ಮದುವೆಗೂ ಮೊದಲೇ ವಿಜಯ್ ದೇವರಕೊಂಡ ಫ್ಯಾಮಿಲಿ ಮೇಲೆ ರಶ್ಮಿಕಾ ಮಂದಣ್ಣಗೆ ಎಲ್ಲಿಲ್ಲದ ಲವ್ವು. ಹೌದು.. ಅತ್ತೆ ಫ್ಯಾಮಿಲಿ ಅಂದ್ರೆ ತನ್ನ ಫ್ಯಾಮಿಲಿಗಿಂತ ಹೆಚ್ಚು ಅನ್ನುವಂತೆ ಆಡ್ತಾರೆ ನ್ಯಾಷನಲ್ ಕ್ರಶ್. ಇತ್ತೀಚೆಗೆ ಮೈದುನನ ಸಿನಿಮಾಗಾಗಿ ರಶ್ಮಿಕಾ ಮಾಡಿದ್ದೇನು ಅಂತ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ನೋಡಿ.
- ಮೈದುನನ ಚಿತ್ರಕ್ಕೆ ರಶ್ಮಿಕಾ ಕ್ಲಾಪ್.. ಅಬ್ಬಬ್ಬಾ ಎಷ್ಟು ಲವ್ವೋ
- ಮದ್ವೆಗೂ ಮೊದಲೇ ಅತ್ತೆ ಫ್ಯಾಮಿಲಿ ಮೇಲೆ ಸಿಕ್ಕಾಪಟ್ಟೆ ಕೇರ್
- ಮತ್ತೆ ‘ಬೇಬಿ’ ಜೋಡಿ.. ಆನಂದ್ ಜೊತೆ ವೈಷ್ಣವಿ ಮೋಡಿ
- ವಿಜಯ್ ಜೊತೆ ಸದ್ಯದಲ್ಲೇ ಹಸೆಮಣೆ ಏರ್ತಾರೆ ರಶ್ಮಿಕಾ..!
ಇದು ಇತ್ತೀಚೆಗೆ ಸೆಟ್ಟೇರಿದ ಆನಂದ್ ದೇವರಕೊಂಡ ನಟನೆಯ ಹೊಚ್ಚ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ. ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಬೇಬಿ ಸಿನಿಮಾದಲ್ಲಿ ಮೋಡಿ ಮಾಡಿದ್ದ ನಟಿ ವೈಷ್ಣವಿ ಜೊತೆಗೇನೇ ಮತ್ತೊಮ್ಮೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ ಆನಂದ್ ದೇವರಕೊಂಡ. ಅಂದಹಾಗೆ ಸಿನಿಮಾ ಮುಹೂರ್ತದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಹೀರೋ-ಹೀರೋಯಿನ್ ಅಲ್ಲ. ನಮ್ಮ ಕನ್ನಡತಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ.
ಯೆಸ್.. ಪ್ರೊಡಕ್ಷನ್ ನಂ.32 ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದೇ ರಶ್ಮಿಕಾ. ಅಂದಹಾಗೆ ರಶ್ಮಿಕಾ ಬಂದು ಸಿನಿಮಾಗೆ ಕ್ಲಾಪ್ ಮಾಡೋಕೆ ಕಾರಣ ಆನಂದ್ ತನ್ನ ಭಾವಿ ಪತಿ ವಿಜಯ್ ದೇವರಕೊಂಡ ಸಹೋದರ ಅನ್ನೋದಾಗಿದೆ. ಇದನ್ನ ಕಂಡು ಅಲಲಲಲೇ.. ರಶ್ಮಿಕಾಗೆ ಮದ್ವೆಗೂ ಮೊದಲೇ ಅತ್ತೆ ಫ್ಯಾಮಿಲಿ ಅಂದ್ರೆ ಏನು ಲವ್ವು..? ಏನ್ ಕೇರ್ ಗುರೂ ಅಂತಿದ್ದಾರೆ.
ರೌಡಿ ವಿಜಯ್ ದೇವರಕೊಂಡ ಜೊತೆ ಎರಡು ಸಿನಿಮಾಗಳನ್ನ ಮಾಡಿರೋ ರಶ್ಮಿಕಾ, ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನ ರಿಯಲ್ ಲೈಫ್‌ಗೂ ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಕದ್ದು ಮುಚ್ಚಿ ಡೇಟ್ ಮಾಡ್ತಿದ್ದ ಈ ಜೋಡಿ, ಇದೀಗ ರಾಜಾರೋಷವಾಗಿ ಸಾರ್ವಜನಿಕವಬಾಗಿಯೇ ಒಟ್ಟೊಟ್ಟಿಗೆ ಓಡಾಡಲು ಶೂರುವಿಟ್ಟಿದೆ. ಸದ್ಯದಲ್ಲೇ ಮದ್ವೆ ಕೂಡ ಅಗ್ತಿರೋ ಇವರುಗಳು, ಹಸೆಮಣೆ ಏರುವುದನ್ನೇ ಕಾಯ್ತಿದ್ದಾರೆ ಫ್ಯಾನ್ಸ್.
ಅಂದಹಾಗೆ ರಶ್ಮಿಕಾ ಪುಷ್ಪ-2 ಸಿನಿಮಾ ರಿಲೀಸ್ ಬಳಿಕ ದೇವರಕೊಂಡ ಫ್ಯಾಮಿಲಿಯನ್ನ ಸ್ಪೆಷಲ್ ಸ್ಕ್ರೀನಿಂಗ್‌ಗೆ ಕರೆದೊಯ್ದಿದ್ರು. ಅಲ್ಲದೆ, ಮೈದುನ ಆನಂದ್ ದೇವರಕೊಂಡ ಪ್ರೀವಿಯಸ್ ಮೂವಿ ಗಂ ಗಂ ಗಣೇಶ ಚಿತ್ರದ ಇವೆಂಟ್‌ಗೂ ಗೆಸ್ಟ್ ಆಗಿ ಹೋಗಿ ಶುಭ ಕೋರಿದ್ರು. ಇದೆಲ್ಲಾ ಜವಾಬ್ದಾರಿಯುತ ಸೊಸೆಯ ನಡೆ ಅಂತ ಇಡೀ ಚಿತ್ರರಂಗ ಆಕೆಯನ್ನ ಶ್ಲಾಘಿಸುತ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್