ಕಿಚ್ಚ-ದಚ್ಚು ಸ್ಟಾರ್ ವಾರ್‌ಗೆ ಸ್ವತಃ ಬಾದ್‌ಷಾ ಸುದೀಪ್ ಅವರೇ ಫುಲ್‌ಸ್ಟಾಪ್ ಇಟ್ಟರು. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಟಾರ್‌ವಾರ್‌ಗೆ ನಾಂದಿ ಹಾಡ್ತಿದೆ ಮೋಸ್ಟ್ ಎಕ್ಸ್‌ಪೆಕ್ಟೆಡ್ 45 ಮೂವಿ. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಫ್ಯಾನ್ಸ್ ನಡುವೆ ಬಿರುಕು ಮೂಡಿದ್ದು, ಇಬ್ಬರೂ ಸೆಪರೇಟ್ ಆಗಿ ಸೆಲೆಬ್ರೇಷನ್‌ಗೆ ಸಜ್ಜಾಗಿದ್ದಾರೆ. ಈ ಕುರಿತ ಎಕ್ಸ್‌ಕ್ಲೂಸಿವ್ ಖಬರ್ ನಿಮ್ಮ ಮುಂದೆ.
ಚಿತ್ರರಂಗ ಅಂದ್ಮೇಲೆ ಸ್ಟಾರ್ ವಾರ್ ಅಥ್ವಾ ಸ್ಟಾರ್‌ಗಳ ಫ್ಯಾನ್ಸ್ ವಾರ್ ಸರ್ವೇ ಸಾಮಾನ್ಯ. ಆದ್ರೆ ಅದು ಒಳ್ಳೆಯ ಸಿನಿಮಾಗಳ ವಿಚಾರಕ್ಕೆ ಇರಬೇಕೇ ಹೊರತು ವೈಯಕ್ತಿಕ ಆಗಬಾರದು. ಇತ್ತೀಚೆಗೆ ಕಿಚ್ಚ-ದಚ್ಚು ನಡುವಿನ ಸ್ಟಾರ್ ವಾರ್ ಹಾಗೂ ಅವ್ರ ಫ್ಯಾನ್ಸ್ ವಾರ್‌ನ ನಾವು ನೋಡಿದ್ವಿ. ಅದಕ್ಕೆ ಖುದ್ದು ಬಾದ್‌ಷಾ ಕಿಚ್ಚ ಸುದೀಪ್ ಅವರೇ ಇತಿಶ್ರೀ ಹಾಡಿದ್ರು. ನನ್ನ ಯುದ್ಧ ಪೈರಸಿ ಮಾಡುವವರ ವಿರುದ್ಧ. ವಿಜಯಲಕ್ಷ್ಮೀ ಅವರ ನೋವು ಏನಿದೆಯೋ..? ಯಾರ ಮೇಲೋ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ಅಂತ ಎಲ್ಲಕ್ಕೂ ಫುಲ್‌ಸ್ಟಾಪ್ ಇಟ್ಟರು.

ಕಿಚ್ಚ-ದಚ್ಚು ಸ್ಟಾರ್ ವಾರ್ ಅಂತ್ಯ.. ಶಿವಣ್ಣ-ಉಪ್ಪಿ ವಾರ್ ಶುರು
ತ್ರಿವೇಣಿಯಲ್ಲಿ ಶಿವಣ್ಣ.. ನವರಂಗ್‌ನಲ್ಲಿ ಉಪ್ಪಿ.. DJ ಧಮಾಕ..!
ಆದ್ರೀಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೊಂದು ಬಿಗ್ ಸ್ಟಾರ್‌ವಾರ್‌ಗೆ ನಾಂದಿ ಹಾಡ್ತಿದೆ ಮತ್ತೊಂದು ಬಿಗ್ ಮಲ್ಟಿ ಸ್ಟಾರರ್ ಮೂವಿ. ಅದೇ 45. ಯೆಸ್.. ಅರ್ಜುನ್ ಜನ್ಯ ನಿರ್ದೇಶನದ, ರಮೇಶ್ ರೆಡ್ಡಿ ನಿರ್ಮಾಣದ 45 ಮೂವಿಯಲ್ಲಿ ನಮ್ಮ ಕನ್ನಡದ ಅತ್ಯದ್ಭುತ ಕಲಾವಿದರುಗಳಾದ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರೋದು ಗೊತ್ತೇಯಿದೆ. ಇದೀಗ ಆ ಸಿನಿಮಾ ರಿಲೀಸ್‌ಗೂ ಮೊದಲೇ ಶಿವಣ್ಣ-ಉಪ್ಪಿ ಫ್ಯಾನ್ಸ್ ನಡುವೆ ವಾರ್ ಶುರುವಾದಂತಿದೆ.

ಒಂದೇ ಚಿತ್ರದಲ್ಲಿ ನಟಿಸಿದ ಸ್ಟಾರ್‌ಗಳಿಗೆ ಪ್ರತ್ಯೇಕ ಡಿಜೆ ಏತಕ್ಕೆ..?!
ಪರಸ್ಪರ ಮಾತುಕತೆ ಮೂಲಕ ಮಾಡ್ತಿದ್ರೆ ಓಕೆ..ಇಲ್ಲ ಅಂದ್ರೆ ಕಷ್ಟ
ಅದಕ್ಕೆ ಪುಷ್ಠಿ ನೀಡುವಂತೆ ಶಿವಣ್ಣನ ಅಭಿಮಾನಿಗಳು ಮೆಜೆಸ್ಟಿಕ್‌ನ ತ್ರಿವೇಣಿ ಚಿತ್ರಮಂದಿರದಲ್ಲಿ ಡಿಸೆಂಬರ್ 24ರ ಸಂಜೆ 5 ಗಂಟೆಯಿಂದಲೇ ಡಿಜೆ ನೈಟ್ ನಡೆಸ್ತಿದ್ದಾರೆ. ರಾತ್ರಿ ಏಳೂವರೆವರೆಗೂ ನಡೆಯಲಿರೋ ಡಿಜೆ ನೈಟ್‌ನಲ್ಲಿ ಶಿವಣ್ಣನ ಸೂಪರ್ ಹಿಟ್ ಸಾಂಗ್ಸ್ ಹಾಕಿ, ಕುಣಿದು ಕುಪ್ಪಳಿಸಲಿದ್ದಾರೆ. ಆದ್ರೆ ಅಲ್ಲಿ ಉಪೇಂದ್ರ ಅವರ ಸಾಂಗ್ಸ್ ಪ್ಲೇ ಆಗ್ತಿಲ್ಲ ಅನ್ನೋದು ಶಾಕಿಂಗ್. ಹೌದು.. ಅದಕ್ಕೆ ಅಂತಲೇ ಉಪ್ಪಿ ಫ್ಯಾನ್ಸ್ ನವರಂಗ್ ಥಿಯೇಟರ್‌ನಲ್ಲಿ ಉಪ್ಪಿ ಡಿಜೆ ನೈಟ್ ನಡೆಸ್ತಿದ್ದಾರೆ. ಅದೂ ತ್ರಿವೇಣಿಯಲ್ಲಿ ನಡೆಯೋ ಅದೇ ಸಮಯದಲ್ಲಿ ಅನ್ನೋದು ಅಚ್ಚರಿ.

ಅಂದಹಾಗೆ ಇದು ಶಿವಣ್ಣ ಹಾಗೂ ಉಪೇಂದ್ರ ಅವರ ಗಮನಕ್ಕೆ ಇಲ್ಲದೇನೇ ನಡೆಯಲು ಸಾಧ್ಯವೇ..? ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್‌ಗಳು ನಟಿಸಿದ್ದಾರೆ ಅಂದ್ಮೇಲೆ ಒಟ್ಟೊಟ್ಟಿಗೆ ಡಿಜೆ ನೈಟ್ ಮಾಡಿದ್ರೆ ಚೆನ್ನಾಗಿರ್ತಿತ್ತು. ಬಹುಶಃ ಇದು ಪರಸ್ಪರ ಒಡಂಬಡಿಕೆಯಿಂದ ಮಾತುಕತೆ ಮೂಲಕ ನಿಗದಿ ಮಾಡಿಕೊಂಡು ಪ್ರತ್ಯೇಕವಾಗಿ ಡಿಜೆ ನೈಟ್‌ಗಳನ್ನ ನಡೆಸ್ತಿದ್ರೆ ವೆಲ್ ಅಂಡ್ ಫೈನ್. ಇಲ್ಲವಾದಲ್ಲಿ ಮಗದೊಂದು ಮೆಗಾ ಸ್ಟಾರ್‌ವಾರ್‌ಗೆ ಇದು ಮುನ್ನುಡಿ ಬರೆಯಲಿದೆ.





