ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ದೀಪಾವಳಿಯಿಂದ ಮುಂದಿನ ಮೂರು ದೀಪಾವಳಿ ಹಬ್ಬಗಳ ತನಕ ಚಿತ್ರಪ್ರೇಮಿಗಳಿಗೆ ಬಂಪರ್ ಗಿಫ್ಟ್‌ಗಳನ್ನ ನೀಡಲು ಸಜ್ಜಾಗಿದ್ದಾರೆ. ಆ ಸರ್‌ಪ್ರೈಸಿಂಗ್ ಪ್ಯಾಕೇಜ್ ಏನು ಅನ್ನೋ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ ನೋಡಿ.
ದೀಪಾವಳಿಗೆ ಯಶ್ ರಾಮಾಯಣ ಟೀಂ ಬಿಗ್ ಸರ್‌ಪ್ರೈಸ್
ಮುಂದಿನ ಮೂರು ದೀಪಾವಳಿಗಳಿಗೂ ಬಂಪರ್ ಗಿಫ್ಟ್ ಫಿಕ್ಸ್
ರಾಮಾಯಣ.. ನಮ್ಮ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್‌ನ ನಮಿತ್ ಮಲ್ಹೋತ್ರಾ ಕೂಡಿ ಮಾಡ್ತಿರೋ ಮಹಾದೃಶ್ಯಕಾವ್ಯ. ರಾಮಾಯಣವನ್ನು ಇವರುಗಳು ಯಾರೂ ತೋರಿಸಿರದ ರೀತಿ ಮಾಸ್ಟರ್‌ಪೀಸ್ ಚಿತ್ರವನ್ನಾಗಿ ವಿಶ್ವದ ಎಲ್ಲೆಡೆ ಪಸರಿಸೋಕೆ ಸಜ್ಜಾಗಿದ್ದಾರೆ. ದಂಗಲ್ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗ್ತಿದ್ದು, ನಮಿತ್‌ಗೆ ಯಶ್ ಕೂಡ ಸಾಥ್ ನೀಡಿ ಸಹ ನಿರ್ಮಾಣ ಮಾಡ್ತಿದ್ದಾರೆ.
ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಲಂಕಾಧಿಪತಿಯಾಗಿ ನಮ್ಮ ಯಶ್ ಮಿಂಚು ಹರಿಸಲಿದ್ದು, ಸಿಂಗಲ್ ಟೀಸರ್ ಟಾಕ್ ಆಫ್ ದಿ ಟೌನ್ ಆಗಿದೆ. ಹಾಲಿವುಡ್ ಟೆಕ್ನಿಷಿಯನ್ಸ್ ಇರೋ ಚಿತ್ರದ ಮೇಕಿಂಗ್ ಊಹೆಗೂ ನಿಲುಕದ ರೇಂಜ್‌ಗಿದೆ. ಸಿನಿಮಾ ಎರಡು ಭಾಗಗಳಲ್ಲಿ ಬರ್ತಿದ್ದು, 2026ರ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ರಿಲೀಸ್ ಮಾಡೋದಾಗಿ ಟೀಂ ಹೇಳಿತ್ತು. ಆದ್ರೀಗ ಈ ವರ್ಷದ ದೀಪಾವಳಿಗೂ ಒಂದು ಗಿಫ್ಟ್ ನೀಡ್ತಿದ್ದಾರೆ ಯಶ್.
ರಾಕಿಂಗ್ ಸ್ಟಾರ್- ರಣ್‌ಬೀರ್ ಕಪೂರ್‌ರ ಮಾಸ್ಟರ್‌ಪೀಸ್
ಕನ್ನಡಿಗರೆಲ್ಲಾ ಮತ್ತೊಮ್ಮೆ ಹೆಮ್ಮೆ ಪಡುವ ಮಹೋನ್ನತ ಚಿತ್ರ
ಹೌದು.. ರಾವಣ ಜೊತೆ ಯುದ್ಧ ಗೆದ್ದು, ಸೀತೆಯನ್ನ ಲಂಕೆಯಿಂದ ಅಯೋಧ್ಯೆಗೆ ಕರೆತರುವ ಶ್ರೀರಾಮನ ಸಾಹಸದ ವಿಜಯದ ಪ್ರತೀಕ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತೆ. ಹಾಗಾಗಿ ಸಿನಿಮಾಗಳನ್ನ ದೀಪಾವಳಿ ಹಬ್ಬದಂದೇ ರಿಲೀಸ್ ಮಾಡಲಾಗ್ತಿದೆ. ಇದೀಗ ಈ ಬಾರಿ ಹಬ್ಬಕ್ಕೆ ರಾಮಾಯಣ ಚಿತ್ರದ ಟೀಸರ್ ಅಥ್ವಾ ಮೇಕಿಂಗ್ ಗ್ಲಿಂಪ್ಸ್‌ನ ಪ್ರೇಕ್ಷಕರಿಗೆ ಗಿಫ್ಟ್ ಆಗಿ ನೀಡಲು ಟೀಂ ಪ್ಲ್ಯಾನ್ ಮಾಡ್ತಿದೆ ಎನ್ನಲಾಗ್ತಿದೆ. ಅಲ್ಲಿಗೆ ಮುಂದಿನ ಮೂರು ದೀಪಾವಳಿಗಳಿಗೂ ರಾಮಾಯಣ ಟೀಂ ಉಡುಗೊರೆಗಳ ಸುರಿಮಳೆ ಸುರಿಸಲಿದೆ.