ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಬರ್ತ್ ಡೇ ಸಂಭ್ರಮ. ಫ್ಯಾನ್ಸ್ ಜೊತೆ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿಕೊಂಡ ಉಗ್ರಂ ಸ್ಟಾರ್, ಒಂದಲ್ಲ ಎರಡೆರಡು ಗಿಫ್ಟ್‌ಗಳನ್ನ ನೀಡಿದ್ದಾರೆ. ಆ ಪೈಕಿ ಉಗ್ರಾಯುಧಂ ಫಸ್ಟ್‌ಲುಕ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ.. ಕನ್ನಡದ ಮಾಸ್ ಹೀರೋಗಳಲ್ಲಿ ಒಬ್ಬರು. ಬಘೀರ ಸಿನಿಮಾದ ಬಳಿಕ ಪರಾಕ್ ಹಾಗೂ ಉಗ್ರಾಯುಧಮ್ ಅನ್ನೋ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ ಇರೋ ಮುರಳಿ, ಇಂದು 42ನೇ ಬರ್ತ್ ಡೇನ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ, ಹುಟ್ಟು ಹಬ್ಬವನ್ನ ಬಹಳ ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ.
ಮಗಧೀರ ಸ್ಟೈಲ್.. ಉಗ್ರಾಯುಧಂ ಹಿಡಿದ ರೋರಿಂಗ್ ಸ್ಟಾರ್
ಯೋಧನ ಲುಕ್‌ನಲ್ಲಿ ಶ್ರೀಮುರಳಿ.. ಫ್ಯಾನ್ಸ್‌ಗೆ ಡಬಲ್ ಗಿಫ್ಟ್..!!
ಬರ್ತ್ ಡೇ ಗಿಫ್ಟ್ ಆಗಿ ಉಗ್ರಾಯುಧಮ್ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ವೀರ ಯೋಧನಂತೆ ರಕ್ಷಾ ಕವಚ ಧರಿಸಿ, ಕತ್ತಿ ಹಿಡಿದು ಯುದ್ಧಕ್ಕೆ ಹೊರಟು ನಿಂತ ಪೋಸ್ಟರ್ ಕಣ್ಣು ಕುಕ್ಕುವಂತಿದೆ. ಅಂದಹಾಗೆ ಉಗ್ರಾಯುಧಮ್ ಚಿತ್ರದ ಈ ಲುಕ್ ಸಿಕ್ಕಾಪಟ್ಟೆ ಕಿಕ್ ಕೊಡೋಕೆ ಕಾರಣ ಮಗಧೀರ ಸಿನಿಮಾ.
ಯೆಸ್.. ರಾಜಮೌಳಿ ನಿರ್ದೇಶನದ ಮಗಧೀರ ಚಿತ್ರದಲ್ಲಿ ಥೇಟ್ ರಾಮ್ ಚರಣ್ ತೇಜಾ ರೀತಿ ಕಾಣ್ತಿರೋ ಶ್ರೀಮುರಳಿ, ದೊಡ್ಡದಾಗೇ ಸೌಂಡ್ ಮಾಡೋ ಮುನ್ಸೂಚನೆ ನೀಡಿದ್ದಾರೆ. ಮಗಧೀರ ಬಹುದೊಡ್ಡ ಹಿಟ್ ಆಗಿರೋದ್ರಿಂದ ಮುರಳಿ ಪಾತ್ರ ಚರಣ್ ಪಾತ್ರದ ರೀತಿಯ ಕಾಸ್ಟ್ಯೂಮ್ ಇರೋದ್ರಿಂದ ಸದ್ಯ ಸಿಕ್ಕಾಪಟ್ಟೆ ಸುದ್ದಿ ಆಗ್ತಿದೆ.
ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಷನ್
ಪರಾಕ್ ಜೊತೆ ಉಗ್ರಾಯುಧಂ.. ಬ್ಯಾಕ್ ಟು ಬ್ಯಾಕ್ ಧಮಾಕ
ಅಂದಹಾಗೆ ಈ ಸಿನಿಮಾಗೆ ಪುನೀತ್ ರುದ್ರನಾಗ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಪ್ರಶಾಂತ್ ನೀಲ್ ಗರಡಿಯಲ್ಲಿ ಪಳಗಿರೋ ಪುನೀತ್, ತುಂಬಾ ಕ್ರಿಯೇಟೀವ್ ಆಗಿ ಪ್ಲ್ಯಾನ್ ಮಾಡಿದ್ದಾರೆ. ಈ ಹಿಂದೆ ಯುವರಾಜ್‌ಕುಮಾರ್ ಲಾಂಚ್‌ಗಾಗಿ ಒಂದು ವಿಶೇಷ ವಿಡಿಯೋ ಶೂಟ್ ಮಾಡಿದ್ರು ಪುನೀತ್ ರುದ್ರನಾಗ್. ಅದೂ ಕೂಡ ಕೋಟೆ ಕೊತ್ತಲುಗಳಿಂದ ಕೂಡಿದ ಯುವ ರಣಧೀರ ಕಂಠೀರವ ಚಿತ್ರವಾಗಿತ್ತು. ಅದು ಕಾರಣಾಂತರಗಳಿಂದ ಡ್ರಾಪ್ ಆಯ್ತು. ಹಾಗಾಗಿ ಶ್ರೀಮುರಳಿಯ ಉಗ್ರಾಯುಧಮ್ ಪುನೀತ್ ರುದ್ರನಾಗ್‌ಗೆ ಚೊಚ್ಚಲ ಚಿತ್ರವಾಗಲಿದೆ.
2026ರಲ್ಲಿ ಒಂದೊಳ್ಳೆ ಸಿನಿಮಾದಿಂದ ಪ್ರೇಕ್ಷಕರ ಮುಂದೆ ಬರೋಕೆ ಮನಸ್ಸು ಮಾಡಿರೋ ಶ್ರೀಮುರಳಿ, ಲುಕ್ ಕೂಡ ಬದಲಿಸಿದ್ದಾರೆ. ದೊಡ್ಡದಾದ ಗಡ್ಡ, ಉದ್ದನೆಯ ಕೂದಲಿನಿಂದ ಮಿಂಚುತ್ತಿದ್ದಾರೆ. ಉಗ್ರಂ, ಮಫ್ತಿ ಚಿತ್ರಗಳ ನಂತ್ರ ಮತ್ಯಾವ ಸಿನಿಮಾಗಳೂ ಹೇಳಿಕೊಳ್ಳುವಂತಹ ಸಕ್ಸಸ್ ಕಾಣಲಿಲ್ಲ. ಸೋ.. ಪರಾಕ್ ಹಾಗೂ ಉಗ್ರಾಯುಧಮ್ ಆ ನಿರೀಕ್ಷಿತ ಸಕ್ಸಸ್‌ನ ತಂದುಕೊಡಲಿವೆಯಾ ಅನ್ನೋದನ್ನ ಕಾದು ನೋಡಬೇಕಿದೆ. ಹ್ಯಾಪಿ ಬರ್ತ್ ಡೇ ರೋರಿಂಗ್ ಸ್ಟಾರ್.





