ಇಲ್ಲಿಯ ತನಕ ಬಹಳ ಗುಟ್ಟಾಗಿದ್ದ ರಾಮಾಯಣ ಚಿತ್ರದ ರಹಸ್ಯ ಟೀಸರ್ ಲಾಂಚ್ ಬಳಿಕ ಕಂಪ್ಲೀಟ್ ಆಗಿ ರಟ್ಟಾಗಿದೆ. ಯೆಸ್.. ರಣ್‌ಬೀರ್-ರಾಕಿಂಗ್ ಸ್ಟಾರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್ ಎನ್ನಲಾಗ್ತಿದ್ದು, ಟೀಸರ್‌ಗೆ ಟೀಕೆ, ಟಿಪ್ಪಣಿಗಳ ಮಹಾಪೂರವೇ ಹರಿದುಬರ್ತಿದೆ. ನಿಜಕ್ಕೂ ಈ ಸಿನಿಮಾ ಅಷ್ಟು ಬಜೆಟ್‌ನ ರಿಕವರ್ ಮಾಡುತ್ತಾ..? ಹಾಗಾದ್ರೆ ಕಲಾವಿದರು ಹಾಗೂ ತಂತ್ರಜ್ಞರ ರೆಮ್ಯುನರೇಷನ್ ಎಷ್ಟು ಕೋಟಿ..? ಸಿನಿ ಪಂಡಿತರ ಲೆಕ್ಕಾಚಾರಗಳು ಹೇಗಿವೆ..? ಅನ್ನೋದ್ರ ಫುಲ್ ಡಿಟೇಲ್ಸ್ ಇಲ್ಲಿದೆ…
- ರಣ್‌ಬೀರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್..?
- ಟೀಸರ್‌ಗೆ ಟೀಕೆ, ಟಿಪ್ಪಣಿಗಳು.. ರಿಯಾಲಿಟಿಗಿಂತ AI ಅತಿರೇಕ
- ನೈಜತೆ ನಾಪತ್ತೆ.. ಸ್ಟುಡಿಯೋದಲ್ಲಿ 90 ದಿನಕ್ಕೆ ರಾಮಾಯಣ ರೆಡಿ
- 8 ಆಸ್ಕರ್ ಅವಾರ್ಡ್ ಪಡೆದ VFX ಕಂಪನಿಯಿಂದ ಎಡವಟ್!
ಹನುಮ ಜಯಂತಿ ವಿಶೇಷ ರಿಲೀಸ್ ಆಗಿರೋ ರಾಮಾಯಣ ಚಿತ್ರದ ರಾಮ ಟೀಸರ್ ಸದ್ಯ ವಿಶ್ವ ಸಿನಿದುನಿಯಾದ ಗಮನ ಸೆಳೆದಿದೆ. ಭಾರತೀಯರಾದ ನಾವುಗಳು ಪ್ರಭಾಸ್ ಆದಿಪುರುಷ್‌ಗಿಂತ ಚೆನ್ನಾಗಿದೆ ಅಂತ ಖುಷಿ ಪಡ್ತಿದ್ದೀವಷ್ಟೇ. ಆದ್ರೆ ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ರಾಮಾಯಣ ಚಿತ್ರಕ್ಕೆ ಎಲ್ಲೆಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಅದಕ್ಕೆ ಕಾರಣಗಳು ಹತ್ತು ಹಲವು. ಅವೆಲ್ಲವನ್ನ ಇಂದಿನ ನಮ್ಮ ಗ್ಯಾರಂಟಿ ಪಿಚ್ಚರ್ ಎಪಿಸೋಡ್‌ನಲ್ಲಿ ಡಿಟೈಲ್ಡ್ ಆಗಿ ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡ್ತಿದ್ದೀವಿ.
ಅಯೋಧ್ಯೆಯ ಶ್ರೀರಾಮ ಬರೀ ವ್ಯಕ್ತಿಯಲ್ಲ. ಅದೊಂದು ಅಭೂತಪೂರ್ವ ಶಕ್ತಿ. ಲಂಕೇಶ್ವರ ರಾವಣನಿಗೆ ಮುಕ್ತಿ ನೀಡಲು ಬರುವ ವಿಷ್ಣುವಿನ ಅಪರಾವತಾರ. ಅಲ್ಲಿ ಸೀತೆ, ವನವಾಸ, ಹನುಮಂತ, ಲಕ್ಷ್ಮಣನಂತಹ ಸಹೋದರ, ಜಟಾಯು, ಪುಷ್ಪಕ ವಿಮಾನ, ಲಂಕೆ, ರಾವಣ.. ಹೀಗೆ ಸಾಕಷ್ಟು ವಿಷಯಗಳು ಬರಲಿವೆ ಇದೆಲ್ಲಾ ಗೊತ್ತಿರುವ ವಿಷಯವೇ ಆದ್ರೂ ಸಹ, ಅದನ್ನ ನೋಡುಗರಿಗೆ ಪ್ರಸ್ತುತ ಪಡಿಸೋ ವಿಧಾನ ಬಹಳ ವಿಭಿನ್ನವಾಗಿರಬೇಕಾಗುತ್ತೆ.
ತಂತ್ರಜ್ಞಾನ ಇಲ್ಲದ ಆ ಕಾಲದಲ್ಲೇ ರಾಮಾಯಣ ಕುರಿತ ಸಿನಿಮಾ ಹಾಗೂ ಸೀರೀಸ್‌ಗಳು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಟ್ಟಿದ್ದಾರೆ. ಇದೀಗ ಟೆಕ್ನಾಲಜಿ ಸಾಕಷ್ಟು ಬೆಳೆದಿದ್ದು, ಈಗ ಅದನ್ನ ಮತ್ತಷ್ಟು ಚಂದವಾಗಿಸೋ ಕಾರ್ಯ ಮಾಡಬೇಕಾಗುತ್ತೆ. ಆದ್ರೆ ನಿಜಕ್ಕೂ ರಾಮಾಯಣ ಚಿತ್ರದ ಟೀಸರ್ ವ್ಹಾವ್ ಫೀಲ್ ತರಿಸುತ್ತಿದೆಯೇ..? ನೋ ವೇ.. ಚಾನ್ಸೇ ಇಲ್ಲ. ಇದು ರಾಮಾಯಣ ಟೀಸರ್‌ನ ಟೀಕಿಸ್ತಿರೋರ ಅಭಿಪ್ರಾಯವಾಗಿದೆ.
ಬರೋಬ್ಬರಿ 4 ಸಾವಿರ ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾಗ್ತಿರೋ ರಾಮಾಯಣ ಚಿತ್ರದ ಕ್ವಾಲಿಟಿ, ಔಟ್‌ಪುಟ್ ನೋಡಿ ಒಂದಷ್ಟು ಮಂದಿ ಬೇಸರಗೊಂಡಿದ್ದಾರೆ. ಯಾಕಂದ್ರೆ ನಾಲ್ಕು ಸಾವಿರ ಕೋಟಿ ಬಜೆಟ್‌ನ ಸಿನಿಮಾದ ದೃಶ್ಯಗಳು ತುಂಬಾ ನೈಜ, ಸಹಜ ಹಾಗೂ ಸ್ವಾಭಾವಿಕವಾಗಿ ಕಾಣಬೇಕು. ಆದರೆ ಇಲ್ಲಿ ನೈಜತೆ ನಾಪತ್ತೆಯಾಗಿದೆ. ಅತಿರೇಕದ AIನಿಂದಾಗಿ ಆ ಒರಿಜಿನಲ್ ಫ್ಲೇವರ್ ಕಾಣ್ತಿಲ್ಲ ಅನ್ನೋದು ಸ್ಪಷ್ಟ.
ಹೌದು.. ಬರೋಬ್ಬರಿ 8 ಆಸ್ಕರ್ ಅಕಾಡೆಮಿ ಅವಾರ್ಡ್‌ಗಳನ್ನ ಮುಡಿಗೇರಿಸಿಕೊಂಡಿರೋ DNEG ವಿಎಫ್‌ಎಕ್ಸ್ ಕಂಪನಿಯಿಂದ ರಾಮಾಯಣ ಚಿತ್ರ ತಯಾರಾಗ್ತಿದೆ. ಆದ್ರೆ ಇಲ್ಲಿ ರಿಯಾಲಿಟಿಗಿಂತ ಟೆಕ್ನಾಲಜಿಯೇ ಹೆಚ್ಚಾಗಿ ಕಾಣಿಸ್ತಿದೆ. ನೈಜವಾದ ಲೊಕೇಷನ್ಸ್‌ಗೆ ಹೋಗಿ ಚಿತ್ರೀಕರಿಸೋ ಬದಲಿಗೆ 90 ದಿನಗಳಲ್ಲಿ ಸ್ಟುಡಿಯೋಗಳಲ್ಲೇ ಗ್ರೀನ್‌ಮ್ಯಾಟ್‌ನಲ್ಲಿ ಚಿತ್ರಿಸಿಬಿಟ್ಟಿದ್ದಾರೆ ಎನ್ನಲಾಗ್ತಿದೆ. ಆದಿಪುರುಷ್‌ಗಿಂತ ಗ್ರಾಫಿಕ್ಸ್, ವಿಎಫ್‌ಎಕ್ಸ್ ಹಾಗೂ ವಿಶ್ಯುವಲ್ ಟ್ರೀಟ್ ಚೆನ್ನಾಗಿದೆ. ಆದ್ರೆ ಇನ್ ಡಿಟೈಲ್ಡ್ ನೋಡಿದಾಗ ಅಲ್ಲಿ ಸಾಕಷ್ಟು ಮಿಸ್ಟೇಕ್ಸ್ ಎದ್ದು ಕಾಣ್ತಿವೆ. ಅರೇ ಇದು 8 ಆಸ್ಕರ್ ಅವಾರ್ಡ್ ಪಡೆದಂತಹ ಸಂಸ್ಥೆ ಮಾಡಿದ ವಿಎಫ್‌ಎಕ್ಸ್ ರೀತಿ ಇಲ್ಲವಲ್ಲ ಅನಿಸ್ತಿದೆ.
ಶ್ರೀರಾಮ ಮುಂದಕ್ಕೆ ಹೋದ ಬಳಿಕ ಹುಡುಗನೊಬ್ಬ ಕ್ಯಾಮೆರಾ ಕಡೆ ಮುಖ ಮಾಡಿ ಕೈ ಮುಗಿಯೋ ದೃಶ್ಯ ಆಡಿಕೊಳ್ಳೋರ ಬಾಯಿಗೆ ಆಹಾರವಾಗಿದೆ. ಕತ್ತಲ ಶಾಟ್ಸ್ ಬೇಕಿರಲಿಲ್ಲ ಅನ್ನೋದು ಹಲವರ ವಾದ. ಅಷ್ಟೇ ಯಾಕೆ..? ಇದು ಹಂಡ್ರೆಡ್ ಪರ್ಸೆಂಟ್ ಎಐ ಟೀಸರ್‌ನಂತಿದೆ ಅಂತಿದ್ದಾರೆ.
ಇಷ್ಟಕ್ಕೂ 4 ಸಾವಿರ ಕೋಟಿ ಬಜೆಟ್ ಈ ಸಿನಿಮಾಗೆ ನಿಜಕ್ಕೂ ಅವಶ್ಯಕತೆ ಇದೆಯಾ..? ಅಷ್ಟು ಹಾಕಿದ್ರೆ ಅದನ್ನ ವಾಪಸ್ ಪಡೆಯೋದು ಸುಲಭನಾ ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸದ್ಯ ಕಲಾವಿದರು ಹಾಗೂ ತಂತ್ರಜ್ಞರಿಗೆ ಟೀಂ ನೀಡ್ತಿರೋ ರೆಮ್ಯುನರೇಷನ್ ಎಷ್ಟು..? ಗ್ಲೋಬಲ್ ಮಾರ್ಕೆಟಿಂಗ್‌ಗೆ ಖರ್ಚಾಗುವ ಅಂದಾಜು ವೆಚ್ಚ ಎಷ್ಟು ಅನ್ನೋದನ್ನ ಗ್ರಾಫಿಕಲ್ ಪ್ರೆಸೆಂಟೇಷನ್ ಮೂಲಕ ತೋರಿಸ್ತೀವಿ ನೋಡಿ.
ಗ್ಯಾರಂಟಿಯಲ್ಲಿ ರಾಮಾಯಣ ಟೀಂ ರೆಮ್ಯುನರೇಷನ್
ಹೆಸರು ಸಂಭಾವನೆ
ರಣ್‌ಬೀರ್ ಕಪೂರ್ 150 ಕೋಟಿ
ಯಶ್ 150 ಕೋಟಿ
ಸನ್ನಿ ಡಿಯೋಲ್ 50 ಕೋಟಿ
ಸಾಯಿ ಪಲ್ಲವಿ 12 ಕೋಟಿ
ಹನ್ಸ್ ಝಿಮ್ಮರ್ 80 ಕೋಟಿ
ಎ ಆರ್ ರೆಹಮಾನ್ 50 ಕೋಟಿ
ನೋಡಿದ್ರಲ್ಲಾ ರಾಮಾಯಣ ಚಿತ್ರದ ಬಿಗ್ಗೆಸ್ಟ್ ಸ್ಟಾರ್ಸ್ ಅಂದ್ರೆ ಇವರುಗಳೇ.. ಇವರೆಲ್ಲರ ರೆಮ್ಯುನರೇಷನ್ ಅಂದ್ರೂ ಜಸ್ಟ್ 500 ಕೋಟಿ. ಗ್ಲೋಬಲ್ ಲೆವೆಲ್‌ನಲ್ಲಿ ಪುಶ್ ಮಾಡೋಕೆ ಇಂಡಿಯಾದಲ್ಲಿ ಮಾರ್ಕೆಟಿಂಗ್ ಮಾಡಲು 250 ಕೋಟಿ ಬಜೆಟ್. ವಿದೇಶಗಳಲ್ಲಿ ಕ್ಯಾಂಪೇನ್‌ಗಳನ್ನ ಮಾಡಲು 550 ಕೋಟಿ ಬೇಕಾಗುತ್ತೆ. ಯಾಕಂದ್ರೆ ರಾಮಾಯಣ ಸಿನಿಮಾ ಇಂಡಿಯನ್ ಲಾಂಗ್ವೇಜಸ್ ಬಿಟ್ಟು ವಿಶ್ವದಾದ್ಯಂತ ಸುಮಾರು 30 ರಿಂದ 50 ಭಾಷೆಗಳಿಗೆ ಎಐ ಡಬ್ಬಿಂಗ್ ಮಾಡಲಾಗ್ತಿದೆ.
- ವಾಲ್ಮೀಕಿ ರಾಮಾಯಣಕ್ಕೆ ನಮಿತ್ ಮಲ್ಹೋತ್ರಾ ಹೆಸರೇಕೆ..?
- ನಿತೇಶ್ ತಿವಾರಿ ಇಂತಹ ಬಿಗ್ ಸ್ಕೇಲ್ ಮೂವಿ ಮಾಡಿಲ್ಲ..!!
ಆಮೀರ್ ಖಾನ್ ನಟನೆಯ ದಂಗಲ್ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಈ ರಾಮಾಯಣಕ್ಕೆ ದೃಶ್ಯರೂಪ ಕೊಡ್ತಿದ್ದಾರೆ. ಆದ್ರೆ ನಿತೇಶ್ ಹಿಂದೆಂದೂ ಇಷ್ಟೊಂದು ಬಿಗ್ ಸ್ಕೇಲ್ ಮೂವಿಯನ್ನ ಹ್ಯಾಂಡಲ್ ಮಾಡಿ ಅಭ್ಯಾಸವಿಲ್ಲ. ಹಾಗಾಗಿಯೇ ಟೀಸರ್‌ನಲ್ಲಿ ಪಕ್ವತೆಯಿಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ.
ಅಲ್ಲದೆ, ನಮಿತ್ ಮಲ್ಹೋತ್ರಾ ಈ ಸಿನಿಮಾನ ನಿರ್ಮಾಣ ಮಾಡ್ತಿದ್ದಾರೆ ಓಕೆ. ಆದ್ರೆ ವಾಲ್ಮೀಕಿ ರಾಮಾಯಣಕ್ಕೆ ನಮಿತ್ ಮಲ್ಹೋತ್ರಾ ರಾಮಾಯಣ ಅಂತ ಟೈಟಲ್ ಕೊಟ್ಟಿರೋದೇ ಅಚ್ಚರಿ. ಅಬ್ಬಬ್ಬಾ.. ಈ ನಮಿತ್ ಮಲ್ಹೋತ್ರಾ ಯಾವಾಗ ರಾಮಾಯಣ ಬರೆದ್ರು ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಂದಹಾಗೆ ನಮಿತ್ ಸದ್ಯ DNEG ವಿಎಫ್‌ಎಕ್ಸ್ ಕಂಪನಿಯ ಮಾಲೀಕರೂ ಹೌದು. ವಿಎಫ್‌ಎಕ್ಸ್ ಜೀನಿಯಸ್, ಮಾಸ್ಟರ್‌ಮೈಂಡ್ ಅಂತೆಲ್ಲಾ ಕರೆಸಿಕೊಳ್ಳೋ ನಮಿತ್, ಹೀಗೆ ತಪ್ಪು ಹೆಜ್ಜೆ ಇಟ್ಟಿದ್ದಾದ್ರೂ ಹೇಗೆ ಅನಿಸ್ತಿದೆ. ಇನ್‌ಸೆಪ್ಷನ್, ಡ್ಯೂನ್ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವ ಇರೋ ವಿಎಫ್‌ಎಕ್ಸ್ ಕಂಪಬಿ ರಾಮಾಯಣಕ್ಕೆ ಹೀಗ್ಯಾಕೆ ಮಾಡ್ತು ಅನ್ನೋ ಅಪವಾದ ಹೊತ್ತುಕೊಳ್ಳುವಂತಾಗಿದೆ.
ಒಟ್ಟಾರೆ ಈ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ 2ನೇ ಭಾಗವನ್ನ ಬೆಳ್ಳಿಪರದೆಗೆ ತರುವ ಯೋಜನೆಯಲ್ಲಿರೋ ರಾಮಾಯಣ ಟೀಂ, ಎಚ್ಚೆತ್ತುಕೊಳ್ಳಬೇಕಿದೆ. ತಾಂತ್ರಿಕ ದೋಷಗಳನ್ನ ಸರಿಪಡಿಸಿಕೊಂಡೇ ಪ್ರೇಕ್ಷಕರ ಮುಂದೆ ಬರಬೇಕಿದೆ. ಇಲ್ಲವಾದಲ್ಲಿ ರಿಲೀಸ್ ಬಳಿಕ ಸಿನಿಮಾಗೂ ಇದೇ ಬಗೆಯ ಟೀಕೆ, ಟಿಪ್ಪಣಿಗಳ ರಿವ್ಯೂಗಳು ಬರೋದ್ರಲ್ಲಿ ಯಾವುದೇ ಸಂದೇಹವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





