ಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ರಾಕಿಂಗ್ ಸ್ಟಾರ್ ಯಶ್ ಅವ್ರ ಟಾಕ್ಸಿಕ್ ಟೀಸರ್ ಬಂದ್ಮೇಲೆ ಸಿನಿದುನಿಯಾದಲ್ಲಿ ಇದರದ್ದೇ ಟಾಕಿಂಗ್.. ಸಿಕ್ಕಾಪಟ್ಟೆ ಬ್ರೇಕಿಂಗ್ ನ್ಯೂಸ್. ಯೆಸ್.. ವರ್ಲ್ಡ್‌ವೈಡ್ ಸಂಚಲನ ಮೂಡಿಸಿರೋ ಟಾಕ್ಸಿಕ್ ಚಿತ್ರ ಸದ್ಯ ಬಾಕ್ಸ್ ಆಫೀಸ್ ತೂಫಾನ್ ಧುರಂಧರ್ ಸೀಕ್ವೆಲ್ ಸಿನಿಮಾಗಿಂತ ಆರು ಪಟ್ಟು ಮುಂದಿದೆ. ಅಷ್ಟೇ ಅಲ್ಲ, ಧುರಂಧರ್-2 ಎದುರು ಯಶ್ ಸಿನಿಮಾ ಬೇಕಿತ್ತಾ ಅಂದುಕೊಳ್ಳೋರು ಈ ಇಂಟರೆಸ್ಟಿಂಗ್ ಸ್ಟೋರಿಯನ್ನ ಒಮ್ಮೆ ನೋಡ್ಲೇಬೇಕು. ಯಾಕಂದ್ರೆ ಆಮೇಲೆ ನಿಮ್ಮ ಮನಸ್ಥಿತಿ ಬದಲಿಸಿಕೊಳ್ತೀರಿ.
ಕನ್ನಡ ಸಿನಿಮಾವೊಂದರ ಟೀಸರ್ ಬಗ್ಗೆ ಇಂದು ವಿಶ್ವದ ಮೂಲೆ ಮೂಲೆಯಲ್ಲಿ, ಬಹುತೇಕ ಎಲ್ಲಾ ಚಿತ್ರರಂಗಗಳಲ್ಲಿ ಚರ್ಚೆ ನಡೀತಿದೆ ಅಂದ್ರೆ ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಯಶ್. ಕಾಣುವ ಕನಸನ್ನು ದೊಡ್ಡದಾಗೇ ಕಾಣಿ ಅಂತ ಹೇಳಿದ ಅವರು, ಅವುಗಳ ಬೆನ್ನತ್ತುವ ಪರಿ ಕೂಡ ತೋರಿಸಿಕೊಟ್ಟಿದ್ದಾರೆ. ಕೆಜಿಎಫ್ ಚಿತ್ರಗಳ ಬಳಿಕ ಟಾಕ್ಸಿಕ್ ಚಿತ್ರದಿಂದ ಹಾಲಿವುಡ್ ಶೈಲಿಯ ಸಿನಿಮಾನ ನಮ್ಮ ಕನ್ನಡದಲ್ಲೇ ತಯಾರಿಸಿ, ಬೆಳ್ಳಿತೆರೆಗೆ ಕೊಡ್ತಿರೋದು ಇಂಟರೆಸ್ಟಿಂಗ್.
ಟೀಕೆ, ಟಿಪ್ಪಣಿಗಳ ನಡುವೆ ಯಶ್ ವರ್ಲ್ಡ್‌ವೈಡ್ ಸೆನ್ಸೇಷನ್
BMS ಇಂಟರೆಸ್ಟ್‌ನಲ್ಲಿ ರಣ್‌ವೀರ್ ಹಿಂದಿಕ್ಕಿದ ಕನ್ನಡಿಗ..!!
ಟಾಕ್ಸಿಕ್ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಯ್ತು. ಟೈಟಲ್‌ಗೆ ತಕ್ಕನಾಗಿ ಅದ್ರ ಕಂಟೆಂಟ್ ಕೂಡ ಸಿಕ್ಕಾಪಟ್ಟೆ ಟಾಕ್ಸಿಕ್ ಅಗಿದೆ. ಕಾರ್‌ನಲ್ಲಿ ನಾಯಕನಟ ಹೆಣ್ಣಿನ ಜೊತೆಗಿನ ಪ್ರಣಯದ ದೃಶ್ಯಗಳು, ಬಾಂಬ್ ಬ್ಲಾಸ್ಟ್‌ಗೆ ಪೂರಕವಾಗಿ ಅದನ್ನ ಪರ್ಸಾನಿಫೈ ಮಾಡಿರೋದು ಸದ್ಯ ಎಲ್ಲರ ಹುಬ್ಬೇರಿಸಿದೆ. ಕನ್ನಡ ಸಿನಿಮಾಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಡ್ತಿರೋ ಯಶ್ ಕುರಿತು ಹೆಮ್ಮೆ ಪಟ್ಟು, ಸಾಕಷ್ಟು ಮಂದಿ ಭೇಷ್ ಅಂತಿದ್ದಾರೆ. ಅಟ್ ದಿ ಸೇಮ್ ಟೈಮ್ ಸಾಕಷ್ಟು ಮಂದಿ ಅದನ್ನ ಟೀಕಿಸುತ್ತಿದ್ದಾರೆ ಕೂಡ. ಯಶ್ ಅವರಿಂದ ನಾವು ಇದನ್ನ ನಿರೀಕ್ಷಿಸಿರಲಿಲ್ಲ ಅಂತಿದ್ದಾರೆ.
ಟಾಕ್ಸಿಕ್ ಟೀಸರ್‌ಗೆ ಆಕ್ಷೇಪಣೆ ವ್ಯಕ್ತಪಡಿಸಿ, ಸಾಲು ಸಾಲು ದೂರುಗಳು ಫೈಲ್ ಆಗ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಯಾರದ್ದೆಲ್ಲಾ ಅಕೌಂಟ್‌ಗಳಿವೆಯೋ ಅವರೆಲ್ಲರೂ ವಿಮರ್ಶಕರಾಗಿ ಬದಲಾಗಿ, ಹಾಗೆ ಮಾಡಬಾರದಿತ್ತು, ಹೀಗೆ ಮಾಡಬಾರದಿತ್ತು ಅಂತ ಟೀಕೆ, ಟಿಪ್ಪಣಿಗಳನ್ನ ಕೊಡ್ತಿದ್ದಾರೆ. ಟಾಕ್ಸಿಕ್ ಚಿತ್ರದಿಂದ ಸಾಮಾಜಿಕ ಜಾಲತಾಣಗಳು ಕೂಡ ಟಾಕ್ಸಿಕ್ ಆಗಿಬಿಟ್ಟಿವೆ. ವೀಕೆಂಡ್ ವಿತ್ ರಮೇಶ್‌ನಲ್ಲಿ ಯಶ್ ಆಡಿದ್ದ ಮಾತುಗಳು, ರಾಧಿಕಾ ಪಂಡಿತ್-ಯಶ್ ಸಿನಿಮಾದ ಹಳೆಯ ದೃಶ್ಯಗಳನ್ನ ಸೇರಿಸಿ ಮೀಮ್ಸ್ ಮೂಲಕ ಟ್ರೋಲ್ ಮೇಲೆ ಟ್ರೋಲ್ ಮಾಡ್ತಿದ್ದಾರೆ.
‘ಟಾಕ್ಸಿಕ್’ಗೆ 3.2 ಲಕ್ಷ.. ‘ಧುರಂಧರ್-2’ಗೆ ಜಸ್ಟ್ 49 ಸಾವಿರ
ಸಾಲು ಸಾಲು ದೂರುಗಳ ನಡುವೆ ರಾಕಿಭಾಯ್‌ಗೆ ಅಗ್ರಸ್ಥಾನ
ಯಾರು ಏನೇ ಮಾಡಲಿ.. ಯಶ್ ಜನಪ್ರಿಯತೆ ಸದ್ಯ ವಿಶ್ವಕ್ಕೆ ವ್ಯಾಪಿಸಿ ಆಗಿದೆ. ಟಾಕ್ಸಿಕ್ ಟೀಸರ್ ಈ ಟೀಕೆ ಟಿಪ್ಪಣಿಗಳ ನಡುವೆ 30 ಕೋಟಿಗೂ ಅಧಿಕ ವೀವ್ಸ್ ಪಡೆಯೋ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ವೀವ್ಸ್ ಪಡೆದ ಟೀಸರ್ ಆಗಿ ಕಮಾಲ್ ಮಾಡ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಬುಕ್ ಮೈ ಶೋ ಇಂಟರೆಸ್ಟ್‌ನಲ್ಲಿ ಟಾಕ್ಸಿಕ್ ದಿನವೇ ತೆರೆಗಪ್ಪಳಿಸುತ್ತಿರೋ ಧುರಂಧರ್ ಸೀಕ್ವೆಲ್ ಧುರಂಧರ್-2ನ ಹಿಂದಿಕ್ಕಿದ ಯಶ್ ಅವರ ಈ ಸೆನ್ಸೇಷನಲ್ ಮೂವಿ ಟಾಕ್ಸಿಕ್.
ಮಾರ್ಚ್ 19ರಂದು ಒಂದೇ ದಿನ ಕಳೆದ ವರ್ಷ ಬಾಕ್ಸ್ ಆಫೀಸ್ ತೂಫಾನ್ ಆಗಿ ಮೋಡಿ ಮಾಡಿದ್ದ ಸಾವಿರ ಕೋಟಿ ಕ್ಲಬ್ ಸೇರಿರೋ ರಣ್‌ವೀರ್ ಸಿಂಗ್ ನಟನೆಯ ಧುರಂಧರ್ ಹಾಗೂ ಯಶ್‌ರ ಟಾಕ್ಸಿಕ್ ರಿಲೀಸ್ ಆಗ್ತಿವೆ. ದೇಶಪ್ರೇಮದ ಕಿಚ್ಚು ಇರುವಂತಹ ಹಾಗೂ ಇಂಡೋ-ಪಾಕ್ ಅತಿದೊಡ್ಡ ಜಿದ್ದಿನ ನೈಜ ಘಟನೆ ಆಧಾರಿತ ಕಥಾನಕ ಆಗಿರೋ ಧುರಂಧರ್ ಸಿನಿಮಾಗಿಂತ ಚಿತ್ರಪ್ರೇಮಿಗಳಿಗೆ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಮೇಲೆಯೇ ನಿರೀಕ್ಷೆ ಜಾಸ್ತಿಯಿದೆ. ಅದಕ್ಕೆ ಬುಕ್ ಮೈ ಶೋ ವೇದಿಕೆ ಸಾಕ್ಷಿಯಾಗಿದೆ.
ಮಾಸ್ಟರ್‌ಪೀಸ್ ಸ್ಟೈಲ್‌ನೇ ಕಾಪಿ ಮಾಡಿದ್ದ ಕರುನಾಡ ಅಳಿಯ
ಇದು ಹೆಮ್ಮೆಯ ಕನ್ನಡಿಗ v/s ಕನ್ನಡದ ಅಳಿಮಯ್ಯನ ಕಥಾನಕ
ಟಾಕ್ಸಿಕ್ ಸಿನಿಮಾಗೆ ಬುಕ್ ಮೈ ಶೋನಲ್ಲಿ 3 ಲಕ್ಷ 20 ಸಾವಿರ ಇಂಟರೆಸ್ಟ್ ಲೈಕ್ಸ್ ಬಂದಿದ್ರೆ, ರಣ್‌ವೀರ್ ಸಿಂಗ್ ಧುರಂಧರ್-2ಗೆ ಜಸ್ಟ್ 50 ಸಾವಿರ ಲೈಕ್ಸ್ ಸಿಕ್ಕಿವೆ. ಅಂದ್ರೆ ಧುರಂಧರ್ ಸೀಕ್ವೆಲ್‌ಗಿಂತ ಬರೋಬ್ಬರಿ ಆರು ಪಟ್ಟು ಮುಂದಿದೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವರ ಟಾಕ್ಸಿಕ್ ಸಿನಿಮಾ. ಇದು ಜನರ ತೀರ್ಪಾಗಿದ್ದು, ಯಾವ ಸಿನಿಮಾಗೆ ಹೆಚ್ಚು ಒಲವು ಅನ್ನೋದಕ್ಕೆ ಇದಕ್ಕಿಂತ ಎಕ್ಸಾಂಪಲ್ ಮತ್ತೊಂದು ಬೇಕಿಲ್ಲ.
ಬಾಲಿವುಡ್ ಬಾದ್‌ಷಾ.. ಕಿಂಗ್ ಖಾನ್ ಶಾರೂಖ್ ಅಂತಹ ಸೂಪರ್ ಸ್ಟಾರ್ ಎದುರೇ ಪ್ರವಾಹದ ವಿರುದ್ಧ ಈಜಿದಂತೆ ಕೆಜಿಎಫ್‌ನ ರಿಲೀಸ್ ಮಾಡಿ, ಕೋಟಿ ಕೋಟಿ ಲೂಟಿ ಮಾಡಿ ತೋರಿಸಿದವರು ಯಶ್. ಗಾಡ್ ಫಾದರ್ ಇಲ್ಲದೆ, ಯಾವುದೇ ದೊಡ್ಡ ಬ್ಯಾಗ್ರೌಂಡ್ ಇಲ್ಲದೆ, ಸ್ವಂತ ಟ್ಯಾಲೆಂಟ್ ಹಾಗೂ ಖದರ್‌ನ ನಂಬಿಕೊಂಡು ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆದವರು ಯಶ್. ಝೀರೋದಿಂದ ಹೀರೋ ಅಷ್ಟೇ ಅಲ್ಲ, ಯಂಗೆಸ್ಟ್ ಸೂಪರ್ ಸ್ಟಾರ್ ಆಗಿ ಮಿಂಚ್ತಿರೋ ಯಶ್ ಅದೆಷ್ಟೋ ಮಂದಿ ಬಾಲಿವುಡ್ ಸೂಪರ್ ಸ್ಟಾರ್‌ಗಳಿಗೂ ರೋಲ್ ಮಾಡೆಲ್ ಆಗಿದ್ದಾರೆ.
ಯಶ್ ಸ್ವ್ಯಾಗ್‌ಗೆ ಕೆಜಿಎಫ್ ವೇಳೆ ರಣ್‌ವೀರ್ ಕ್ಲೀನ್ ಬೋಲ್ಡ್
ಬಿಟೌನ್ ಸ್ಟಾರ್ಸ್‌ಗೂ ರಾಕಿಭಾಯ್ ರೋಲ್ ಮಾಡೆಲ್ ಗುರು
ಯಶ್ ಸ್ವ್ಯಾಗ್ ಹಾಗೂ ಸಿನಿ ಜರ್ನಿಗೆ ಅಕ್ಷರಶಃ ಬಾಲಿವುಡ್ ಸ್ಟಾರ್‌ಗಳೇ ಕ್ಲೀನ್ ಬೋಲ್ಡ್ ಆಗಿದ್ದಾರೆ. ಶಾರೂಖ್, ರಣ್‌ವೀರ್ ಸಿಂಗ್, ಆಲಿಯಾ ಭಟ್, ಶಾರೂಖ್ ಖಾನ್‌ರಿಂದ ಸಾಕಷ್ಟು ಮಂದಿ ಆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ ಕೂಡ. ಅದ್ರಲ್ಲೂ ಕೆಜಿಎಫ್ ಸಿನಿಮಾ ಬಂದಾಗಲೇ ರಣ್‌ವೀರ್ ಸಿಂಗ್ ರಾಕಿಭಾಯ್‌ಗೆ ಫಿದಾ ಆಗಿದ್ರು. ಅವ್ರ ಸ್ಟೈಲ್, ಸ್ವ್ಯಾಗ್‌ನ ಕಾಪಿ ಮಾಡಿದ್ರು. ಅದನ್ನ ತಮ್ಮ ಇನ್ಸ್‌ಟಾ ಪೇಜ್‌ನಲ್ಲಿ ಬರೆದುಕೊಂಡಿದ್ರು.
ಸದ್ಯ ರಣ್‌ವೀರ್ ಸಿಂಗ್ ನಮ್ಮ ಕರ್ನಾಟಕದ ಅಳಿಮಯ್ಯ. ಆದ್ರೀಗ ಮ್ಯಾಟರ್ ಏನಪ್ಪಾಂದ್ರೆ ನಮ್ಮ ಹೆಮ್ಮೆಯ ಕನ್ನಡಿಗನ ಸಿನಿಮಾದ ವಿರುದ್ಧವೇ ಕರುನಾಡ ಅಳಿಯ ಅರಣ್‌ವೀರ್ ಚಿತ್ರ ಬರ್ತಿದೆ. ಹಾಗಾಗಿ ಒಂದು ಕಾಲದಲ್ಲಿ ಸೆಲ್ಫ್ ಮೇಡ್ ಶಹಜಾದ ಯಶ್‌ರನ್ನ ಇನ್ಸ್‌ಪಿರೇಷನ್ ಆಗಿ ತೆಗೆದುಕೊಂಡಿದ್ದ ದೀಪಿಕಾ ಪಡುಕೋಣೆ ಪತಿರಾಯ ಕನ್ನಡದ ಸಿನಿಮಾದ ವಿರುದ್ಧ ಬರ್ತಿರೋದು ಬಹುದೊಡ್ಡ ಚರ್ಚೆಗೆ ಕಾರಣವಾಗ್ತಿದೆ.
ದ್ವಿಪಾತ್ರಕ್ಕೆ ಯಶ್ ಓಂಕಾರ.. ಹೊಸ ಇತಿಹಾಸಕ್ಕೆ ಶ್ರೀಕಾರ..!
ಮಾರ್ಚ್-19ಕ್ಕೆ ಕಂಡು ಕೇಳರಿಯದ ನ್ಯೂ ಚಾಪ್ಟರ್ ಓಪನ್
ಸೆಲ್ಫ್ ಮೇಡ್ ಶಹಜಾದ ಯಶ್ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಮಾಸ್ಟರ್‌ಪೀಸ್ ಆಗಿ, ಮಾನ್‌ಸ್ಟರ್‌ನಂತೆ ನಟನೆ, ಬರವಣಿಗೆ, ನಿರ್ಮಾಣ ಹೀಗೆ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಬಹುದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆದ್ರೆ ಟಾಕ್ಸಿಕ್ ಚಿತ್ರದ ಮೂಲಕ ಡಬಲ್ ರೋಲ್‌ಗೂ ಓಂಕಾರ ಹಾಡಿದ್ದಾರೆ. ಯೆಸ್.. ಮೊದಲಿಗೆ ಬ್ಲಡ್ ಟಬ್‌ನಲ್ಲಿ ಶರ್ಟ್‌ಲೆಸ್ ಆಗಿ ಕೂತಿದ್ದ ಸ್ಟಿಲ್ ಫೋಟೋ ರಿವೀಲ್ ಆಗಿತ್ತು. ಅದ್ರಲ್ಲಿ ಲಾಂಗ್ ಹೇರ್ ಜೊತೆ ಶೋಲ್ಡರ್ ಲೆವೆಲ್‌ನಲ್ಲಿ ಬೆನ್ನಿಗೆ ಟ್ಯಾಟೂ ಕೂಡ ಇತ್ತು. ಆದ್ರೀಗ ಟೀಸರ್‌ನಲ್ಲಿ ಬಯಲಾಗಿರೋ ಲುಕ್ ಬೇರೆಯದ್ದು. ಹೀಗಾಗಿ ಇಲ್ಲಿ ಎರಡು ಪಾತ್ರಗಳಲ್ಲಿ ರಾಕಿಂಗ್ ಸ್ಟಾರ್ ಮಿಂಚೋದು ಖಚಿತ.
ಮಹಿಳಾ ಮಣಿಗಳ ದೊಡ್ಡ ದಂಡೇ ಇಲ್ಲಿದ್ದು, ಮಹಿಳಾ ನಿರ್ದೇಶಕ ಗೀತು ಮೋಹನ್‌ದಾಸ್ ಅವರೇ ನಿರ್ದೇಶಿಸಿರೋ ಸಿನಿಮಾ ಇದಾಗಿದೆ. ಹೀಗಾಗಿ ಇಲ್ಲಿ ಯಶ್ ಜೊತೆ ಸುಮಾರು ಐದು ಮಂದಿ ಔಟ್‌ಸ್ಟ್ಯಾಂಡಿಂಗ್ ನಟಿಮಣಿಯ ಆ್ಯಕ್ಷನ್ ವಿತ್ ಗ್ಲಾಮರ್ ಸ್ವ್ಯಾಗ್ ಕಣ್ಣಿಗೆ ಹಬ್ಬ ನೀಡಲಿದೆ. ಒಟ್ಟಾರೆ ಟೀಸರ್‌ಗೇನೇ ಜನ ಶಾಕ್ ಆದ್ರೆ ಇಂಟರ್‌ನೆಟ್ ಶೇಕ್ ಆಗಿದೆ. ಇನ್ನು ಮಾರ್ಚ್ 19ಕ್ಕೆ ಟಾಕ್ಸಿಕ್ ತೆರೆ ಕಂಡ್ರೆ ಚಿತ್ರರಂಗದ ಇತಿಹಾಸದಲ್ಲಿ ಹೊಸತೊಂದು ಅಧ್ಯಾಯ ತೆರೆದುಕೊಳ್ಳೋದ್ರಲ್ಲಿ ಯಾವುದೇ ಅನುಮಾನವಿಲ್ಲ.





