ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಹಾಗೂ ಅಪರೂಪದ ಅಭಿನೇತ್ರಿ, ಅಭಿನಯ ಸರಸ್ವತಿ ಬಿ ಸರೋಜಾದೇವಿ ಇನ್ನು ನೆನಪು ಮಾತ್ರ. ಬಾರದೂರಿಗೆ ಪಯಣ ಬೆಳೆಸಿರೋ ಈಕೆ ಅಪ್ಪಟ ಕನ್ನಡತಿ. ಇಂದಿನ ಜನರೇಷನ್ ನಟಿಮಣಿಯರಿಗೂ ಸ್ಫೂರ್ತಿಯ ಚಿಲುವೆಯಯಾಗಿದ್ದ ಸರೋಜಾದೇವಿ ಅವರಿಗೆ ಏನಾಗಿತ್ತು..? ಆ ಭಾಗ್ಯವಂತೆಯ ಸಿನಿ ಬದುಕು ಎಷ್ಟು ಕಲರ್‌ಫುಲ್ ಆಗಿತ್ತು..? ಆಕೆಯ ಹಿನ್ನೆಲೆ ಸಮೇತ ಆ ಗತಕಾಲದ ವೈಭವವನ್ನು ಪರಿಚಯಿಸ್ತೀವಿ ಬನ್ನಿ.
- ಏಳು ದಶಕ.. 200ಕ್ಕೂ ಅಧಿಕ ಚಿತ್ರಗಳು.. ಒಬ್ಬ ‘ಅಭಿನೇತ್ರಿ’
- ಡಾ. ರಾಜ್, NTR, MGR.. ಎಲ್ಲಾ ದಿಗ್ಗಜರ ಜೊತೆ ನಟನೆ
- ಅಭಿನಯದಲ್ಲಿ ಸರಸ್ವತಿ.. ಸೌಂದರ್ಯದಲ್ಲಿ ಮಹಾಲಕ್ಷ್ಮೀ
- ಸ್ವಿಮ್ ಸೂಟ್, ಸ್ಲೀವ್‌ಲೆಸ್ ಹಾಕದ ಓನ್ಲಿ ಸೂಪರ್ ಸ್ಟಾರ್ !
1938ರ ಜನವರಿ 7ರಂದು ಬೆಂಗಳೂರಿನ ಒಕ್ಕಲಿಗ ಕುಟುಂಬವೊಂದರಲ್ಲಿ ಜನಿಸಿದ ಬಿ. ಸರೋಜಾದೇವಿ ಅವರ ತಂದೆ ಭೈರಪ್ಪ ಪೊಲೀಸ್ ಆಫೀಸರ್. ತಾಯಿ ರುದ್ರಮ್ಮ ಗೃಹಿಣಿ. 4ನೇ ಮಗಳಾಗಿ ಜನಿಸಿದ ಸರೋಜಾದೇವಿಯನ್ನ ಒಳ್ಳೆಯ ಡ್ಯಾನ್ಸರ್ ಆಗಿಸಿ, ನಂತ್ರ ನಟಿಯಾಗಿಸುವ ಆಶಯ ಹೊಂದಿದ್ದರು. ಮಗಳ ಕನಸುಗಳನ್ನ ನನಸು ಮಾಡೋಕೆ ತಂದೆ ಕೂಡ ಸ್ಟುಡಿಯೋಗಳಿಗೆ ಜೊತೆಯಾಗ್ತಿದ್ದರು. ಇನ್ನು ತಾಯಿ ಆಕೆಯನ್ನ ಬಹಳ ಸಭ್ಯವಾಗಿ ಬೆಳೆಸೋದ್ರಲ್ಲಿ ಸೈ ಅನಿಸಿಕೊಂಡರು. ಬಾಲ್ಯದಲ್ಲೇ ಸ್ವಿಮ್ ಸೂಟ್ ಹಾಗೂ ಸ್ಲೀವ್‌ಲೆಸ್ ಬಟ್ಟೆ ಧರಿಸದಂತೆ ತಾಕೀತು ಮಾಡಿದ್ರು. ಅದನ್ನ ಸರೋಜಾದೇವಿ ಜೀವನದುದ್ದಕ್ಕೂ ಪಾಲಿಸಿದ್ದು ವಿಶೇಷ.
13ನೇ ವಯಸ್ಸಿನಲ್ಲೇ ವೇದಿಕೆಯೊಂದರಲ್ಲಿ ಹಾಡುತ್ತಿದ್ದ ಸರೋಜಾದೇವಿಯನ್ನ ಕಂಡ ಬಿ.ಆರ್. ಕೃಷ್ಣಮೂರ್ತಿ ಆಕೆಗೆ ಸಿನಿಮಾ ಆಫರ್ ನೀಡಿದ್ರು. ಆದ್ರೆ ನಯವಾಗಿಯೇ ಅದನ್ನ ತಿರಸ್ಕರಿಸಿದ್ದ ಸರೋಜಾದೇವಿ, ತಮ್ಮ 17ನೇ ವಯಸ್ಸಿನಲ್ಲಿ ಹೊನ್ನಪ್ಪ ಭಾಗವತಾರ್ ನಟನೆಯ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಬಣ್ಣ ಹಚ್ಚಿದ್ರು. ಸೀತಾರಾಮ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾಧರೆ ಪಾತ್ರದಲ್ಲಿ ಪೋಷಕನಟಿಯಾಗಿ ನಟಿಸಿದ್ರು. ಆ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಕೂಡ ಬಂತು. ನಂತ್ರ ಬಿ ಆರ್ ಪಂತುಲು ಅವರ ತಮಿಳು ಚಿತ್ರ ತಂಗಮಾಲೈ ರಾಗಸಿಯಂ ಚಿತ್ರದಲ್ಲಿ ನಟಿಸಿದ್ರು. 1955ರಲ್ಲಿ ಕರಿಯರ್ ಶುರು ಮಾಡಿದ ಸರೋಜಾದೇವಿ ಕನ್ನಡದ ಜೊತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬಣ್ಣ ಹಚ್ಚಿದ 50ರ ದಶಕದ ನಟಿ ಆಗಿದ್ರು.
ಎಂಜಿಆರ್ ಜೊತೆ ನಾಡೋಡಿ ಮಣ್ಣನ್, 1959ರಲ್ಲಿ ದಿಲೀಪ್ ಕುಮಾರ್ ಜೊತೆ ಫೈಘಂ ಅನ್ನೋ ಹಿಂದಿ ಸಿನಿಮಾದಲ್ಲಿ ಆಫರ್ ಪಡೆದ ಸರೋಜಾದೇವಿ 17ನೇ ವಯಸ್ಸಿಗೆ ಲೇಡಿ ಸೂಪರ್ ಸ್ಟಾರ್ ಪಟ್ಟ ಪಡೆದರು. ರಾಜೇಂದ್ರ ಕಪೂರ್, ಶಮ್ಮಿ ಕಪೂರ್, ಸುನೀಲ್ ದತ್, ರಾಜ್ ಕಪೂರ್ ಜೊತೆ ಎಲ್ಲಾ ತೆರೆಹಂಚಿಕೊಂಡ ಗರಿಮೆ ಇವರಿಗಿದೆ. ಜೆಮಿನಿ ಗಣೇಶನ್, ಶಿವಾಜಿ ಗಣೇಶನ್ ಜೊತೆಗೆಲ್ಲ ನಟಿಸಿರೋ ಈಕೆ ಬಹುಯೇಕ ಎಲ್ಲಾ ಚಿತ್ರರಂಗಗಳ ಸೂಪರ್ ಸ್ಟಾರ್ಸ್ ಜೊತೆ ಮಿಂಚು ಹರಿಸಿದ್ದಾರೆ.
ನಟಸಾರ್ವಭೌಮ ಡಾ ರಾಜ್‌ಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಅಲ್ಲದೆ ತೆಲುಗಿನಲ್ಲಿ ಎನ್‌ಆರ್, ಎನ್‌ಟಿಆರ್ ಜೊತೆಗೂ ಅಭಿನಯಿಸಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದ ಕಲರ್ ರೂಪ ಪಡೆದು, ನಂತ್ರ ಡಿಜಿಟಲ್ ಆಗಿ ಬದಲಾದ ತಂತ್ರಜ್ಞಾನದವರೆಗೆ ಸುಮಾರು 70 ವರ್ಷಗಳ ಕಾಲ ಕಲಾಸೇವೆ ಮಾಡಿದ್ದಾರೆ ಸರೋಜಾದೇವಿ. ಅಭಿನಯಕ್ಕಾಗಿಯೇ ಹುಟ್ಟಿಬಂದಂತಹ ಈಕೆಯನ್ನ ಅಭಿನಯ ಸರಸ್ವತಿ ಅಂತ ಕರೆದಿರೋದು ನಿಜಕ್ಕೂ ಅರ್ಥಪೂರ್ಣ.
29 ವರ್ಷದಲ್ಲಿ 161 ಚಿತ್ರಗಳಿಗೆ ನಾಯಕನಟಿ ಗರಿಮೆ
ಮೈಮಾಟದಿಂದಲ್





