ಕೋಟಿ ಕೋಟಿ ಆಸ್ತಿ, ಐಷಾರಾಮಿ ಜೀವನ ಬಾಲಿವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ, ಈಗ ಕೊಡಗು ಜಿಲ್ಲೆಯಲ್ಲಿ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿ ದಾಖಲೆ ಬರೆದಿದ್ದಾರೆ. ಅದು ಯಾರೋ ಅಲ್ಲ ರಶ್ಮಿಕಾ ಮಂದಣ್ಣ, ಈವರೆಗೆ ಎಷ್ಟು ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾರೆ ಗೊತ್ತಾ? ಈ ಸ್ಟೋರಿ ನೋಡಿ..
- ರಶ್ಮಿಕಾನೇ ಕೂರ್ಗ್ ನ ನಂ.1 ಟ್ಯಾಕ್ಸ್ ಪೇಯರ್ ಗೊತ್ತಾ?
- ಹಿಟ್ ಸಿನಿಮಾಗಳು, ಹೈ ಇನ್ಕಮ್, ಹೈ ಟ್ಯಾಕ್ಸ್ ಕೊಡಗು ಗರ್ವ
- ಗ್ಲಾಮರ್ ಮಾತ್ರ ಅಲ್ಲ ಜವಾಬ್ದಾರಿಯೂ ಇದೆ..!
- 4.69 ಕೋಟಿ ಟ್ಯಾಕ್ಸ್ ಪಾವತಿ ದಾಖಲೆ ಬರೆದ ರಶ್ಮಿಕಾ
ಕನ್ನಡ ಚಿತ್ರರಂಗದಿಂದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟು, ನಂತರ ತೆಲುಗು ಚಿತ್ರರಂಗದಲ್ಲಿ ತನ್ನ ಅದೃಷ್ಟವನ್ನೇ ಬದಲಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ, ಇಂದು ಬಾಲಿವುಡ್‌ನಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಸಿನಿಮಾಗಳಲ್ಲಿ ಮಾತ್ರವಲ್ಲ ಆದಾಯ ತೆರಿಗೆ ಪಾವತಿಯಲ್ಲಿ ಕೂಡ ರಶ್ಮಿಕಾ ಟಾಪ್ ಸ್ಥಾನಕ್ಕೇರಿದ್ದಾರೆ.
ಸಿನಿ ಇಂಡಸ್ಟ್ರಿಯಲ್ಲಿ ಟಾಪ್ ನಲ್ಲಿರುವ ರಶ್ಮಿಕಾ ಈಗ ಪಾವತಿನಲ್ಲೂ ಟಾಪ್ ನಲ್ಲಿದ್ದಾರೆ. ಎಸ್, ರಶ್ ತಮ್ಮ ಉದ್ಯಮದ ಹಣಕಾಸಿನ ಎಲ್ಲಾ ವಹಿವಾಟನ್ನು ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ ಲ್ಪ್ ಹೆಸರಿನಲ್ಲಿ ನಿರ್ವಹಿಸುತ್ತಿದ್ದಾರೆ. ಇದೇ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲೇ ತಮ್ಮ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ.
ಅಧಿಕೃತ ದಾಖಲೆಗಳ ಪ್ರಕಾರ,ನ್ಯಾಷನಲ್ ಕ್ರಶ್ ಈವರೆಗೆ ಒಟ್ಟು 4.69 ಕೋಟಿ ಆದಾಯ ತೆರಿಗೆ ಪಾವತಿಸಿದ್ದಾರೆ. ಇದು ಕೊಡಗು ಜಿಲ್ಲೆಯ ತೆರಿಗೆ ಪಾವತಿದಾರರಲ್ಲಿ ಅತ್ಯಧಿಕ ಮೊತ್ತ ಎನ್ನಲಾಗಿದೆ. ಈ ಮೂಲಕ ಕೊಡಗು ಜಿಲ್ಲೆಯಲ್ಲಿ ರಶ್ಮಿಕಾ ಮಂದಣ್ಣ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿ ಹೊರಹೊಮ್ಮಿದ್ದಾರೆ.
ಮಾರ್ಚ್ ತಿಂಗಳವರೆಗೆ ನಾಲ್ಕನೇ ತ್ರೈಮಾಸಿಕದ ತೆರಿಗೆ ಪಾವತಿಯನ್ನು ಕೂಡ ರಶ್ಮಿಕಾ ಪಾವತಿಸಲಿದ್ದಾರೆ. ವಿರಾಜಪೇಟೆ ನಿವಾಸಿಯಾಗಿರುವ ಕೊಡಗಿನ ಕುವರಿ, ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಬದುಕು ಆರಂಭಿಸಿದವರು. ಟಾಲಿವುಡ್‌ಗೆ ಕಾಲಿಟ್ಟ ಬಳಿಕ ರಶ್ಮಿಕಾ ಬದುಕೇ ಬದಲಾಗಿತು. ಇಂದು ರಶ್ಮಿಕಾ ಮಂದಣ್ಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಒಂದು ಸಿನಿಮಾಗೆ ಬರೋಬ್ಬರಿ 9 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಬ್ರಾಂಡ್ ಎಂಡೋರ್ಸ್‌ಮೆಂಟ್, ಜಾಹೀರಾತುಗಳಿಂದಲೂ ಭಾರೀ ಆದಾಯ ಗಳಿಸುತ್ತಿದ್ದಾರೆ.
ಇನ್ನೂ 2026ರ ಕೊನೆಯಲ್ಲಿ ಅಥವಾ 2027ರಲ್ಲಿ ‘ಪುಷ್ಪ 3 ದಿ ರಾಂಪೇಜ್’ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಸಿನಿ ಪರದೆಯಲ್ಲೂ, ನಿಜ ಜೀವನದಲ್ಲೂ ಯಶಸ್ಸಿನ ಹೊಸ ಅಧ್ಯಾಯ ಬರೆಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





