ಮೆಗಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ತೇಜಾ ಶಿಸ್ತು, ಭಕ್ತಿ ಹಾಗೂ ಡೆಡಿಕೇಷನ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ವರ್ಷದ ಬಹುತೇಕ ದಿನ ಅಯ್ಯಪ್ಪನ ಮಾಲೆ ಧರಿಸಿಯೇ ಇರುವ ಚಿರು ತನಯ, ವೆಜ್ ತಿಂದುಕೊಂಡೇ ಸಿಕ್ಸ್‌ಪ್ಯಾಕ್ ಮಾಡಿದ್ದಾರೆ. ಪೆದ್ದಿ ಸಿನಿಮಾದಲ್ಲಿ ಸದ್ಯ ಆತನ ನಟನೆ ಜೊತೆ ಈ ಫಿಸಿಕ್ ಕೂಡ ಟಾಕ್ ಆಫ್ ದಿ ಟೌನ್ ಆಗಿದೆ.
ಶ್ರೀರಾಮನವಮಿ ಹಬ್ಬದ ವಿಶೇಷ ಪೆದ್ದಿ ಚಿತ್ರದ ನ್ಯೂ ಟೀಸರ್ ರಿಲೀಸ್ ಆಯ್ತು. ಅದನ್ನ ನೋಡಿದ ಚಿತ್ರಪ್ರೇಮಿಗಳು ಓ ಮೈ ಗಾಡ್.. ರಾಮ್ ಚರಣ್ ತೇಜಾ ಎಷ್ಟು ಫಿಟ್ ಅಂಡ್ ಫೈನ್ ಆಗಿದ್ದಾರೆ ಗುರು. ನಾವುಗಳು ಕೂಡ ಮಾಡಿದ್ರೆ ಈ ರೀತಿ ಬಾಡಿ ಮೈಂಟೇನ್ ಮಾಡ್ಬೇಕು ಅಂತ ಕಣ್ಣು ಬಾಯಿ ಬಿಟ್ಕೊಂಡು ನೋಡಿದವ್ರು ಸಾಕಷ್ಟು ಮಂದಿ ಇದ್ದಾರೆ. ಆದ್ರೆ ಕುಸ್ತಿ ಪಟು ಆಗಿ ಕುಸ್ತಿ ಅಖಾಡದಲ್ಲಿ ಚಿರು ತನಯ ಚರಣ್ ಹಾಗೆ ಕಾಣಿಸಿಕೊಳ್ಳೋಕೆ ಸಾಕಷ್ಟು ಬೆವರಿಳಿಸಿದ್ದಾರೆ. ಜಿಮ್‌ನಲ್ಲಿ ಗಂಟೆ ಗಟ್ಟಲೆ ದೇಹವನ್ನು ದಂಡಿಸಿದ್ದಾರೆ. ಅದೂ ಶುದ್ಧ ಸಸ್ಯಹಾರಿ ಆಗಿದ್ದುಕೊಂಡು ಅನ್ನೋದು ಅಚ್ಚರಿಯ ಸಂಗತಿ.
ಮಾಲೆ, ವೆಜ್‌ನಲ್ಲೇ ಸಿಕ್ಸ್ ಪ್ಯಾಕ್.. ಚರಣ್‌ಗೆ ಕೋಟಿ ಶರಣು..!
20 ವರ್ಷಗಳಿಂದ ಸತತವಾಗಿ ಅಯ್ಯಪ್ಪನ ದೀಕ್ಷೆಯಲ್ಲಿ ಚರಣ್
ಸತತ 20 ವರ್ಷಗಳಿಂದ ಅಯ್ಯಪ್ಪ ಮಾಲೆ ದೀಕ್ಷೆಯಲ್ಲಿರ್ತಾರೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ. ಪ್ರತೀ ವರ್ಷ ಕನಿಷ್ಟ 41 ದಿನಗಳ ಕಾಲ ಅಯ್ಯಪ್ಪ ಮಾಲೆ ಜೊತೆ ಕಪ್ಪು ಬಟ್ಟೆ ಧರಿಸಿ, ಬರಿಗಾಲಲ್ಲಿ ಓಡಾಡ್ತಾರೆ. ಅದು ಆಸ್ಕರ್ ಅಂಗಳಕ್ಕೆ ತೆರಳುವ ಕಾರ್ಯವೇ ಇರಬಹುದು, ಮದ್ವೆ, ರಿಸೆಕ್ಷನ್‌ಗಳೇ ಇರಬಹುದು ಅಥ್ವಾ ಸಲೂನ್ ಓಪನಿಂಗೇ ಇರಬಹುದು. ಏರ್‌ಪೋರ್ಟ್, ಶೂಟಿಂಗ್, ಸ್ಟಾರ್ ಹೋಟೆಲ್ ಹೀಗೆ ಎಲ್ಲೇ ಹೋದ್ರೂ ಸಖತ್ ಸಿಂಪಲ್ ಆಗಿ ತಮ್ಮ ಶಿಸ್ತು, ಭಕ್ತಿಯನ್ನ ಮೆರೆಯುತ್ತಾ ಬಂದಿದ್ದಾರೆ.
ಸದ್ಯ ಬುಚ್ಚಿಬಾಬು ನಿರ್ದೇಶನದ ಪೆದ್ದಿ ಸಿನಿಮಾದ ಪೈಲ್ವಾನ್ ರೋಲ್‌ಗಾಗಿ ವೆಜ್ ಊಟ ಸವಿಯುತ್ತಲೇ ಸಖತ್ ಬಾಡಿ ಬ್ಯುಲ್ಡ್ ಮಾಡಿದ್ದಾರೆ ಚರಣ್. ಅದೂ ಬರಿಗಾಲಲ್ಲಿ ಓಡಾಡಿಕೊಂಡು, ಮಾಂಸಹಾರ ತ್ಯಜಿಸಿ, ಶ್ರದ್ಧೆ, ಭಕ್ತಿಯಿಂದಲೇ ಇಂತಹ ದೇಹವನ್ನ ಸಿದ್ಧಿಸಿಕೊಂಡಿರೋದು ನಿಜಕ್ಕೂ ಮೆಚ್ಚಲೇಬೇಕಾದ ವಿಷಯ. 1400 ಕೋಟಿ ರೂಪಾಯಿ ಆಸ್ತಿಗೆ ಒಡೆಯನಾಗಿರೋ ಚರಣ್, ಹೀಗೆ ಅಹಂ ಇಲ್ಲದೆ ಸರಳವಾಗಿ ಜೀವನ ನಡೆಸ್ತಿರೋದು ನಿಜಕ್ಕೂ ಗ್ರೇಟ್.
1400 Cr ಒಡೆಯ.. ಆಸ್ಕರ್ ಅಂಗಳಕ್ಕೂ ಬರಿಗಾಲಲ್ಲಿ ಜರ್ನಿ
ಪೆದ್ದಿ ಟೀಸರ್‌ನಲ್ಲಿ ಬೇರ್ ಬಾಡಿಯಲ್ಲಿ ಫಿಸಿಕ್ ಎಕ್ಸ್‌ಪೋಸ್..!
ಸಾಕಷ್ಟು ಕಲಾವಿದರುಗಳು ಸಿನಿಮಾದ ಪಾತ್ರಗಳಿಗಾಗಿ ವೆಯ್ಟ್ ಹೆಚ್ಚಿಸಿಕೊಳ್ಳೋದು ಅಥ್ವಾ ಇಳಿಸಿಕೊಳ್ಳೋದು ಮಾಡ್ತಾರೆ. ಆದ್ರೆ ಯಾವುದೇ ಅಪೇಕ್ಷೆ ಇಲ್ಲದೆ ರಾಮ್ ಚರಣ್ ತೇಜಾ ಮಾತ್ರ ಹೀಗೆ ಒಬ್ಬ ಸರಳ ವ್ಯಕ್ತಿಯಂತೆ ಜೀವನ ಸಾಗಿಸುವ ಮನಸ್ಥಿತಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಆ ನಿಟ್ಟಿನಲ್ಲಿ ಚರಣ್ ನಿಜಕ್ಕೂ ಸಾಕಷ್ಟು ಮಂದಿಗೆ ರೋಲ್ ಮಾಡೆಲ್ ಆಗ್ತಾರೆ. ಇದನ್ನ ಬೇರೆಯವರು ಕೂಡ ಆದಷ್ಟು ಅವರವರ ಲೈಫ್‌ಗಳಲ್ಲಿ ಅಳವಡಿಸಿಕೊಂಡ್ರೆ ಅದಕ್ಕಿಂತ ಸಾರ್ಥಕತೆ ಮತ್ತೊಂದಿರಲು ಸಾಧ್ಯವಿಲ್ಲ.





