ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಮಾತನಾಡಿದ್ರೆ ಹುಷಾರ್. ಖಡಕ್ ವಾರ್ನಿಂಗ್ ಕೊಡೋಕೆ ಅಂಡರ್‌ವರ್ಲ್ಡ್ ರೌಡಿಗಳೇ ಎಂಟ್ರಿ ಕೊಟ್ಟು ಬಿಡ್ತಾರೆ. ರೌಡಿಗಳ ಸಹವಾಸದಿಂದ ಕ್ಯಾನ್ಸಲ್ ಆಗುವಂತಿದೆ ನಟ ದರ್ಶನ್ ಬೇಲ್ ಆರ್ಡರ್. ಏನ್ ಬಾಸ್ ಇದೆಲ್ಲಾ..? ನಿಮಗೆ ನಿಜಕ್ಕೂ ಇದೆಲ್ಲಾ ಬೇಕಿತ್ತಾ ಬಾಸ್ ಅನ್ನೋ ಇನ್‌ಸೈಡ್ ಸ್ಟೋರಿ ಇಲ್ಲಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳು ಸೆರೆಮನೆ ವಾಸ ಮಾಡಿ ಬೇಲ್ ಮೇಲೆ ಹೊರಬಂದಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮತ್ತೆ ಟೆನ್ಷನ್ ಶುರುವಾಗಿದೆ. ಫಾರನ್‌ಗೆ ಹೋದ್ರೂ, ಮತ್ತೆ ಬೆಂಗಳೂರಿಗೆ ವಾಪಸ್ ಬಂದ್ರೂ ಸಹ ಎಲ್ಲೂ ನೆಮ್ಮದಿ ಇಲ್ಲದಂತಾಗಿದೆ. ಅದೇ ಅಲ್ಲವೇ ಕರ್ಮ ಇದನ್ನೇ ಅಲ್ಲವೇ ಮಾಡಿದ ಪಾಪ ಅನ್ನೋದು..?
ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ಥಾಯ್ಲೆಂಡ್‌ಗೆ ಹಾರಿದ್ದ ದಚ್ಚು, ಇಂದು ಬೆಳಗ್ಗೆ ಅಷ್ಟೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದ್ರೆ ಇತ್ತೀಚೆಗೆ ಹೈಕೋರ್ಟ್ ಬೇಲ್ ನೀಡಿದ್ದರ ವಿಚಾರ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅವರು ಮಾಡಿದ ತಪ್ಪನ್ನ ನಾವು ಮಾಡಲ್ಲ. ಕೆಲವೊಮ್ಮೆ ಕೆಳ ಹಂತದ ನ್ಯಾಯಾಲಯಗಳು ತಪ್ಪು ಮಾಡಿವೆ ಎಂದಿದ್ದರು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಪರ್ದಿವಾಲಾ.
ಇನ್ನೊಂದಷ್ಟು ಆರೋಪಿಗಳ ಕುರಿತ ವಾದವನ್ನು ಒಂದು ವಾರದಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸಲು ಹೇಳಿರುವ ಸುಪ್ರೀಂ ಕೋರ್ಟ್, ಹತ್ತು ದಿನದಲ್ಲಿ ದರ್ಶನ್ & ಡಿ ಗ್ಯಾಂಗ್ ಬೇಲ್ ಭವಿಷ್ಯದ ತೀರ್ಪನ್ನು ನೀಡಲಿದೆಯಂತೆ. ಆದ್ರೆ ದರ್ಶನ್ ಪದೇ ಪದೇ ಮಾಡಿಕೊಳ್ತಿರೋ ಎಡವಟ್‌ಗಳನ್ನ ಅವಲೋಕಿಸಿದ್ರೆ ಆತನಿಗೆ ಬೇಲ್ ಕ್ಯಾನ್ಸಲ್ ಆಗೋದು ಬಹುತೇಕ ಖಚಿತ ಅಂತಿವೆ ಮೂಲಗಳು.
ಒಂದು ವೇಳೆ ನಟ ದರ್ಶನ್ ಬೇಲ್ ರದ್ದಾದ್ರೆ ಅದಕ್ಕೆ ಪ್ರಮುಖ ಕಾರಣ ದರ್ಶನ್ ಅವರೇ ಆಗ್ತಾರೆ. ನಂತ್ರ ಅವರ ಫ್ಯಾನ್ಸ್ ಕಾರಣೀಭೂತರಾಗ್ತಾರೆ. ದರ್ಶನ್ ವರ್ತನೆ ಹಾಗೂ ಮಾಡ್ತಿರೋ ಸ್ನೇಹ ಸಂಘಗಳಿಂದ ಮತ್ತೆ ಜಾಮೀನು ರದ್ದಾಗೋ ಸಾಧ್ಯತೆಯಿದೆ. ಒಮ್ಮೆ ಪರಪ್ಪನ ಅಗ್ರಹಾರದ ಜೈಲಲ್ಲಿ ಇದ್ದಂತೆಯೇ ವಿಲ್ಸನ್ ಗಾರ್ಡನ್ ನಾಗ ಹಾಗೂ ರೌಡಿಗಳ ಜೊತೆಗಿನ ಫೋಟೋ ರಿವೀಲ್ ಆಗಿತ್ತು. ನಂತ್ರ ಇತ್ತೀಚೆಗೆ ಥಾಯ್ಲೆಂಡ್‌ನಲ್ಲಿರುವಾಗ ಮಂಗಳೂರಿನ ಕೊಲೆ ಆರೋಪಿ ಬಿಪಿನ್ ರೈ ಜೊತೆ ಮೋಜು ಮಸ್ತಿ ಮಾಡಿದ್ದಾರೆ.
ಹೀಗೆ ಕೊಲೆ ಪಾತಕರು ಹಾಗೂ ಅಂಡರ್‌ವರ್ಲ್ಡ್ ನಂಟಿರೋ ರೌಡಿಗಳ ನಂಟು ದರ್ಶನ್‌ಗೆ ಯಾಕೆ ಬೇಕಿತ್ತು ಅಲ್ಲವೇ..? ಇದನ್ನೆಲ್ಲಾ ನೋಡ್ತಿದ್ರೆ ಜನರೇ ಏನ್ ಬಾಸ್ ಇದೆಲ್ಲಾ ಅಂತ ಕೇಳ್ತಾರೆ. ಅಂಥದ್ರಲ್ಲಿ ನ್ಯಾಯಾಧೀಶಯರು ಕೇಳೋದ್ರಲ್ಲಿ ಅನುಮಾನವೇ ಇಲ್ಲ. ಇಷ್ಟೇ ಅಲ್ಲ, ದರ್ಶನ್‌ರ ಅತ್ಯಾಪ್ತ ಬುಲೆಟ್ ಪ್ರಕಾಶ್‌ರ ಮಗ ರಕ್ಷಕ್ ಕೂಡ ದರ್ಶನ್‌ಗೆ ಡೈ ಹಾರ್ಡ್ ಫ್ಯಾನ್. ಆತ ಮಾಡಿರೋ ಎಡವಟ್ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ.
ನಟ ಪ್ರಥಮ್ ಈ ಹಿಂದೆ ದರ್ಶನ್‌ರನ್ನ ಅನ್ನಪೂಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಫ್ಯಾನ್ಸ್ ವಿರುದ್ಧ ನೀಡಿದ ಒಂದು ಹೇಳಿಕೆ ಇಂದಿಗೂ ಆತನನ್ನ ಬೆಂಬಿಡದೆ ಕಾಡ್ತಿದೆ. ಆತ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಫ್ಯಾನ್ಸ್ ಬಿಡ್ತಿಲ್ಲ. ಅದೇ ಕಾರಣದಿಂದ ಇತ್ತೀಚೆಗೆ ದೊಡ್ಡಬಳ್ಳಾಪುರದ ಡಿ ಕ್ರಾಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ದರ್ಶನ್ ಫ್ಯಾನ್ ಕಮ್ ನಟ ರಕ್ಷಕ್ ಬುಲೆಟ್ 22 ಮಂದಿ ರೌಡಿಗಳಿಂದ ನಟ ಪ್ರಥಮ್ ಮೇಲೆ ಅಟ್ಯಾಕ್ ಮಾಡಿಸಿದ್ದಾನೆ.
ಡ್ಯಾಗರ್ ಸೇರಿದಂತೆ ಒಂದಷ್ಟು ಕಿಲ್ಲರ್ ವೆಪನ್‌ಗಳಿಂದ ಜೀವ ಬೆದರಿಕೆ ಹಾಕಿದ್ದಾರೆ. ‘ಬಾಸ್ ದೇವರು’.. ‘ಅವರ ಬಗ್ಗೆ ಮಾತಾಡ್ಬೇಡ ಅಷ್ಟೇ’ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ‘ಜಾಸ್ತಿ ಮಾತಾಡ್ತಿದೀಯ ಬಾಸ್ ಬಗ್ಗೆ’. ‘ಡ್ಯಾಗರ್ ಒಳಗೆ ಹಾಕಿದ್ರೆ ಲೈಫ್ ಪೂರ್ತಿ ಎದ್ದೇಳಲ್ಲ ನೀನು’ ಅಂತೆಲ್ಲಾ ಧಮ್ಕಿ ಹಾಕಲಾಗಿದೆ. ಇದನ್ನ ಸ್ವತಃ ಪ್ರಥಮ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಳಿ ದೂರವಾಣಿ ಕರೆ ಮೂಲಕ ಹೇಳಿಕೊಂಡಿದ್ದಾರೆ. ಆ ಭಯಾನಕ ವಿಷಯಗಳನ್ನ ಪ್ರಥಮ್ ಬಾಯಿಂದಲೇ ಒಮ್ಮೆ ಕೇಳಿ.
ಈ ತರ ಎಲ್ಲಾ ಕಿರಿಕ್ ಗಳನ್ನ ಮಾಡಿಕೊಳ್ತಾ ಹೋದ್ರೆ ಕೋರ್ಟ್ ಬೇಲ್ ಕ್ಯಾನ್ಸಲ್ ಮಾಡದೆ ಮತ್ತೇನು ಮಾಡುತ್ತೆ ಅಲ್ಲವೇ..? ಈ ಬಗ್ಗೆ ದರ್ಶನ್‌ಗೆ ಈಗಲೂ ಸಹ ಬುದ್ದಿ ಹೇಳೋರೇ ಇಲ್ವಾ ಅನಿಸ್ತಿದೆ. ಇನ್ನಾದ್ರೂ ಎಚ್ಚೆತ್ತುಕೊಂಡ್ರೆ ದಾಸನಿಗೆ ಒಳ್ಳೆಯ ಲೈಫ್ ಇರಲಿದೆ. ಇಲ್ಲವಾದಲ್ಲಿ ಇಂಥದ್ದೇ ವಿವಾದಗಳ ಸುಳಿಯಲ್ಲಿ ನಲುಗಿ ಹೋಗ್ತಾರೆ. ಒಳ್ಳೆಯ ಕಲಾವಿದ. ಅವ್ರ ಸಿನಿಮಾಗಳನ್ನ ನೋಡೋರು, ಅವ್ರನ್ನ ಆರಾಧಿಸೋರ ಸಂಖ್ಯೆ ದೊಡ್ಡ ಮಟ್ಟಕ್ಕಿದೆ. ಹೀಗಿರುವಾಗ ಹೇಗಿರಬೇಕು ಅನ್ನೋ ವಿವೇಚನೆ ದರ್ಶನ್‌ಗೆ ಬಂದ್ರೆ ಸಾಕು.