ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಶೆಟ್ರ ಸಿಂಡಿಕೇಟ್ ಸಕ್ಸಸ್ ಪರ್ವ ಸಖತ್ ಜೋರಿದೆ. ರಕ್ಷಿತ್, ರಿಷಬ್, ರಾಜ್ ಬಿ ಶೆಟ್ಟಿ ಆಯ್ತು. ಈಗ ರೂಪೇಶ್ ಶೆಟ್ಟಿ ಸರದಿ. ಯೆಸ್.. ಜೈ ಸಿನಿಮಾದಿಂದ ಸಕ್ಸಸ್‌ಫುಲ್ ಶೆಟ್ರ ಲಿಸ್ಟ್ ಸೇರಿಕೊಂಡಿರೋ ರೂಪೇಶ್ ಶೆಟ್ಟಿ ಎಲ್ಲೆಡೆ ಸಖತ್ ಸದ್ದು ಮಾಡ್ತಿದ್ದಾರೆ. ಏನಿದು ಅಂತೀರಾ..? ಈ ಸ್ಟೋರಿ ನೋಡಿ.
ನವೆಂಬರ್ ಒಂದರಲ್ಲೇ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಥಿಯೇಟರ್ ಮಾಲೀಕರು ಯಾವ ಸಿನಿಮಾಗೆ ಥಿಯೇಟರ್ ಕೊಡೋದು ಯಾವ ಥಿಯೇಟರ್‌ಗೆ ಬಿಡೋದು ಅನ್ನೋ ಕನ್ಫ್ಯೂಶನ್‌ನಲ್ಲಿದ್ದಾರೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನುಗ್ಗಿ ಮುಂದೆ ಬಂದು, ಜನರಿಂದ ಶಿಳ್ಳೆ-ಚಪ್ಪಾಳೆಗಳ ಜೊತೆ ಸೈ ಅನಿಸಿಕೊಳ್ಳೋದು ಸಾಮಾನ್ಯವಾದ ಮಾತಲ್ಲ. ಆದ್ರೀಗ ಜೈ ಚಿತ್ರಕ್ಕೆ ಅಂಥದ್ದೊಂದು ಜೈಕಾರ, ಶ್ರೀಕಾರ ಸಿಕ್ಕಿದೆ.
ಸಕ್ಸಸ್‌ಫುಲ್ ಶೆಟ್ರ ಲಿಸ್ಟ್‌ಗೆ ಮಲ್ಟಿ ಟ್ಯಾಲೆಂಟ್ ರೂಪೇಶ್ ಶೆಟ್ಟಿ
ಕಾಂತಾರ-1 ಬೆನ್ನಲ್ಲಿ ಗೆದ್ದು ಬೀಗಿದ ಜೈ ಹೀರೋ ಕಮ್ ಡೈರೆಕ್ಟರ್
ಯೆಸ್.. ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮಾಡಿರೋ ಜೈ ಸಿನಿಮಾ ವಿಶ್ವದೆಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ರಾಜ್ ಬಿ ಶೆಟ್ರ ಸು ಫ್ರಮ್ ಸೋ ಚಿತ್ರದ ರೀತಿ ಸಣ್ಣ ಬಜೆಟ್ ಸಿನಿಮಾವೊಂದು ಒಂದೇ ವಾರದಲ್ಲಿ ಬರೋಬ್ಬರಿ 5 ಕೋಟಿ ಪೈಸಾ ವಸೂಲ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲಿ ತಯಾರಾದ ಜೈ ಚಿತ್ರ ಕರಾವಳಿ ಲೋಕಲ್ ಪಾಲಿಟಿಕ್ಸ್ ಹಾಗೂ ಒಬ್ಬ ಯುವಕ ಮೇಲೆ ಫೋಕಸ್ ಆಗಿದ್ದು, ಎಲ್ಲರಿಗೂ ರುಚಿಸುತ್ತಿದೆ.
ಸರ್ಕಸ್ ಅನ್ನೋ ತುಳು ಚಿತ್ರ ಮಾಡಿದ್ದ ರೂಪೇಶ್ ಶೆಟ್ಟಿ, ಜೈ ಚಿತ್ರದ ಮೂಲಕ ತಮಗೆ ತಾವೇ ಫ್ರೇಮ್ ಇಟ್ಕೊಂಡು ಆ್ಯಕ್ಷನ್ ಕಟ್ ಹೇಳಿ, ಡೈರೆಕ್ಟರ್ ಕೂಡ ಆದ್ರು. ಅವರಿಗೆ ಸುನೀಲ್ ಶೆಟ್ಟಿ ಅಂತಹ ಬಾಲಿವುಡ್ ಸೂಪರ್ ಸ್ಟಾರ್ ರೆಮ್ಯುನರೇಷನ್ ಪಡೆಯದೆ ಸಾಥ್ ನೀಡಿದ್ರು. ಇಂಡಿಯನ್ ಸ್ಟಾರ್ ಕ್ರಿಕೆಟರ್ ಕೆ ಎಲ್ ರಾಹುಲ್ ಕೂಡ ಶುಭ ಹಾರೈಸಿದ್ರು. ಕಿಚ್ಚ ಫಸ್ಟ್ ಟಿಕೆಟ್ ಖರೀದಿಸಿ, ಶುಭ ಕೋರಿದ್ರು. ಇವೆಲ್ಲದರ ಪ್ರತಿಫಲ ಹಾಗೂ ಚಿತ್ರದ ಕಥೆಯಲ್ಲಿರೋ ಧಮ್, ಪಾತ್ರಗಳಲ್ಲಿರೋ ರಿಧಮ್‌ನಿಂದ ಜೈಗೆ ಎಲ್ಲೆಡೆ ಜೈಕಾರ ಸಿಗ್ತಿದೆ.
ಸು ಫ್ರಮ್ ಸೋ ಹಾದಿಯಲ್ಲಿ ಜೈ.. ಒಂದೇ ವಾರಕ್ಕೆ 5 ಕೋಟಿ
ಕನ್ನಡ & ತುಳು.. ಸುನೀಲ್ ಶೆಟ್ಟಿ ಗತ್ತು.. ವರ್ಲ್ಡ್‌ವೈಡ್ ಗಮ್ಮತ್ತು
ಸಿನಿಮಾಗೆ ಬಜೆಟ್‌ಗಿಂತ ಕಥೆ ಮುಖ್ಯ. ಹಾಗೂ ಅದನ್ನ ಪ್ರಸ್ತುತ ಪಡಿಸೋ ವಿಧಾನ ಕೂಡ ಮುಖ್ಯವಾಗುತ್ತೆ. ಆ ನಿಟ್ಟಿನಲ್ಲಿ ಸಣ್ಣ ಬಜೆಟ್ ಸಿನಿಮಾ ಆದ್ರೂ, ಸಕ್ಸಸ್ ಮೂಲಕ ಜೈ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಸದ್ಯ ಶೆಟ್ರ ಪಾಳಯದ ತ್ರಿಬಲ್ ಆರ್‌ಗಳಾಗಿ ಮಿಂಚುತ್ತಿದ್ದಾರೆ. ಆ ಸಕ್ಸಸ್‌ಫುಲ್ ಪ್ಯಾಷನೇಟ್ ಫಿಲ್ಮ್ ಮೇಕರ್‌ಗಳ ಲಿಸ್ಟ್‌ಗೆ ರೂಪೇಶ್ ಶೆಟ್ಟಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರೂಪೇಶ್ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಅಂತ ಗುರ್ತಿಸಿಕೊಂಡಿದ್ದಾರೆ.
ಅಂದಹಾಗೆ ರೂಪೇಶ್ ತನ್ನೊಟ್ಟಿಗೆ ಅದ್ವಿತಿ ಶೆಟ್ಟಿಗೂ ಒಂದು ದೊಡ್ಡ ಸಕ್ಸಸ್ ನೀಡಿದ್ದಾರೆ. ಕರಾವಳಿ ಭಾಗದ ಸಾಕಷ್ಟು ಮಂದಿ ಕಲಾವಿದರು ಹಾಗೂ ತಂತ್ರಜ್ಞರ ಪಾಲಿಗೆ ಮೆಂಟರ್ ಆಗಿದ್ದಾರೆ. ಈ ಸಿನಿಮಾದ ಸಕ್ಸಸ್ ರೂಪೇಶ್ ಶೆಟ್ಟಿ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯದಲ್ಲೇ ರೂಪೇಶ್ ಮತ್ತೊಂದು ಧಮಾಕೇದಾರ್ ಸುದ್ದಿಯೊಂದಿಗೆ ಬರೋಕೆ ಸಜ್ಜಾಗ್ತಿದ್ದಾರೆ.





