ರಾಜಮೌಳಿಯ ಸಿನಿಮಾಗಳಲ್ಲಿ ಸ್ಟಾರ್ ನಟರ ಲುಕ್ಸ್ ಬಗ್ಗೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಕುತೂಹಲ. ಹೌದು.. ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಕಟ್ಟುವ ಮೌಳಿ, ಈ ಬಾರಿಯ SSMB29 ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಫ್ರೆಶ್ ಲುಕ್ ನೀಡಿದ್ದಾರೆ. ಅದ್ರ ಎಕ್ಸ್‌ಕ್ಲೂಸಿವ್ ಝಲಕ್ ಜೊತೆ ಸಿನಿಮಾದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ಲಾಂಗ್ ಹೇರ್‌ನಲ್ಲಿ ಪ್ರಿನ್ಸ್.. ಮೌಳಿ SSMB29 ಲುಕ್ ರಿವೀಲ್
- ಎರಡು ಭಾಗ ಇರಲ್ಲ.. 1000ಕೋಟಿ ಬಜೆಟ್‌ನಲ್ಲಿ ಒಂದೇ ಚಿತ್ರ
- ಪ್ರಿನ್ಸ್ ಮಹೇಶ್ ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ಕಮಾಲ್
- ಕಾಶಿಯಲ್ಲಿ ಟ್ರಾವೆಲ್ ಅಡ್ವೆಂಚರ್ ಥ್ರಿಲ್ಲರ್ ಚಿತ್ರದ ಅದ್ಧೂರಿ ಸೆಟ್
ಯಮದೊಂಗ ಚಿತ್ರದ ಜೂನಿಯರ್ ಎನ್‌ಟಿಆರ್, ಮಗಧೀರದಲ್ಲಿನ ರಾಮ್ ಚರಣ್ ತೇಜಾ, ತ್ರಿಬಲ್ ಆರ್ ಸಿನಿಮಾದ ತಾರಕ್-ಚರಣ್ ಹಾಗೂ ಬಾಹುಬಲಿಯ ಪ್ರಭಾಸ್.. ಇವರೆಲ್ಲರ ಲುಕ್ಸ್ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಸಿನಿಮಾಗಾಗಿ ಪ್ರತಿ ಬಾರಿಯೂ ಹೊಸ ಪ್ರಪಂಚವನ್ನೇ ಸೃಷ್ಟಿಸೋ ರಾಜಮೌಳಿ, ಅದರೊಳಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗ್ತಾರೆ. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗರನ್ನ ಆವರಿಸುತ್ತೆ.
ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳ ಬಳಿಕ ರಾಜಮೌಳಿಯ ಸ್ಟಾರ್ಡಮ್, ಆಲೋಚನಾ ಲಹರಿ, ಫಿಲ್ಮ್ ಮೇಕಿಂಗ್ ಸ್ಟೈಲ್ ಎಲ್ಲವೂ ಬದಲಾಗಿದೆ. ಕಾಲಕ್ಕೆ ತಕ್ಕನಾಗಿ ಅಪ್ಡೇಟ್ ಆಗ್ತಿರೋ ರಾಜಮೌಳಿ, ಈ ಬಾರಿಯ ಮಹೇಶ್ ಬಾಬು ಜೊತೆಗಿನ SSMB29 ಚಿತ್ರವನ್ನ ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಮಾಡ್ತಿದ್ದಾರೆ. ಇಲ್ಲಿಯವರೆಗೂ ಅಂತೆ ಕಂತೆಗಳ ಆಗರ ಆಗಿತ್ತು SSMB29. ಆದ್ರೀಗ ಮಹೇಶ್ ಬಾಬು ಲುಕ್ ಅದರಲ್ಲಿ ಹೇಗಿರಲಿದೆ ಅನ್ನೋದು ಬಹಿರಂಗವಾಗಿದೆ.
ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡದೊಂದಿಗೆ ಪ್ರಿನ್ಸ್ ಮಿಂಚಲಿದ್ದಾರೆ. ಪ್ರಿನ್ಸ್ ಮಹೇಶ್‌ನ ಜನ ಯಾವಾಗ್ಲೂ ಮಿಲ್ಕಿ ಬಾಯ್ ರೀತಿ ಶಾರ್ಟ್ ಹೇರ್ ಹಾಗೂ ಕ್ಲೀನ್ ಶೇವ್‌ನಲ್ಲಿ ನೋಡ್ತಿದ್ರು. ಆದ್ರೀಗ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹವನ್ನು ಹುರಿಗೊಳಿಸಿರೋ ಬಾಬು, ಲಾಂಗ್ ಹೇರ್‌ನಲ್ಲಿ ಸಂಥಿಂಗ್ ಡಿಫರೆಂಟ್ ಆಗಿ ಕಾಣ್ತಿದ್ದಾರೆ. ಆ ನ್ಯೂ ಫ್ರೆಶ್ ಲುಕ್ ಫ್ಯಾನ್ಸ್‌ಗೂ ಇಷ್ಟವಾಗಿದ್ದು, ಎಲ್ಲವೂ ವ್ಹಾವ್ ಅಂತ ಹುಬ್ಬೇರಿಸಿ ನೋಡ್ತಿದ್ದಾರೆ.
ಅಂದಹಾಗೆ SSMB29 ಸಿನಿಮಾ ಸಾವಿರ ಕೋಟಿ ಬಜೆಟ್‌ನಲ್ಲಿ ತಯಾರಾಗ್ತಿದ್ದು, ಈ ಹಿಂದೆ ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗಿತ್ತು. ಆದ್ರೀಗ ಸಿನಿಮಾ ಒಂದೇ ಭಾಗದಲ್ಲಿ ಬರಲಿದೆ ಅನ್ನೋದನ್ನ ಸ್ವತಃ ರಾಜಮೌಳಿಯೇ ಖಚಿತಪಡಿಸಿದ್ದಾರೆ. ಮಹೇಶ್ ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ಕೂಡ ಶೂಟಿಂಗ್ ಸೆಟ್‌ನಲ್ಲಿ ಭಾಗಿಯಾಗಿದ್ದನ್ನ ಅವರೇ ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ರು. ಎರಡು ಶೆಡ್ಯೂಲ್ ಮುಗಿಸಿ, ಸಣ್ಣದೊಂದು ಬ್ರೇಕ್ ಪಡೆದಿದ್ದ ಟೀಂ, ಇದೀಗ ಜೂನ್ ಮೊದಲ ವಾರದಿಂದ ಮತ್ತೆ ಶೂಟಿಂಗ್ ಕಿಕ್‌ಸ್ಟಾರ್ಟ್ ಮಾಡ್ತಿದೆ.
ಟ್ರಾವೆಲ್ ಆ್ಯಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾ ಇಂಡಿಯಾನಾ ಜೋನ್ಸ್ ಶೈಲಿಯಲ್ಲಿ ಇರಲಿದ್ದು, ಪ್ರಪಂಚದ ಎಲ್ಲಾ ಚಿತ್ರರಂಗಗಳಿಗೂ ರುಚಿಸುವಂತೆ ಕಟ್ಟಿಕೊಡ್ತಿದ್ದಾರೆ ರಾಜಮೌಳಿ.
ಹನುಮಂತನನ್ನ ರೆಫರೆನ್ಸ್ ಆಗಿ ಇಟ್ಕೊಂಡು ಚಿತ್ರ ಮಾಡ್ತಿರೋ ಮೌಳಿ, ಸರ್ವಾಂತರ್ಯಾಮಿಯಾಗಿ ಪ್ರಿನ್ಸ್‌ನ ತೋರಿಸಲಿದ್ದಾರೆ ಎನ್ನಲಾಗ್ತಿದೆ. ಪೃಥ್ವಿರಾಜ್ ಸುಕುಮಾರನ್ ಕೂಡ ಚಿತ್ರದಲ್ಲಿ ಖಡಕ್ ಖಳನಾಯಕನಾಗಿ ಬಣ್ಣ ಹಚ್ಚಿದ್ದು, ಇಲ್ಲಿಯವರೆಗೆ ಸಿನಿಮಾ ಬಗ್ಗೆ ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ ಡೈರೆಕ್ಟರ್ ರಾಜಮೌಳಿ. ಮೂಲಗಳ ಪ್ರಕಾರ SSMB29 ಸಿನಿಮಾ 2027ರ ಸಮ್ಮರ್‌ಗೆ ಥಿಯೇಟರ್‌ಗೆ ಲಗ್ಗೆ ಇಡಲಿದೆಯಂತೆ.