ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ, ಸುಪ್ರಸಿದ್ಧ ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸೀಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾದಲ್ಲಿರೋ ಡೈಲಾಗ್‌ನಂತೆ ಬಂದದ್ದು ಸ್ವಲ್ಪ ತಡ ಆಯ್ತಲ್ಲಾ..? ಅಂತ ಅಂದುಕೊಳ್ಳೋರಿಗೆ ಸಾಧಿಸಿ ಬಂದು ಸೀಟ್ ಏರಿದ್ದಾರೆ. ಇಷ್ಟಕ್ಕೂ ಒನ್ ಮ್ಯಾನ್ ಆರ್ಮಿಯಾಗಿ ಶೆಟ್ರು ಮಾಡಿದ ಸಾಹಸ ಎಂಥದ್ದು..? ಕಾಂತಾರ ಓಟಿಟಿ ಫೇಕ್ ರಿಲೀಸ್ ಡೇಟ್‌ನ ವೈರಲ್ ಮಾಡ್ತಿರೋರ ಷಡ್ಯಂತ್ರದ ಹಿಂದಿನ ಅಸಲಿ ಕಥೆ ಇಲ್ಲಿದೆ ನೋಡಿ.
- ವೀಕೆಂಡ್ ವಿತ್ ರಮೇಶ್ ಶುರು.. ಸಾಧಕರ ಸೀಟ್‌ನಲ್ಲಿ ಶೆಟ್ರು
- ಬಂದದ್ದು ತಡ ಆಗಿಲ್ಲ ಶೆಟ್ರೇ.. ಸಾಧಿಸಿ ಬಂದ್ರಿ ಎಂದ ಕನ್ನಡಿಗರು
- ಕಾಂತಾರ OTT ಎಂಟ್ರಿ ಫೇಕ್ ಪೋಸ್ಟ್.. ಇಲ್ಲಿದೆ ಅಸಲಿ ಡೇಟ್
- ಅಕ್ಟೋಬರ್ 30ಕ್ಕೆ ಓಟಿಟಿ ರಿಲೀಸ್.. ಕಿಡಿಗೇಡಿಗಳಿಂದ ಈ ಕೃತ್ಯ
- ಅಗ್ರಿಮೆಂಟ್ ಪ್ರಕಾರ 8 ವಾರಗಳ ನಂತ್ರ ಪ್ರೈಮ್‌ಗೆ ಕಾಂತಾರ ಲಗ್ಗೆ
- 125 ಕೋಟಿ ದಾಖಲೆ ಮೊತ್ತಕ್ಕೆ ಸೇಲ್.. ಡಿಸೆಂಬರ್‌ನಲ್ಲಿ OTTಗೆ
2014ರ ಆಗಸ್ಟ್ 2ರಂದು ರಾಜರತ್ನ, ಕರ್ನಾಟಕ ರತ್ನ ಅಪ್ಪುರಿಂದ ಶುರುವಾದ ವೀಕೆಂಡ್ ವಿತ್ ರಮೇಶ್ ಅನ್ನೋ ಸಾಧಕರ ಕುರಿತ ಝೀ ಕನ್ನಡದ ಸ್ಪೆಷಲ್ ಶೋ, ಸದ್ಯ ಐದು ಸೀಸನ್‌ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. 2023ರ ಜೂನ್ 11ರಂದು ಪ್ರಸಾರಗೊಂಡ ಡಿಕೆ ಶಿವಕಮಾರ್ ಕುರಿತ ಸಂಚಿಕೆಯೇ ಕೊನೆಯ ಸಂಚಿಕೆ ಆಗಿತ್ತು. ಆದ್ರೀಗ ಹೊಸ ಸೀಸನ್ ಶುರುವಾಗ್ತಿದೆ. ಸೀಸನ್-6ರಲ್ಲಿ ಸಾಧಕರ ಸೀಟ್‌ನಲ್ಲಿ ಕೂರುತ್ತಿರೋ ಮೊದಲ ಸಾಧಕ, ಸದ್ಯ ಎಲ್ಲೆಡೆ ಸಂಚಲನ ಮೂಡಿಸ್ತಿರೋ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.
ಯೆಸ್.. ವೀಕೆಂಡ್ ವಿತ್ ರಮೇಶ್ ಶೋ ಮತ್ತೆ ಶುಭಾರಂಭ ಆಗುವ ಮುನ್ಸೂಚನೆ ನೀಡಿದ್ದಾರೆ ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ. ಸಿನಿಮಾದಲ್ಲಿ ಒಂದು ಡೈಲಾಗ್ ಇದೆ.. ರಿಷಬ್ ಎಂಟ್ರಿ ಸೀನ್‌ನಲ್ಲಿ ಅವ್ರ ಎಂಟ್ರಿ ಆಗ್ತಿದ್ದಂತೆ ಓಪನಿಂಗ್ ಡೈಲಾಗೇ ಬಂದದ್ದು ಸ್ವಲ್ಪ ತಡ ಆಯ್ತಾ ಅಂತ..?. ಆ ಡೈಲಾಗ್‌ಗೆ ಈಗ ಅರ್ಥ ಬಂದಿದೆ. ವೀಕೆಂಡ್ ರೆಡ್ ಸೀಟ್‌ಗೆ ರಿಷಬ್ ಬಂದದ್ದು ಕೂಡ ತಡವಾಗಿದೆ. ಆದ್ರೆ ಅವರು ಭಾರತೀಯ ಚಿತ್ರರಂಗ ಮೆಚ್ಚಿದಂತಹ ಸಿನಿಮಾ ನೀಡಿ, ದೊಡ್ಡ ಸಾಧನೆ ಮಾಡಿ ಬಂದದ್ದು ಪ್ರಸ್ತುತ ಅನಿಸಿದೆ. ಕನ್ನಡಿಗರೆಲ್ಲಾ ಆ ಸಾಧಕರ ಸೀಟ್‌ನಲ್ಲಿ ಕೂರಲು ರಿಷಬ್ ಅರ್ಹರು ಅಂತಿದ್ದಾರೆ.
ಸದ್ಯ ಪ್ರೋಮೋ ರಿವೀಲ್ ಮಾಡಲಾಗಿದ್ದು, ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ರಮೇಶ್ ಅರವಿಂದ್ ಅವರು ಕೇಳುವ ಪ್ರಶ್ನೆಗೆ, ಈ ಸೀಟ್‌ನಲ್ಲಿ ಕೂರಲು, ಹೇಳೋಕೆ ಒಂದು ಕಥೆ ಇರಬೇಕಲ್ವಾ ಅಂತ ನಗು ನಗುತ್ತಲೇ ಉತ್ತರಿಸಿದ್ದಾರೆ ರಿಷಬ್ ಶೆಟ್ಟಿ.
ಝೀ ಕುಟುಂಬ ಅವಾರ್ಡ್ಸ್ ಫಂಕ್ಷನ್‌ಗೆ ಯುವರಾಣಿ ಕನಕವತಿ ಕೂಡ ಆಗಮಿಸಿದ್ದು, ರುಕ್ಮಿಣಿ ವಸಂತ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ ಸೀರಿಯಲ್ ಹೀರೋಗಳು. ನಯಾ ನ್ಯಾಷನಲ್ ಕ್ರಶ್ ಆಗಿ ಮಿಂಚ್ತಿರೋ ರುಕ್ಕಮ್ಮ ಸಪ್ತಸಾಗರಗಳಾಚೆ ಸದ್ದು ಮಾಡ್ತಿರೋದು ಖುಷಿಯ ವಿಚಾರ.
700 ಕೋಟಿಗೂ ಅಧಿಕ ಮೊತ್ತ ಗಳಿಸಿ, ಹೌಸ್‌ಫುಲ್ ಪ್ರದರ್ಶನಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರೆಸಿರೋ ಕಾಂತಾರ-1 ಓಟಿಟಿ ರಿಲೀಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗ್ತಿದೆ. ಅದರ ಪ್ರಕಾರ ಇದೇ ಅಕ್ಟೋಬರ್ 30ಕ್ಕೆ ಕಾಂತಾರ ಚಾಪ್ಟರ್-1 ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದ್ರೆ ಇದು ಫೇಕ್ ಪೋಸ್ಟ್.
ಯೆಸ್.. ಹೊಂಬಾಳೆ ಫಿಲಂಸ್ ಕಾಂತಾರ ಚಿತ್ರವನ್ನು ಬರೋಬ್ಬರಿ 125 ಕೋಟಿ ದಾಖಲೆ ಮೊತ್ತಕ್ಕೆ ಅಮೆಜಾನ್ ಪ್ರೈಮ್‌ಗೆ ಓಟಿಟಿ ಹಕ್ಕುಗಳನ್ನ ಮಾರಾಟ ಮಾಡಿರೋದು ನಿಜ. ಆದ್ರೆ ಅದು ಸಿನಿಮಾ ರಿಲೀಸ್ ಆದ 8 ವಾರಗಳ ನಂತರ ಓಟಿಟಿಗೆ ಲಗ್ಗೆ ಇಡಬೇಕಿದೆ. ಹಾಗಂತ ನಿರ್ಮಾಣ ಸಂಸ್ಥೆ ಪ್ರೈಮ್ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದೆ. ಹೀಗಿರುವಾಗ ರಿಲೀಸ್ ಆದ 28 ದಿನದಲ್ಲಿ ಚಿತ್ರ ಓಟಿಟಿಗೆ ಬರೋಕೆ ಹೇಗೆ ಸಾಧ್ಯ ನೀವೇ ಹೇಳಿ.
ಒಂದು ವೇಳೆ ಕಾಂತಾರ ಪ್ರೈಮ್‌ನಲ್ಲಿ ಪ್ರಸಾರ ಆಗ್ಬೇಕು ಅಂದ್ರೆ ಒಪ್ಪಂದದ ಪ್ರಕಾರ 8 ವಾರಗಳ ಗಡುವು ಮುಗಿಯಬೇಕು. ಅಂದ್ರೆ ನವೆಂಬರ್ ತಿಂಗಳಲ್ಲಿ ಕೂಡ ಓಟಿಟಿಗೆ ಬರಲ್ಲ. ಡಿಸೆಂಬರ್ ಮೊದಲ ವಾರದಲ್ಲಿ ಬರೋದು ಬಹುತೇಕ ಖಚಿತ. ಆದ್ರೆ ಓಟಿಟಿಗೆ ಬಂದ್ಮೇಲೆ ನೋಡೋಣ ಬಿಡು ಅಂತ ಯಾರಾದ್ರೂ ಇದ್ರೆ, ನೀವು ನಿಜಕ್ಕೂ ಥಿಯೇಟ್ರಿಕಲ್ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್‌ನ ಮಿಸ್ ಮಾಡ್ಕೋತೀರಾ. ಅಂತಹ ಸಾಹಸ ಮಾತ್ರ ಮಾಡ್ಬೇಡಿ. ಇನ್ನೂ ಒಂದೂವರೆ ತಿಂಗಳ ಸಮಯ ಇದೆ. ಹಾಗಾಗಿ ಥಿಯೇಟರ್ ಅನುಭವ ಪಡೆದುಕೊಳ್ಳಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್