ಮೋಹಕತಾರೆ ರಮ್ಯಾ ಹಾಗೂ ದೊಡ್ಮನೆ ಹುಡ್ಗ ವಿನಯ್ ರಾಜ್ ಇತ್ತೀಚೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಇವರದ್ದೇ ಫೋಟೋಸ್ ವೈರಲ್. ಇವರಿಬ್ಬರ ನಡುವೆ ಡೇಟಿಂಗ್, ಚಾಟಿಂಗ್ ಏನೇನೋ ನಡೀತಿದೆ ಅಂದುಕೊಂಡಿದ್ದವ್ರಿಗೆ ಖುದ್ದು ರಮ್ಯಾ ಒಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇಷ್ಟಕ್ಕೂ ಆ ಬಾಂಧವ್ಯಕ್ಕೆ ಆಕೆ ಹೇಳಿದ್ದೇನು ಅನ್ನೋದರ ಕಂಪ್ಲೀಟ್ ಡೀಟೈಲ್ ಇಲ್ಲಿದೆ.
- ಏನಿಲ್ಲ ಏನಿಲ್ಲ.. ರಮ್ಯಾ- ವಿನಯ್ ರಾಜ್ ನಡುವೆ ಏನಿಲ್ಲ..!
- ಡೇಟಿಂಗ್ ಮಾಡ್ತಿದ್ದೀರಾ ಅಂದವ್ರಿಗೆ ರಮ್ಯಾ ಕೊಟ್ರು ಸ್ಪಷ್ಟನೆ
- ಅಮೆರಿಕದಲ್ಲಿ ಆತನ ಕೈ ಹಿಡಿದು ಮೋಹಕತಾರೆ ಜಾಲಿ ಜಾಲಿ
- ನೀವು, ನಿಮ್ಮ ಇಮ್ಯಾಜಿನೇಷನ್.. ವಿನಯ್ ನಂಗೆ ತಮ್ಮನಿದ್ದಂತೆ
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾ ಹಾಗೂ ರಾಜಕಾರಣದಿಂದ ಕೊಂಚ ದೂರ ಉಳಿದಿದ್ರೂ ಸಹ ಸದಾ ಸುದ್ದಿಯಲ್ಲಿರೋ ನಟಿಮಣಿ. ಹೌದು, ಮೋಹಕತಾರೆಯ ಸ್ಟಾರ್ಡಮ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ಈಗಲೂ ಅಭಿಮಾನಿಗಳಿಗೆ ರಮ್ಯಾ ಅಂದ್ರೆ ಹಾರ್ಟ್ ಫೇವರಿಟ್. ಆಕೆ ಎಲ್ಲೇ ಹೋದರೂ ನೂರಾರು ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ತಾರೆ. ರಮ್ಯಾ.. ರಮ್ಯಾ.. ರಮ್ಯಾ.. ಅಂತ ಪ್ರೀತಿ, ಅಭಿಮಾನದಿಂದ ಕೂಗ್ತಾರೆ.
ಅದ್ಯಾಕೋ ರಮ್ಯಾ ಇತ್ತೀಚೆಗೆ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲ. ಹಾಗಂತ ಚಿತ್ರರಂಗದ ಆ್ಯಕ್ಟಿವಿಟೀಸ್ ಹಾಗೂ ರಾಜಕಾರಣದಲ್ಲಿನ ತಪ್ಪುಗಳನ್ನ ಪ್ರಶ್ನಿಸೋದ್ರಿಂದ ದೂರ ಆಗಲಿಲ್ಲ. ಸದಾ ಅನ್ಯಾಯ, ಅಧರ್ಮವನ್ನು ಟೀಕಿಸುತ್ತಾ, ಪ್ರಶ್ನಿಸುತ್ತಾ ಬರ್ತಿದ್ದಾರೆ. ಈ ಮಧ್ಯೆ ದೊಡ್ಮನೆಯ ಹುಡುಗ ವಿನಯ್ ರಾಜ್‌ಕುಮಾರ್ ಜೊತೆ ರಮ್ಯಾ ಜಾಸ್ತಿ ಕಾಣಿಸಿಕೊಳ್ತಿದ್ದಾರೆ. ಇವರ ಫೋಟೋಸ್ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
ರಮ್ಯಾ ವಿನಯ್ ಜೊತೆ ಇರೋ ಫೋಟೋಸ್ ನೋಡ್ತಿದ್ರೆ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಏನಾದ್ರೂ ನಡೀತಿದ್ಯಾ ಅನ್ನೋ ಅನುಮಾನ ಮೂಡಲಿದೆ. ಇಬ್ಬರು ಕಲಾವಿದರು ಹೀಗೆ ಜೊತೆ ಜೊತೆಯಾಗಿ ತುಂಬಾ ಕಡೆ ಕಾಣಿಸಿಕೊಳ್ಳೋದನ್ನ ನೋಡಿದ್ರೆ ಸಹಜವಾಗಿಯೇ ಏನೆಂದು ಹೆಸರಿಡಲಿ ಈ ಚೆಂದ ಅನುಭವಕೆ ಅನ್ನೋ ಹಾಡು ನೆನಪಾಗುತ್ತೆ.
ಈಗಲೂ ಅಮೆರಿಕದಲ್ಲಿ ಜಾಲಿ ಟ್ರಿಪ್‌ನಲ್ಲಿರೋ ರಮ್ಯಾ ಫೋಟೋಸ್ ಸಮೇತ ಅಪ್ಡೇಟ್ಸ್ ಕೊಡ್ತಿದ್ದಾರೆ. ಆದ್ರೆ ನೋಡಿದವರು ಏನೇನೋ ಅಂದುಕೊಳ್ತಿರೋದಕ್ಕೆ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಏನಿಲ್ಲ ಏನಿಲ್ಲ.. ನನ್ನ ಅವರ ನಡುವೆ ಏನಿಲ್ಲ ಅಂತ ಉಪ್ಪಿ ಹಾಡಿನಂತೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇನ್ಸ್‌ಟಾದಲ್ಲಿ ನೀವು, ನಿಮ್ಮ ಇಮ್ಯಾಜಿನೇಷನ್. ಇದು ತುಂಬಾ ಹಾಸ್ಯಾಸ್ಪದ ಅನಿಸುತ್ತೆ. ನಿಮ್ಮ ಕಲ್ಪನೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಿ. ವಿನಯ್ ನನ್ನ ತಮ್ಮನಿದ್ದಂತೆ ಎಂದಿದ್ದಾರೆ.
ಈ ಪೋಸ್ಟ್ ನೋಡಿ ಅಯ್ಯೋ ದೇವರೇ.. ಪಾಪ ನಾವು ಹೆಂಗೆಲ್ಲಾ ಅಂದ್ಕೊಂಡು ಬಿಟ್ಟಿದ್ವಿ ಗುರು ಅಂತ ಎಲ್ರೂ ಸೈಲೆಂಟ್ ಆಗ್ತಿದ್ದಾರೆ. ಹೌದು, ರಮ್ಯಾಗೆ ದೊಡ್ಮನೆಯಲ್ಲಿ ಅಪ್ಪು ಅವರ ನಂತ್ರ ಅಂಥದ್ದೊಂದು ಬಾಂಡಿಂಗ್ ವಿನಯ್ ಜೊತೆ ಏರ್ಪಟ್ಟಿದೆ. ಹಾಗಾಗಿ ಅದನ್ನ ಅವರು ಅಕ್ಕ-ತಮ್ಮನಾಗಿ ಮುಂದುವರೆಸಿದ್ದಾರೆ. ಒಂದು ಹುಡ್ಗ-ಹುಡ್ಗಿ ಒಟ್ಟಿಗೆ ಕಾಣಿಸಿಕೊಂಡ್ರೆ ಸಾಕು.. ಈ ಸಮಾಜ ಅದಕ್ಕೊಂದು ಸಂಬಂಧ ಕಟ್ಟಿಬಿಡುತ್ತೆ. ಮೊದಲು ನಾವು ನೋಡುವ ದೃಷ್ಠಿಕೋನಗಳು ಬದಲಾಗಬೇಕಿದೆ ಅನ್ನೋದನ್ನ ರಮ್ಯಾ ಮೇಡಂ ಸರಳವಾಗಿ, ಸ್ಪಷ್ಟವಾಗಿ ಆಡಿಕೊಳ್ಳೋರಿಗೆ ಮನದಟ್ಟು ಮಾಡಿ, ಬಾಯಿ ಮುಚ್ಚಿಸಿರೋದು ಮಾತ್ರ ಇಂಟರೆಸ್ಟಿಂಗ್.





