ಬಾಲಿವುಡ್ ಅಂಗಳದಲ್ಲಿ ಮಾಸ್ ಸಿನಿಮಾಗಳ ಅಬ್ಬರದ ನಡುವೆ ಲವ್ ಸ್ಟೋರಿಯೊಂದು ತನ್ನ ಕಂಟೆಂಟ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರ ದಿಲ್ ದೋಚಿರೋ ಸೈಯಾರ, ಜಸ್ಟ್ ಫೈವ್ ಡೇಸ್‌ನಲ್ಲಿ ಬರೋಬ್ಬರಿ 150 ಕೋಟಿ ಪೈಸಾ ವಸೂಲ್ ಮಾಡಿದೆ. ಇಷ್ಟಕ್ಕೂ ಅಂಥದ್ದೇನಿದೆ ಚಿತ್ರದಲ್ಲಿ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- 5 ದಿನಕ್ಕೆ 150 ಕೋಟಿ.. ಯೂತ್ ನಿದ್ದೆ ಕೆಡಿಸಿದ ‘ಸೈಯಾರ’
- ಅಬ್ಬರ, ಆಡಂಬರ ಇಲ್ಲದ ಸಿಂಪಲ್ ಇಂಟೆನ್ಸ್ ಪ್ರೇಮಕಥೆ
- ಸೈಯಾರಗೆ ಹೆದರಿ ಬಾಲಿವುಡ್ ಚಿತ್ರಗಳು ಪೋಸ್ಟ್‌ಪೋನ್
- ಪ್ರೇಕ್ಷಕರ ಕಣ್ಣು & ಹೃದಯ ಆವರಿಸಿದ ಅಹಾನ್-ಅನೀತ್
ಸೈಯಾರ.. ಇಂಟೆನ್ಸ್ ಲವ್ ಸ್ಟೋರಿ ಕಥೆಯುಳ್ಳ ಸಿನಿಮಾ. ಕಳೆದ ವಾರ ಅಂದ್ರೆ ಜುಲೈ 18ರಂದು ತೆರೆಕಂಡ ಈ ಬಾಲಿವುಡ್ ಮೂವಿ, ಎಲ್ಲರ ಹುಬ್ಬೇರಿಸ್ತಿದೆ. ಅದಕ್ಕೆ ಕಾರಣ ಚಿತ್ರದ ಕಥೆ, ಪಾತ್ರಗಳು ಹಾಗೂ ಅದರಲ್ಲಿ ಅಡಗಿರೋ ಆಳವಾದ ಪ್ರೀತಿ, ಅದ್ರ ಸುತ್ತಲಿನ ಎಮೋಷನ್ಸ್. ಹೌದು.. ಬಹುಶಃ ಆಶಿಕಿ-2 ಚಿತ್ರದ ಬಳಿಕ ಅದೇ ಫ್ಲೇವರ್‌ನಲ್ಲಿ ಬಂದಿರೋ ಮತ್ತೊಂದು ಸಿಂಗರ್‌ಗಳ ಕುರಿತ ಬ್ಯೂಟಿಫುಲ್ ಪ್ರೇಮ್ ಕಹಾನಿ ಇದು.
ಸೈಯಾರ ತೆರೆಕಂಡ ಐದೇ ದಿನದಲ್ಲಿ ಬರೋಬ್ಬರಿ 150 ಕೋಟಿ ಬಾಕ್ಸ್ ಆಫೀಸ್ ಗಳಿಸಿದೆ ಅಂದ್ರೆ ನೀವು ನಂಬಲೇಬೇಕು. ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಸಹೋದರ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಸೈಯಾರ ನೋಡುಗರನ್ನ ಅಕ್ಷರಶಃ ಸೈಕ್ ಮಾಡ್ತಿದೆ. ಅದ್ರಲ್ಲೂ ಯೂತ್‌ಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ. ಕ್ಲೈಮ್ಯಾಕ್ಸ್ ಮುಗಿಯೋಕೆ ಮುನ್ನವೇ ಸ್ಕ್ರೀನ್ ಮುಂದೆ ತಮ್ಮ ಎಮೋಷನ್ಸ್‌ನ ವ್ಯಕ್ತಪಡಿಸ್ತಿದ್ದಾರೆ.
ಬಿಗ್ ಸ್ಟಾರ್‌ಗಳ ಬಿಗ್ ಬಜೆಟ್ ಮಾಸ್ ಸಿನಿಮಾಗಳೇ ಮಕಾಡೆ ಮಲಗ್ತಿರೋ ಈ ಕಾಲಘಟ್ಟದಲ್ಲಿ ಈ ಹೊಸ ಪ್ರತಿಭೆಗಳ ಎಕ್ಸ್‌ಪೆರಿಮೆಂಟ್ ವರ್ಕ್ ಆಗಿದೆ. ಸಿನಿಮಾ ತೆರೆಕಂಡ ಐದೇ ದಿನದಲ್ಲಿ 150 ಕೋಟಿ ಗಳಿಸಿದ ಚಿತ್ರವನ್ನು ಕಂಡು, ಜುಲೈ 25ಕ್ಕೆ ತೆರೆಗೆ ಬರೋಕೆ ಸಜ್ಜಾಗಿದ್ದ ಸನ್ ಆಫ್ ಸರ್ದಾರ್-2, ಶ್ರೀಲೀಲಾ-ಕಾರ್ತಿಕ್ ಆರ್ಯನ್‌ನ ಆಶಿಕಿ-3, ಅಂದಾಜ್-2 ಚಿತ್ರಗಳು ರಿಲೀಸ್ ಡೇಟ್‌ನ ಪೋಸ್ಟ್‌ಪೋನ್ ಮಾಡಿಕೊಂಡಿವೆ. ಅಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಿದೆ ಸೈಯಾರ.
ಅಹಾನ್-ಅನೀತ್ ಕೆಮಿಸ್ಟ್ರಿ ನೋಡುಗರ ಎದೆಗೆ ನಾಟುತ್ತಿದ್ದು, ಹದಿಹರೆಯದ ಮನಸ್ಸುಗಳನ್ನ ಬಡಿದೆಬ್ಬಿಸಿದೆ ಸೈಯಾರ. ಹಾಗಾಗಿಯೇ ಕಾಲೇಜ್ ಹಾಗೂ ಹೈಸ್ಕೂಲ್ ಹುಡುಗರು ಈ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ವೀಕ್ಷಿಸುತ್ತಿದ್ದಾರೆ. ಲಿಪ್‌ಕಿಸ್, ಹಗ್ ಸೇರಿದಂತೆ ಹಸಿಬಿಸಿ ದೃಶ್ಯಗಳ ಜೊತೆ ಒಂದಷ್ಟು ಒಳ್ಳೆಯ ರೊಮ್ಯಾಂಟಿಕ್ ಸಾಂಗ್ಸ್ ಹಾಗೂ ಎಮೋಷನಲ್ ದೃಶ್ಯಗಳಿಂದ ನೋಡುಗರ ದಿಲ್ ದೋಚುತ್ತಿದೆ ಸೈಯಾರ. ಈ ಸೈಯಾರ ಬಾಕ್ಸ್ ಆಫೀಸ್ ನಾಗಾಲೋಟ ಕಂಡು ಸಿನಿಪಂಡಿತರೆಲ್ಲಾ ನಿಬ್ಬೆರಗಾಗಿದ್ದಾರೆ. ಸೈ ಸೈ ಸೈಯಾರ ಅಂತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್