ಮೆಜೆಸ್ಟಿಕ್ ಸಿನಿಮಾದಿಂದ ಶುರುವಾದ ಕಿಚ್ಚ-ದಚ್ಚು ನಡುವಿನ ಸ್ಟಾರ್ ವಾರ್, ಮಾರ್ಕ್-ಡೆವಿಲ್‌ವರೆಗೂ ಬಂದು ನಿಂತಿದೆ. ಅದು ಬರೀ ಸ್ಟಾರ್ ವಾರ್ ಅಷ್ಟೇ ಅಲ್ಲ. ಫ್ಯಾನ್ಸ್ ವಾರ್ ಆಗಿಯೂ ಮಾರ್ಪಾಡಾಗಿದೆ. ಸದ್ಯ ಮಾರ್ಕ್ ಚಿತ್ರ ಇವೆಂಟ್‌ನಲ್ಲಿ ಯುದ್ಧಕ್ಕೆ ಸಿದ್ಧ.. ಮಾತಿಗೆ ಬದ್ಧ ಎಂದ ಕಿಚ್ಚನ ಸ್ಟೇಟ್‌ಮೆಂಟ್‌ಗೆ ವಿಜಯಲಕ್ಷ್ಮೀ ದರ್ಶನ್ ಕೌಂಟರ್ ನೀಡಿದ್ದಾರೆ. ಧನ್ವೀರ್ ಗೌಡ ಕೂಡ ಅದಕ್ಕೆ ಸಾಥ್ ನೀಡಿದ್ದಾರೆ. ಆಗಬೇಕಿರೋದು ಯಾವ ವಾರ್..? ಆಗ್ತಿರೋದು ಯಾವ ವಾರ್ ಅನ್ನೋದ್ರ ಒಂದು ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ಮೆಜೆಸ್ಟಿಕ್ to ಮಾರ್ಕ್.. ನಿಲ್ಲದ ಕಿಚ್ಚ- ದಚ್ಚು ಸ್ಟಾರ್ ವಾರ್..!
- ಸುದೀಪ್ ಯುದ್ಧ ಯಾರ ಮೇಲೆ? ವಿಜಿ ಕೌಂಟರ್ ಯಾರಿಗೆ?
- ಹುಬ್ಬಳ್ಳಿಯಲ್ಲಿ ಹೆಬ್ಬುಲಿ ಘರ್ಜನೆ.. ಆ ಪಡೆ ವಿರುದ್ಧ ಯುದ್ಧಕ್ಕೆ ಸಿದ್ಧ
- ಪೈರಸಿ ಮಾಡೋರ ವಿರುದ್ಧ ಕಿಚ್ಚನ ಕಿಚ್ಚು.. ಅದಕ್ಯಾಕೆ ಹಲವು ರೂಪ?
ಮೆಜೆಸ್ಟಿಕ್.. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೀಡ್‌ನಲ್ಲಿ ನಟಿಸಿದ ಚೊಚ್ಚಲ ಸಿನಿಮಾ. ಈ ಸಿನಿಮಾ ತೆರೆಕಂಡು 22 ವರ್ಷಗಳಾದ್ರೂ ಸಹ, ಇಂದಿಗೂ ಈ ಸಿನಿಮಾದ ಸ್ಟಾರ್‌ಕಾಸ್ಟ್ ಕುರಿತು ಮಾತನಾಡೋದು ನಿಂತಿಲ್ಲ. ಯೆಸ್.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಡಬೇಕಿದ್ದ ಮೆಜೆಸ್ಟಿಕ್ ಸಿನಿಮಾ, ಅವರ ಬಳಿ ಡೇಟ್ಸ್ ಇಲ್ಲದ ಹಿನ್ನೆಲೆ ದರ್ಶನ್ ಅವರ ಹೆಸರನ್ನ ಸಜೆಸ್ಟ್ ಮಾಡಿದ್ದರು. ಅಲ್ಲಿಂದಲೇ ಹೊತ್ತಿಕೊಂಡ ಸ್ಟಾರ್‌ವಾರ್ ಕಿಚ್ಚು, ಸದ್ಯ ಡೆವಿಲ್, ಮಾರ್ಕ್ ಸಿನಿಮಾಗಳವರೆಗೂ ಬಂದು ನಿಂತಿದೆ. ಆ ಜಿದ್ದು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ.
ಯೆಸ್.. ಚಿತ್ರರಂಗದಲ್ಲಿ ಆರೋಗ್ಯಕರವಾದಂತಹ ಕಾಂಪಿಟೇಷನ್ ಇರಬೇಕು. ಆಗಲೇ ಒಳ್ಳೊಳ್ಳೆಯ ಸಿನಿಮಾಗಳು, ಕಂಟೆಂಟ್ ಬೇಸ್ಡ್ ಚಿತ್ರಗಳು ಹೊರಬರೋಕೆ ಸಾಧ್ಯ. ಆದ್ರೆ ಅದು ಆಗ್ತಿರೋದೇ ಬೇರೆ. ಇದು ಸದ್ಯದ ಮಟ್ಟಿಗೆ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ. ದರ್ಶನ್ ಸದ್ಯ ಜೈಲಲ್ಲಿ ಇದ್ದಾರೆ. ಸುದೀಪ್ ತಮ್ಮ ಮಾರ್ಕ್ ಸಿನಿಮಾದ ಪ್ರಮೋಷನ್ಸ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈಗಲೂ ಅದು ಸ್ಟಾರ್ ವಾರ್ ಜೊತೆ ಫ್ಯಾನ್ಸ್ ವಾರ್ ರೂಪ ಪಡೆದಿದೆ.
ಯೆಸ್.. ಕಳೆದ ಶನಿವಾರ ರಾತ್ರಿ ಅಂದ್ರೆ ಡಿಸೆಂಬರ್ 20ರಂದು ಹುಬ್ಬಳ್ಳಿಯ ನೆಹರೂ ಸ್ಟೇಡಿಯಂನಲ್ಲಿ ಬಾದ್‌ಷಾ ಕಿಚ್ಚ ಸುದೀಪ್ ತಮ್ಮ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಸಿದ್ರು. ಅದಕ್ಕೆ ಲಕ್ಷಾಂತರ ಮಂದಿ ಸಾಕ್ಷಿ ಆದ್ರು. ಅದೇ ವೇದಿಕೆಯಲ್ಲಿ ಯುದ್ಧಕ್ಕೆ ಸಿದ್ದ ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ ಎಂದಿದ್ರು ಸುದೀಪ್. ಇಲ್ಲಿಯವರೆಗೆ ಏನೇ ಆದ್ರೂ ಸಹನೆಯಿಂದ ವರ್ತಿಸಿದ್ದೀವಿ. ನನ್ನಿಂದ ಅಭಿಮಾನಿಗಳಾದ ನೀವು ತುಂಬಾ ಸಮಸ್ಯೆಗಳನ್ನ ಎದುರಿಸಿದ್ದೀರಿ. ಇನ್ಮೇಲೆ ಹಾಗೆ ಮಾಡಬೇಡಿ. ಇನ್ಮೇಲೆ ನೀವೇನು ಅಂತ ತೋರಿಸಿ ಅನ್ನೋ ಮಾತನ್ನ ಹೇಳಿದ್ರು.
ಅಷ್ಟೇ ಅಲ್ಲ, ಒಂದು ಪಡೆ ನಮಗೆ ನೆಗೆಟಿವ್ ಮಾಡೋಕೆ ಅಂತಲೇ ಹೊರಗೆ ಕಾಯ್ತಿದೆ ಅನ್ನೋ ಮಾತನ್ನ ಕೂಡ ಹೇಳಿದ್ರು ಸುದೀಪ್. ಅಂದಹಾಗೆ ಕಿಚ್ಚನ ಆ ಮಾತಿನ ಅರ್ಥ ಮಾರ್ಕ್ ಸಿನಿಮಾನ ಪೈರಸಿ ಮಾಡೋಕೆ ಕಾಯ್ತಿರೋ ಪಡೆಯದ್ದು. ಆದ್ರೆ ಇಲ್ಲಿ ಅದನ್ನ ಗಜಪಡೆ ಅನ್ನೋ ಅರ್ಥದಲ್ಲಿ ಅರ್ಥೈಸಿಕೊಳ್ಳಲಾಗ್ತಿದೆ. ಅದಕ್ಕೆ ತುಪ್ಪ ಸುರಿಯುವಂತೆ ಡಿಬಾಸ್ ಸೋಲ್ಜರ್ಸ್ ಅನ್ನೋ ಪೇಜ್‌ನಿಂದ ‘ಯಾವುದೋ ಒಂದು ಪಡೆಯಲ್ಲ ಕಣೋ ಹುಚ್ಚ, ನಮ್ಮದು ಜಗಪಡೆ. ಆ ಹೆಸರು ಹೇಳಲು ನಿನಗೆ ಮೀಟರ್ ಇಲ್ಲ’ ಅಂತ ಪೋಸ್ಟ್ ಮಾಡಲಾಗಿದೆ.
- ಸುದೀಪ್ ವಾರ್ ಸ್ಟೇಟ್‌ಮೆಂಟ್‌ಗೆ ಕೆರಳಿದ ವಿಜಯಲಕ್ಷ್ಮೀ..!
- ದಾವಣಗೆರೆಯಲ್ಲಿ ಡೈರೆಕ್ಟ್ ಕೌಂಟರ್ ನೀಡಿದ ವಿಜಿ ದರ್ಶನ್
- ಜಂಗಲ್ ಮೇ ಸಿಂಗಲ್ ಶೇರ್.. ಕಾಡಿನ ರಾಜನಾರು ಧನ್ವೀರ್?
- ಅತ್ತಿಗೆ ಮಾತಿಗೆ ಶಹಬ್ಬಾಸ್‌ಗಿರಿ.. ಸಿಂಹ ಸಿಂಗಲ್ ಆದ್ರೂ ಸಿಂಹನೇ
ಯೆಸ್.. ದರ್ಶನ್ ಜೈಲಿನಲ್ಲಿರೋ ಹಿನ್ನೆಲೆ, ಅವರ ಅನುಪಸ್ಥಿತಿಯಲ್ಲಿ ಡೆವಿಲ್ ಚಿತ್ರದ ವಿಜಯಯಾತ್ರೆಯಲ್ಲಿ ಭಾಗಿಯಾಗಿರೋ ಡಿಬಾಸ್ ಧರ್ಮಪತ್ನಿ ವಿಜಯಲಕ್ಷ್ಮೀ, ಮಂಡ್ಯ ಮುಗಿಸಿ, ದಾವಣಗೆರೆ ತೆರಳಿದ್ದರು. ಮೊನ್ನೆ ರಾತ್ರಿ ಸುದೀಪ್ ನೀಡಿದ್ದ ವಾರ್ ಸ್ಟೇಟ್‌ಮೆಂಟ್‌ಗೆ ನಿನ್ನೆ ದಾವಣಗೆರೆಯಲ್ಲಿ ಥಿಯೇಟರ್ ವಿಸಿಟ್ ವೇಳೆ ಕೌಂಟರ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಕೆಲವರು ದರ್ಶನ್ ಹಾಗೂ ಅವರ ಫ್ಯಾನ್ಸ್ ವಿರುದ್ಧ ಕೆಲ ವೇದಿಕೆಗಳು, ಟಿವಿ ಸಂದರ್ಶನಗಳಲ್ಲಿ ಮಾತಾಡ್ತಿದ್ದಾರೆ. ಆದ್ರೆ ಬೆಂಗಳೂರಲ್ಲಿ ದರ್ಶನ್ ಇರುವಾಗ ಇದ್ದೂ ಇಲ್ಲದಂತೆ ಇರ್ತಾರೆ. ಯಾರೇನೇ ಅಂದ್ರೂ ಸಹ ನಾವು ಕೋಪ ಮಾಡ್ಕೊಳಲ್ಲ. ಬೇಜಾರ್ ಮಾಡ್ಕೊಳಲ್ಲ. ನೊಂದ್ಕೊಳಲ್ಲ ಅನ್ನೋ ದರ್ಶನ್ ಹಳೇ ಡೈಲಾಗ್ ಕೂಡ ಹೊಡೆದಿದ್ದಾರೆ.
ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಂಡು ನೋಡ್ಕೋತೀರಾ..? ಅಲ್ಲವೇ..? ಸುದೀಪ್ ಅವರು ಡೈರೆಕ್ಟ್ ಆಗಿ ಗಜಪಡೆ ಅಂತ ಹೇಳಿದ್ದರೇ..? ಇಲ್ಲವಲ್ಲ. ಪೈಲ್ವಾನ್ ಸಿನಿಮಾದ ಸಮಯದಲ್ಲಿ ಸಾಕಷ್ಟು ಮಂದಿ ಸಿನಿಮಾಗೆ ಪೈರಸಿ ಮಾಡಿದ್ರು. ಅದ್ರಿಂದ ಕಲೆಕ್ಷನ್‌ಗೆ ಹೊಡೆತ ಬಿದ್ದಿತ್ತು. ಆ ಪೈಕಿ ಪೈರಸಿ ಮಾಡಿದವರು ದರ್ಶನ್ ಫ್ಯಾನ್ಸ್ ಅಂತಲೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದ್ರೆ ಈ ಕಾಲಘಟ್ಟಕ್ಕೆ ಇದೆಲ್ಲಾ ನಿಜಕ್ಕೂ ಬೇಕಾ ಅನ್ನೋದೇ ಯಕ್ಷ ಪ್ರಶ್ನೆ.
‘ಜಂಗಲ್ ಮೇ ಸಿಂಗಲ್ ಶೇರ್.. ನಾಮ್ ಹೇ ಉಸ್ಕಾ ಬಬ್ಬರ್ ಶೇರ್’.. ಈ ಹಾಡು ನಿಮಗೆಲ್ಲಾ ನೆನಪಿದೆ ಅನಿಸುತ್ತೆ. ಇದು ರನ್ನ ಚಿತ್ರದ ಟ್ರಂಪ್‌ಕಾರ್ಡ್ ಸಾಂಗ್. ಇಲ್ಲಿ ಸುದೀಪ್ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಗುಣಗಾನ ಮಾಡುವ ಕಾರ್ಯ ಮಾಡಲಾಗಿತ್ತು. ಅಲ್ಲಿಗೆ ಸಿಂಹ ಸುದೀಪ್ ಅಂತಾಯ್ತು. ಅಷ್ಟೇ ಅಲ್ಲ, ಹೆಬ್ಬುಲಿ ಸಿನಿಮಾ ಮಾಡಿ ಬೆಳ್ಳಿತೆರೆ ಮೇಲೆ ಘರ್ಜಿಸಿ ಹುಲಿ ಕೂಡ ಅವರೇ ಆದ್ರು. ಇದೀಗ ಕಾಡಿನ ರಾಜನ ಬಗ್ಗೆ ದರ್ಶನ್ ಆಪ್ತರಾದ ನಟ ಧನ್ವೀರ್ ಗೌಡ ಮಾತನಾಡಿದ್ದಾರೆ.
ಸುದೀಪ್ ಕೌಂಟರ್.. ವಿಜಯಲಕ್ಷ್ಮೀ ಎನ್‌ಕೌಂಟರ್ ಸ್ಟೇಟ್‌ಮೆಂಟ್‌ಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತೆ. ದರ್ಶನ್ ಜೊತೆಗಿರೋ ಧನ್ವೀರ್ ಫೋಟೋಗೆ ಹಾಡೊಂದನ್ನ ಹಾಕಿ ಇನ್ಸ್‌ಟಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಪ್ರಕಾರ ಕಾಡಿನಲ್ಲಿ ಎಷ್ಟೇ ಪ್ರಾಣಿಗಳಿದ್ರೂ ಸಹ ರಾಜ ಮಾತ್ರ ಸಿಂಹನೇ. ಸಿಂಹ ಸಿಂಗಲ್ ಆಗಿದ್ರೂ ಸಹ ಸಿಂಹನೇ ಎಂದಿದ್ದಾರೆ ಧನ್ವೀರ್. ಈ ಮೂಲಕ ವಿಜಯಲಕ್ಷ್ಮೀ ಸ್ಟೇಟ್‌ಮೆಂಟ್‌ಗೆ ಶಹಬ್ಬಾಸ್‌ಗಿರಿ ವ್ಯಕ್ತಪಡಿಸಿದ್ದಾರೆ ದಚ್ಚು ಆಪ್ತ ಧನ್ವೀರ್.
- Stop ಸ್ಟಾರ್ ವಾರ್, ಫ್ಯಾನ್ಸ್ ವಾರ್.. Start ಪೈರಸಿ ವಾರ್
- ದರ್ಶನ್ ಡೆವಿಲ್ ಚಿತ್ರದ 10,500 ಪೈರಸಿ ಲಿಂಕ್ಸ್ ಡಿಲೀಟ್
- ಪೈರಸಿ ಪೆಡಂಭೂತದಿಂದ ಸ್ಟಾರ್ಸ್ ಜೊತೆ ಇಂಡಸ್ಟ್ರಿಗೆ ಲಾಸ್
- ನಾಯಕತ್ವದ ಕೊರತೆ.. ಹೇಳೋರಿಲ್ಲ.. ಕೇಳೋರಿಲ್ಲ ಗುರು..!!
ನಮ್ಮ ಕನ್ನಡ ಚಿತ್ರರಂಗದಲ್ಲಿ ಇರೋದೇ ಮೂರು ಮತ್ತೊಂದು ಮಂದಿ ಸ್ಟಾರ್ಸ್. ಅಂಥದ್ರಲ್ಲಿ ಅವರುಗಳೇ ಮೂರ್ನಾಲ್ಕು ವರ್ಷಗಳಿಗೆ ಒಂದೊಂದು ಸಿನಿಮಾ ಮಾಡ್ತಾರೆ. ಹೀಗೆಲ್ಲಾ ಇರುವಾಗ ಇದರಲ್ಲಿ ಸ್ಟಾರ್ ವಾರ್, ಸ್ಟಾರ್ ಫ್ಯಾನ್ಸ್ ವಾರ್ ಎಲ್ಲಾ ಬೇಕಾ..? ಇದ್ರಿಂದ ಯಾರಿಗೆ ನಷ್ಟ. ಚಿತ್ರರಂಗಕ್ಕೇನೇ ಅಲ್ಲವೇ..?
ಸದ್ಯ ಎಲ್ಲರೂ ಒಟ್ಟುಗೂಡಿ ಯುದ್ಧ ಮಾಡಬೇಕಿರೋದು ಪೈರಸಿ ಅನ್ನೋ ಪೆಡಂಭೂತದ ಮೇಲೆ. ಹೌದು.. ಬರೀ ಸುದೀಪ್ ಅವರ ಸಿನಿಮಾಗಳಷ್ಟೇ ಪೈರಸಿ ಆಗ್ತಿಲ್ಲ. ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿರೋ ಡೆವಿಲ್ ಸಿನಿಮಾಗೂ ಪೈರಸಿ ಕಾಟ ಜೋರಿದೆ. ಸ್ವತಃ ಡೆವಿಲ್ ಚಿತ್ರದ ನಿರ್ಮಾಪಕರೇ ಸ್ಪಷ್ಟ ಪಡಿಸಿರೋ ಹಾಗೆ, ಇಲ್ಲಿಯವರೆಗೆ ಬರೋಬ್ಬರಿ ಹತ್ತು ಸಾವಿರದ ಐದನೂರು ಪೈರಸಿ ಲಿಂಕ್‌ಗಳನ್ನ ಡಿಲೀಟ್ ಮಾಡಿಸಲಾಗಿದೆ. ದೊಡ್ಡ ಸ್ಟಾರ್‌ಗಳ ದೊಡ್ಡ ಸಿನಿಮಾಗಳು ಬರ್ತಿದ್ದಂತೆ ಅದು ಥಿಯೇಟರ್ ಪ್ರಿಂಟ್‌ಗಳು ಟೊರೆಂಟೋ ಸೇರಿದಂತೆ ಬೇರೆ ಬೇರೆ ವೆಬ್‌ಸೈಟ್‌ಗಳಲ್ಲಿ ಲಭ್ಯ ಆಗ್ತಿವೆ. ಹೀಗಾದ್ರೆ ನಿರ್ಮಾಪಕರ ಕಥೆ ಏನಾಗಬೇಕು..?
ಯುದ್ಧ ಮಾಡಬೇಕಿರೋದು.. ಆಗಲೇಬೇಕಿರೋದು ಪೈರಸಿ ವಿರುದ್ಧ. ಆದ್ರೆ ಆಗ್ತಿರೋದು ಪರಸ್ಪರ ಒಬ್ಬರ ಮೇಲೆ ಮತತೊಬ್ಬರ ಕೆಸರೆರಚಾಟ. ಇದು ನಿಲ್ಲಬೇಕಿದೆ. ನಿಲ್ಲೋಕೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ನಾಯಕತ್ವದ ಕೊರತೆ ಎದ್ದು ಕಾಣ್ತಿದೆ. ಡಾ ರಾಜ್‌ಕುಮಾರ್, ಅಂಬರೀಶ್ ಇದ್ದ ಕಾಲದಲ್ಲಿ ಇಂತಹ ಜಂಜಾಟಗಳಿಗೆ ಆಸ್ಪಾದ ನೀಡ್ತಿರಲಿಲ್ಲ. ಸದ್ಯ ಕಲಾವಿದರ ಸಂಘ ಇದ್ದೂ ಇಲ್ಲದಂತಿದೆ. ಅದರ ನಾಯಕತ್ವ ತೆಗೆದುಕೊಂಡು, ಚಿತ್ರರಂಗವನ್ನು ಮುನ್ನಡೆಸೋ ಮನಸ್ಸು ಯಾರೂ ಮಾಡ್ತಿಲ್ಲ. ಚುನಾವಣೆಗಳು ಆಗಿಲ್ಲ. ಸೋ.. ನಿಜಕ್ಕೂ ಇದು ಹೀಗೆಯೇ ಮುಂದುವರೆದರೆ ಚಿತ್ರರಂಗದ ಗತಿ ಅಧೋಗತಿ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





