ಒಂದೂವರೆ ದಶಕದ ನಂತ್ರ ಒಂದಾಗ್ತಿರೋ ಮೈಲಾರಿ ಜೋಡಿ, ಶಿವಣ್ಣ-ಆರ್ ಚಂದ್ರು ಚಿತ್ರಪ್ರೇಮಿಗಳಿಗೆ ಬಿಗ್ ಸರ್‌ಪ್ರೈಸ್ ಕೊಡೋಕೆ ಸಜ್ಜಾಗಿದೆ. ಶಿವಣ್ಣನ ಬರ್ತ್ ಡೇಗೂ ಮೊದಲೇ ಬಿಗ್ ಬ್ರೇಕಿಂಗ್ ನ್ಯೂಸ್ ಮೂಲಕ ಗ್ಯಾಂಗ್‌ಸ್ಟರ್ ಮೂವಿ ಅನೌನ್ಸ್ ಮಾಡಲಿದೆ. ಈ ಬಿಗ್ಗೆಸ್ಟ್ ಕಾಂಬೋನ ಬಿಗ್ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ..
- ಟಗರು ಶಿವ ಗ್ಯಾಂಗ್‌ಸ್ಟರ್ ಮೂವಿಗೆ R. ಚಂದ್ರು ಗುಟುರು
- ಕಬ್ಜಗಿಂತ ಬಿಗ್ ವೆಂಚರ್.. ಶಿವಣ್ಣ ಜೊತೆ ಮತ್ತಿಬ್ರು ಸ್ಟಾರ್ಸ್
- ಜುಲೈ 12ಕ್ಕೂ ಮೊದಲೇ ಅನೌನ್ಸ್ ಆಗ್ತಿದೆ ಮೆಗಾ ಪ್ರಾಜೆಕ್ಟ್
- ಆಡಿಕೊಳ್ಳೋರಿಗೆ ತಕ್ಕ ಉತ್ತರ ಕೊಡೋಕೆ ಚಂದ್ರು ರೆಡಿ..!!
ಮೈಲಾರಿ.. 2010ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ನಟನೆಯ ಹಾಗೂ ಆರ್ ಚಂದ್ರು ನಿರ್ದೇಶನದ ಸಿನಿಮಾ. ಅದಾದ ಬಳಿಕ ಈ ಕಾಂಬೋ ಬರೋಬ್ಬರಿ 16 ವರ್ಷಗಳ ಬಳಿಕ ಮತ್ತೆ ಮೋಡಿ ಮಾಡೋಕೆ ಒಂದಾಗ್ತಿದೆ. ಹೌದು.. ಕಬ್ಜ ಚಿತ್ರದಲ್ಲಿ ಶಿವಣ್ಣ ಕ್ಲೈಮ್ಯಾಕ್ಸ್‌ನಲ್ಲೊಂದು ಸಣ್ಣ ರೋಲ್ ಮಾಡಿದ್ರು. ಆದ್ರೆ ಅದು ಉಪೇಂದ್ರ ಸಿನಿಮಾ ಅಂತಲೇ ಕನ್ಸಿಡರ್ ಮಾಡಲಾಯ್ತು. ಸೋ.. ಮೈಲಾರಿ ಜೋಡಿ ಮತ್ತೆ ಮ್ಯಾಜಿಕ್ ಮಾಡಲಿದ್ದು, ಜುಲೈ 12ರಂದು ಶಿವಣ್ಣನ ಬರ್ತ್ ಡೇಗೂ ಮೊದಲೇ ನ್ಯೂ ವೆಂಚರ್ ಅನೌನ್ಸ್ ಆಗ್ತಿರೋದು ವಿಶೇಷ.
ಸದ್ಯ ದೊಡ್ಮನೆ ದೊರೆ ಶಿವಣ್ಣ ಸಾಲು ಸಾಲು ಎಕ್ಸ್‌ಪೆರಿಮೆಂಟಲ್ ಮೂವೀಸ್‌ನಿಂದ ಯಂಗ್‌ಸ್ಟರ್‌ಗಳು ಕೂಡ ನಾಚಿಸುವಂತಹ ಭಿನ್ನ, ವಿಭಿನ್ನ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳಲ್ಲೂ ಬ್ಯುಸಿ ಆಗಿದ್ದಾರೆ. ಹಾಗಾಗಿ ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ, ಗ್ಯಾಂಗ್‌ಸ್ಟರ್ ಮೂವಿ ಮಾಡಲು ಸಜ್ಜಾಗಿದ್ದಾರೆ. ಯೆಸ್.. ಈ ಬಾರಿ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು ಕಬ್ಜ ಚಿತ್ರ ಮೀರಿಸುವಂತಹ ಮಹೋನ್ನತ ಚಿತ್ರಕ್ಕೆ ಕೈ ಹಾಕ್ತಿದ್ದಾರೆ. ಆಡಿಕೊಂಡವ್ರಿಗೆ ತಕ್ಕ ಉತ್ತರ ಕೊಡಲು ಸಜ್ಜಾಗ್ತಿದ್ದಾರೆ.
ಓಂ, ಘೋಸ್ಟ್, ಜೈಲರ್, ಮಫ್ತಿ ಸಿನಿಮಾಗಳ ಆ ಮಾಸ್ ಖದರ್‌ನ ಮೀರಿಸುವಂತಹ ಡ್ಯಾಡ್ ಆಫ್ ಮಾಸ್.. ಗಾಡ್ ಆಫ್ ಕ್ಲಾಸ್‌ನಿಂದ ಕೂಡಿರೋ ರೋಲ್ ಮೂಲಕ ರೂಲ್ ಮಾಡೋಕೆ ಬರ್ತಿದ್ದಾರೆ ಶಿವಣ್ಣ. ಜುಲೈ 12ಕ್ಕೆ ಶಿವಣ್ಣನ ಬರ್ತ್ ಡೇ ಇದ್ದು, ಅದಕ್ಕೂ ಮೊದ್ಲೇ ಈ ಚಿತ್ರ ಅಫಿಶಿಯಲಿ ಅನೌನ್ಸ್ ಆಗಲಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರ ಮೆಗಾ ಪ್ಯಾನ್ ಇಂಡಿಯಾ ಮೂವಿ ಆಗಲಿದ್ದು, ಶಿವಣ್ಣ ಜೊತೆ ಮಲಯಾಳಂ ಹಾಗೂ ಟಾಲಿವುಡ್‌ನ ಇಬ್ಬರು ಬಿಗ್ ಸ್ಟಾರ್ಸ್ ಇರಲಿದ್ದಾರೆ ಎನ್ನಲಾಗ್ತಿದೆ. ಆ ಸ್ಟಾರ್‌ಗಳು ಯಾರು..? ಮೂವಿ ಟೈಟಲ್ ಏನಾಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ ಚಂದ್ರು.
ಮಾಸ್ ಲೀಡರ್ ಶಿವಣ್ಣ ಗನ್ ಹಿಡಿದು, ಗುಂಡಿನ ಸುರಿಮಳೆಗೈಯ್ಯುವಂತಹ ಚಿತ್ರಗಳು ಸಾಕಷ್ಟು ಇವೆಯಾದ್ರೂ, ಅಂತಹ ಪಾತ್ರಗಳಿಗೆ ಪಕ್ಕಾ ಸೂಟ್ ಆಗೋ ಡೆಡ್ಲಿ & ಡೇರಿಂಗ್ ಆಗಿರೋ ಕಿಲ್ಲಿಂಗ್ ಪರ್ಫಾಮೆನ್ಸ್ ನೀಡುವ ಕಂಪ್ಲೀಟ್ ಆ್ಯಕ್ಟರ್ ಶಿವಣ್ಣ ಅನ್ನೋದು ಗೊತ್ತೇಯಿದೆ. ಸೋ.. ಇಷ್ಟು ದಿನ ಅದರ ಕಥೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದ ಆರ್ ಚಂದ್ರು, ಇದೀಗ ಬೌಂಡ್ ಸ್ಕ್ರಿಪ್ಟ್ ಸಮೇತ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆಗಿನ ಫಾದರ್ ಸಿನಿಮಾ ಕೂಡ ರಿಲೀಸ್ ಅಂಚಿನಲ್ಲಿದ್ದು, ಶಿವಣ್ಣ ಕಾಂಬೋ ನ್ಯೂ ಪ್ರಾಜೆಕ್ಟ್ ಮಾತ್ರ ಟಾಕ್ ಆಫ್ ದಿ ಟೌನ್ ಆಗೋದು ಗ್ಯಾರಂಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





