ್ನು ನೋಟೀಸ್ ನೀಡಿ ಬಿಡುಗಡೆ ಮಾಡಲಾಗಿದೆ. ಇಬ್ಬರೂ ಮತ್ತೆ ವಿಚಾರಣೆಗೆ ಹಾಜರಾಗಲು ಬಾಕಿ ಇದ್ದು, ಈ ಸಂದರ್ಭದಲ್ಲಿ ವಿನಯ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ಹೊಸ ದಿನ, ಹೊಸ ಆರಂಭ” ಎಂದು ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಪೊಲೀಸರ ಸಂಶಯದ ಹಿಂದಿನ ಕಾರಣಗಳು
ರೀಲ್ಸ್‌ನಲ್ಲಿ ಬಳಸಿದ ಮಚ್ಚು ಸೆಟ್ ಪ್ರಾಪರ್ಟಿ ಎಂದು ಸ್ಪರ್ಧಿಗಳು ಆರಂಭದಲ್ಲೇ ಹೇಳಿದ್ದರೂ, ಪೊಲೀಸರು ಆರಂಭದಲ್ಲಿ ಇದನ್ನು ನಂಬಲಿಲ್ಲ. ಆದರೆ, ನಂತರದ ತನಿಖೆಯಲ್ಲಿ ಅದು ಹಾನಿಕಾರಕವಲ್ಲದ ಫೈಬರ್ ಮಚ್ಚು ಎಂದು ದೃಢಪಟ್ಟಿದೆ. ಪೊಲೀಸ್ ಅಧಿಕಾರಿಗಳು, “ಸಾರ್ವಜನಿಕರಲ್ಲಿ ಭಯವನ್ನು ಹರಡುವ ಸಾಧ್ಯತೆ ಇದ್ದ ಕಾರಣ ನಾವು ಕಟ್ಟುನಿಟ್ಟಾಗಿ ನಡೆದುಕೊಂಡಿದ್ದೇವೆ” ಎಂದು ವಿವರಿಸಿದ್ದಾರೆ.