ಕಿಚ್ಚ-ದಚ್ಚು.. ಒಂದು ಕಾಲದ ಕುಚಿಕು ಗೆಳೆಯರು. ಅದ್ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ.. ನಾನೊಂದು ತೀರ, ನೀನೊಂದು ತೀರ ಅನ್ನುವಂತಾಗಿದೆ ಇವ್ರ ಗೆಳೆತನ. ಸದ್ಯ ಒಂದು ಖುಷಿ ವಿಚಾರ ಏನಪ್ಪಾಂದ್ರೆ ಒಂದೇ ಕಡೆ ಸುದೀಪ್-ದರ್ಶನ್ ಸಿನಿಮಾಗಳ ಶೂಟಿಂಗ್ ನಡೆದಿದೆ. ಬಿಲ್ಲ-ಡೆವಿಲ್ ಸೆಟ್‌ಗಳಲ್ಲಿ ಅಂಥದ್ದೇನಾದ್ರು ನಡೀತಾ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ.
- ಒಂದೇ ಕಾಂಪೌಂಡ್‌ನಲ್ಲಿ ಕಿಚ್ಚ-ದಚ್ಚು ಸಿನಿಮಾ ಶೂಟಿಂಗ್
- ಕಂಠೀರವ ಸ್ಟುಡಿಯೋದಲ್ಲಿ ಬಿಲ್ಲ- ಡೆವಿಲ್ ಚಿತ್ರಗಳ ಸೆರೆ..!!
- ಕುಚಿಕು ಗೆಳೆಯರು ಮಾತಾಡ್ಕೊಂಡ್ರಾ? ಇಷ್ಟಕ್ಕೂ ಆಗಿದ್ದೇನು?
- ಒಂದು ಫೈಟ್.. 2 ಸಾಂಗ್ ಮುಗಿದ್ರೆ ‘ಡೆವಿಲ್’ ಕಂಪ್ಲೀಟ್..!
ಓ ಗೆಳೆಯಾ.. ಜೀವದ್ ಗೆಳೆಯಾ.. ದಿಗ್ಗಜರ ಈ ಹಾಡು ಕೇಳಿದಾಕ್ಷಣ ಅಂಬರೀಶ್ ಹಾಗೂ ವಿಷ್ಣುವರ್ಧನ್ ನೆನಪಾಗ್ತಾರೆ. ಆದ್ರೆ ಅದರ ನೆಕ್ಸ್ಟ್ ಜನರೇಷನ್‌ಗೆ ಸುದೀಪ್ ಹಾಗೂ ದರ್ಶನ್ ನೆನಪಾಗ್ತಾರೆ. ಕಾರಣ ಅಂತಹ ಸ್ನೇಹ, ಸಂಬಂಧದ ಮೂಲಕ ಒಳ್ಳೆಯ ನೆನಪುಗಳನ್ನ ಕಟ್ಟಿದ್ರು ಈ ಕುಚಿಕುಗಳು. ಅದಕ್ಕೆ ಸಾವಿರಾರು ವಿಡಿಯೋಗಳು, ವೇದಿಕೆಗಳು, ಸಮಾರಂಭಗಳು ಸಾಕ್ಷಿ ಕೂಡ ಆಗಿವೆ.
ಆದ್ರೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅವರಿಬ್ಬರ ಸ್ನೇಹದಲ್ಲಿ ಅದ್ಯಾರು ಹುಳಿ ಹಿಂಡಿದ್ರೋ ಗೊತ್ತಿಲ್ಲ. ಸದ್ಯ ಉತ್ತರ, ದಕ್ಷಿಣ ಧ್ರುವಗಳಂತೆ ಇಬ್ಬರೂ ತಾನಾಯ್ತು ತನ್ನ ಪ್ರಪಂಚವಾಯ್ತು ಅಂತ ಒಬ್ಬರಿಗೊಬ್ಬರ ಸಹವಾಸವೇ ಬೇಡ ಅಂತ ಪರ್ಸನಲ್ ಹಾಗೂ ಪ್ರೊಫೆಷನಲ್ ಜೀವನ ನಡೆಸ್ತಿದ್ದಾರೆ.
ಅಂದಹಾಗೆ ಇವರಿಬ್ಬರೂ ಒಟ್ಟಾಗಬೇಕು ಅನ್ನೋದು ಕಿಚ್ಚ-ದಚ್ಚು ಇಬ್ಬರೂ ಫ್ಯಾನ್ಸ್‌ಗಿದೆ. ಇಂಡಸ್ಟ್ರಿಗೂ ಅದರ ಅನಿವಾರ್ಯತೆ ಇದೆ. ಆದ್ರೆ ಅದು ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ.
ಹೀಗಿರುವಾಗ ಒಂದೇ ಕಡೆ ಸುದೀಪ್‌ರ ಬಿಲ್ಲ ರಂಗ ಬಾಷ ಹಾಗೂ ದರ್ಶನ್‌ರ ಡೆವಿಲ್ ಸಿನಿಮಾಗಳು ಒಟ್ಟೊಟ್ಟಿಗೆ ಶೂಟಿಂಗ್ ಕಂಡಿವೆ. ಹೀಗಿದ್ದುಕೊಂಡು ಅವರಿಬ್ಬರೂ ಮಾತಾಡಿಕೊಂಡಿಲ್ವಾ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ. ಹೌದು.. ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಬಾಷ ಹಾಗೂ ಮಿಲನ ಪ್ರಕಾಶ್ ಆ್ಯಕ್ಷನ್ ಕಟ್ ಹೇಳ್ತಿರೋ ಡೆವಿಲ್- ದಿ ಹೀರೋ ಸಿನಿಮಾಗಳು ಕಂಠೀರವ ಸ್ಟುಡಿಯೋದಲ್ಲಿ ಬೇರೆ ಬೇರೆ ಫ್ಲೋರ್‌ಗಳಲ್ಲಿ ಚಿತ್ರೀಕರಣ ಕಂಡಿವೆ.
ಸಾಮಾನ್ಯವಾಗಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಶೂಟಿಂಗ್ ನಡೆಯುತ್ತಿರೋ ಆಸುಪಾಸಿನಲ್ಲಿ ಬೇರೆ ಯಾವುದೇ ಸ್ಟಾರ್ ಅಥ್ವಾ ನ್ಯೂ ಕಮರ್ ಸಿನಿಮಾ ಶೂಟಿಂಗ್ ನಡೀತಿದ್ರೂ ಅಲ್ಲಿಗೊಂದು ವಿಸಿಟ್ ಹಾಕ್ತಿದ್ರು. ಆದ್ರೀಗ ಇಲ್ಲಿ ಅಂತಹ ಬೆಳವಣಿಗೆ ಕಂಡಿಲ್ಲ. ಕಿಚ್ಚ-ದಚ್ಚುನ ಭೇಟಿ ಮಾಡಿಸೋ ಅಂತಹ ಸಾಹಸ ಯಾವುದೇ ಮೂರನೇ ವ್ಯಕ್ತಿ ಮಾಡಿಲ್ಲ. ಮುನಿಸು ಮರೆತು ಮಾತನಾಡುವ ಮನಸ್ಸು ಹಳೆಯ ಕುಚಿಕುಗಳು ಕೂಡ ಮಾಡಿಲ್ಲ.
ಅಂದಹಾಗೆ ದರ್ಶನ್‌ಗೆ ಕಾನೂನಿನ ತೊಡಕಿದೆ. ಕೊಲೆಯೊಂದರ ಆರೋಪಿ ಆಗಿರೋ ದರ್ಶನ್‌ನ ಸುದೀಪ್ ಮೀಟ್ ಮಾಡಿಲ್ಲ. ದಚ್ಚು ಕೂಡ ಇಂತಹ ಕಳಂಕ ಹೊತ್ತು ಭೇಟಿ ಮಾಡುವುದು ಯಾಕೆ ಅಂತ ಸುಮ್ಮನಿದ್ದಿರಬಹುದು. ಆದ್ರೆ ಇವರುಗಳು ಆದಷ್ಟು ಬೇಗ ಒಂದಾಗಲಿ ಅನ್ನೋದು ನಮ್ಮ ಆಶಯ. ಇನ್ನು ಡೆವಿಲ್ ಸಿನಿಮಾದಿಂದ ಎರಡು ದಿನ ಬ್ರೇಕ್ ಪಡೆದಿದ್ದ ದರ್ಶನ್, ವೆಡ್ಡಿಂಗ್ ಆ್ಯನಿವರ್ಸರಿ ಹಾಗೂ ಅಮ್ಮನ ಬರ್ತ್ ಡೇ ಮುಗಿಸಿ, ಇಂದಿನಿಂದಲೇ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಹೆಚ್‌ಎಂಟಿನಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಈ ವಾರದಲ್ಲಿ ಟಾಕಿ ಪೋರ್ಷನ್ ಮುಗಿಸಿ, ಮುಂದಿನ ವಾರದಿಂದ ಬಾಕಿ ಉಳಿದಿರೋ ಎರಡು ಸಾಂಗ್ ಹಾಗೂ ಒಂದು ಆ್ಯಕ್ಷನ್ ಬ್ಲಾಕ್‌ನ ಚಿತ್ರಿಸೋ ಯೋಜನೆಯಲ್ಲಿದ್ದಾರಂತೆ ಡೈರೆಕ್ಟರ್ ಮಿಲನ ಪ್ರಕಾಶ್. ಬಹುತೇಕ ಜೂನ್ ಎಂಡ್ ಒಳಗೆ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿ, ಕುಂಬಳಕಾಯಿ ಒಡೆಯಲಿದೆ.