ಕಳೆದ ವರ್ಷ ರಾಷ್ಟ್ರಕವಿ ಕುವೆಂಪು ಪಾಲಾಗಿದ್ದ ಕನ್ನಡ ಡಿಂಡಿಮ ಅವಾರ್ಡ್ ಈ ಬಾರಿ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ಗೆ ನೀಡಲಾಯ್ತು. ದೊಡ್ಮನೆಯ ರಾಜಕುಮಾರ ಶಿವಣ್ಣ, ಪತ್ನಿ ಗೀತಾ ಶಿವರಾಜ್‌ಕುಮಾರ್ ಜೊತೆಗೂಡಿ ಪ್ರಶಸ್ತಿ ಸ್ವೀಕರಿಸಿದ್ರು. ಐದಾರು ಸಾವಿರ ಮಂದಿ ಸೇರಿದ್ದ ಬೃಹತ್ ಕಾರ್ಯಕ್ರಮದಲ್ಲಿ ಶಿವಣ್ಣ, ತಮ್ಮ ಗಾಯನಿಂದ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸಿದರು.
ಇದು ಭಾನುವಾರ ಶುಭ ಸಂಜೆ ಬಸವೇಶ್ವರ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಹಸ್ರ ಕಂಠಗಾನ ವೈಭವ-2025ರ ಕಾರ್ಯಕ್ರಮದ ಝಲಕ್. ಶ್ರೀ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀ ಪಾದರ ಮಾರ್ಗದರ್ಶನದೊಂದಿಗೆ ನಡೆದ ಅಭೂತಪೂರ್ವ ಕಾರ್ಯಕ್ರಮ ಇದಾಗಿದ್ದು, ಮೂರೂವರೆ ನಾಲ್ಕು ಸಾವಿರ ಕಂಠಗಳು ಜಾನಪದ, ಭಾವಗೀತೆಗಳ ಜೊತೆ ಸಂತ, ಶರಣ, ದಾಸರ ಸುಪ್ರಸಿದ್ದ ಗೀತೆಗಳನ್ನ ಹಾಡಿದರು. ಇದು ದೀಪೋತ್ಸವವೂ ಹೌದು, ಕನ್ನಡ ರಾಜ್ಯೋತ್ಸವವವೂ ಹೌದು.. ಎಲ್ಲಕ್ಕಿಂತ ಮಿಗಿಲಾಗಿ ರಾಜೋತ್ಸವ ಕಾರ್ಯಕ್ರಮ ಆಗಿದ್ದು ಹೈಲೈಟ್.
ಡಾ.ರಾಜ್‌ಗೆ ಡಿಂಡಿಮ ಪ್ರಶಸ್ತಿ.. ಶಿವಣ್ಣ-ಗೀತಕ್ಕ ರಾಜೋತ್ಸವ
ಗಂಧದಗುಡಿ, ನ್ಯಾಯವೇ ದೇವರು ಹಾಡು ಹಾಡಿದ ಶಿವಣ್ಣ..!
ಐದಾರು ಸಾವಿರ ಮಂದಿ ಸಾಕ್ಷಿಯಾದ ಈ ಕಾರ್ಯಕ್ರಮಕ್ಕೆ ಕೇಂದ್ರಬಿಂದು ಆಗಿದ್ದು ಮಾತ್ರ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಹಾಗೂ ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್. ಕಳೆದ ವರ್ಷ ಕನ್ನಡ ಡಿಂಡಿಮ ಪ್ರತಿಷ್ಠಾನದಿಂದ ರಾಷ್ಟ್ರಕವಿ ಕುವೆಂಪು ಅವರಿಗೆ ಡಿಂಡಿಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕುವೆಂಪು ಪರ ಅವರ ಸುಪುತ್ರಿ ಪ್ರಶಸ್ತಿ ಸ್ವೀಕರಿಸಿದ್ರು. ಈ ಸಾಲಿನಲ್ಲಿ ನಟಸಾರ್ವಭೌಮ, ಗಾನ ಗಂಧರ್ವ ಡಾ. ರಾಜ್‌ಕುಮಾರ್ ಅವರಿಗೆ ಕನ್ನಡ ಡಿಂಡಿಮ ಪ್ರಶಸ್ತಿ ನೀಡಲಾಯಿತು. ಅದನ್ನ ಡಾ ಶಿವರಾಜ್‌ಕುಮಾರ್ ಹಾಗೂ ಗೀತಕ್ಕ ಸ್ವೀಕರಿಸಿದ್ದು ವಿಶೇಷ.
ಇಂಟರೆಸ್ಟಿಂಗ್ ಅಂದ್ರೆ ಶಿವಣ್ಣ ಈ ಕಾರ್ಯಕ್ರಮದಲ್ಲಿ ಗಂಧದ ಗುಡಿ ಹಾಗೂ ನ್ಯಾಯವೇ ದೇವರು ಚಿತ್ರದ ಹಾಡುಗಳನ್ನ ಹಾಡಿ ಶಿಳ್ಳೆ, ಚಪ್ಪಾಳೆಗಳಿಗೆ ಸಾಕ್ಷಿಯಾದರು. ಅಭಿಮಾನಿ ದೇವರುಗಳ ಒತ್ತಾಯದ ಮೇರೆಗೆ ಮತ್ತೊಂದು ಹಾಡನ್ನ ಕೂಡ ಹಾಡಿ ಭಲೇ ಶಿವಣ್ಣ ಅನಿಸಿಕೊಂಡರು.
ಸಂತೋಷ್ ಗುರೂಜಿ ಉಪಸ್ಥಿತಿಯಲ್ಲಿ ಸಹಸ್ರ ಕಂಠಗಾನ ವೈಭವ
ರಾಜ್ಯೋತ್ಸವಕ್ಕೆ ಹುರುಪು, ಹುಮ್ಮಸ್ಸು ತಂದ ಲಿವಿಂಗ್ ಲೆಜೆಂಡ್
ಕನ್ನಡ ಡಿಂಡಿಮ ಪ್ರತಿಷ್ಠಾನ ಹಾಗೂ ಆಯುರ್ ಆಶ್ರಮದ ನೇತಾರರಾದ ಸಂತೋಷ್ ಗುರೂಜಿ ದೊಡ್ಮನೆ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು, ಶಿವಣ್ಣ ಅವರಿಗೆ ಮೂರು ವರ್ಷಗಳ ಕಾಲ ಶಬರಿಮಲೆಗೆ ಇರುಮುಡಿ ಕಟ್ಟಿಕೊಟ್ಟಿದ್ದನ್ನ ನೆನೆದರು. ಜೊತೆಗೆ ಅಣ್ಣಾವ್ರ ಘನತೆ, ಗೌರವ ಹಾಗೂ ಕನ್ನಡ ಭಾಷೆಗೆ ಅವರ ಕೊಡುಗೆಯನ್ನ ಸೊಗಸಾಗಿ ವಿವರಿಸಿದರು. ಅದಕ್ಕೆ ವಿನಯ್ ಗುರೂಜಿ, ನಟ ಭಾರ್ಗವ್ ಕೂಡ ಸಾಕ್ಷಿ ಆದರು.
ಇದೇ ಸಂದರ್ಭದಲ್ಲಿ 45 ಸಿನಿಮಾದ ಬಗ್ಗೆ ಕೂಡ ಮಾತನಾಡಿದ ಶಿವಣ್ಣ, ಟ್ರೈಲರ್ ಬರುತ್ತೆ ನೋಡಿ. ಸಿನಿಮಾನ ಕಂಡಿತಾ ನೀವು ಇಷ್ಟ ಪಡ್ತೀರಾ ಅನ್ನೋ ಭರವಸೆ ನೀಡಿದ್ರು.





