ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಒಂದು ವರ್ಷದ ಮೌನ… ಸಿನಿಮಾ ಅಪ್‌ಡೇಟ್ ಇಲ್ಲ… ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಚಟುವಟಿಕೆ ಇಲ್ಲ… ಹೀಗಿರುವಾಗ ಏಕಾಏಕಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೇಸರದ ಫೋಟೋ ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮದುವೆ ನಂತರ ರಕ್ಷಿತ್ ಪೋಸ್ಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಇದು ಕೇವಲ ನೆನಪುಗಳಾ..? ಇಲ್ಲವೇ ರಕ್ಷಿತ್ ಶೆಟ್ಟಿಯ ಸೈಲೆಂಟ್ ಮೆಸೇಜ್ ಆ..? ಕ್ಲಾರಿಟಿ ಕೊಡ್ತೀವಿ ಈ ಸ್ಟೋರಿ ನೋಡಿ.
ಒಂದು ವರ್ಷದ ಮೌನದ ನಂತರ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಹಂಚಿಕೊಂಡಿದ್ದು ಹೊಸ ಸಿನಿಮಾ ಪೋಸ್ಟರ್ ಅಲ್ಲ ಬದಲಿಗೆ ತಮ್ಮ ಸೂಪರ್ ಹಿಟ್ ಸಿನಿಮಾ 777 Charlie ಚಿತ್ರದ ಭಾವುಕ ದೃಶ್ಯ. ಇದೇ ಫೋಟೋವನ್ನು ಫೇಸ್‌ಬುಕ್ ಕವರ್ ಫೋಟೋ ಆಗಿ ಹಾಕಿರುವುದು ಈಗ ಫ್ಯಾನ್ಸ್ ಮತ್ತು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಏಕಾಏಕಿ ಈ ಪೋಸ್ಟ್ ಏಕೆ ? ಒಂದು ವರ್ಷದ ನಂತರ ಈ ನೆನಪು ಏಕೆ ? ಎಂಬ ಪ್ರಶ್ನೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಒಂದು ವರ್ಷದ ಮೌನ ಮುರಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ರಕ್ಷಿತ್ ಭರ್ಜರಿ ಕಂಬ್ಯಾಕ್.. ಗುಡ್ ನ್ಯೂಸ್ ಕೊಟ್ಟೇ ಬಿಟ್ರು..!
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಳೆದ ಒಂದು ವರ್ಷದಿಂದ ಬಹುತೇಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಿನಿಮಾ ಕಾರ್ಯಕ್ರಮಗಳು, ಪಬ್ಲಿಕ್ ಈವೆಂಟ್‌ಗಳು, ಮೀಡಿಯಾ ಮುಂದೆ ಕಾಣಿಸಿಕೊಳ್ಳೋದು ಎಲ್ಲವೂ ಕಡಿಮೆಯಾಗಿದೆ. ಅವರ ಬಹುನಿರೀಕ್ಷಿತ ಸಿನಿಮಾ ರಿಚರ್ಡ್ ಅಂಥೋನಿ ಘೋಷಣೆ ಆಗಿ ವರ್ಷಗಳೇ ಕಳೆದರೂ ಯಾವುದೇ ಅಪ್‌ಡೇಟ್ ಸಿಗದಿರುವುದು ಫ್ಯಾನ್ಸ್‌ಗೆ ಬೇಸರ ತಂದಿದೆ. ಈ ನಡುವೆಯೇ ಏಕಾಏಕಿ ‘777 ಚಾರ್ಲಿ’ ಚಿತ್ರದ ಸ್ಯಾಡ್ ಫೋಟೋ ಹಂಚಿಕೊಂಡಿರುವುದು ಮತ್ತಷ್ಟು ಸಸ್ಪೆನ್ಸ್ ಹುಟ್ಟಿಸಿದೆ.
ಇನ್ನೊಂದೆಡೆ ನಟಿ ರಶ್ಮಿಕಾ ಮಂದಣ್ಣ ಮದುವೆ ಆಗಿರೋ ಹೊತ್ತಲೇ ರಕ್ಷಿತ್ ಶೆಟ್ಟಿಯ ಈ ಪೋಸ್ಟ್ ಗಮನ ಸೆಳೆದಿದೆ. ರಕ್ಷಿತ್ ಮತ್ತು ರಶ್ಮಿಕಾ ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ದೂರಾದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ಈಗ ರಕ್ಷಿತ್ ಹಂಚಿಕೊಂಡಿರುವ ಈ ಭಾವುಕ ಫೋಟೋ ಕೇವಲ ಹಳೆಯ ನೆನಪುಗಳೇ ? ಅಥವಾ ಅದರ 777 ಚಾರ್ಲಿ 2 ಕಥೆ ರೆಡಿ ಇದಿಯಾ ಎಂಬ ಪ್ರಶ್ನೆಗಳು ಫ್ಯಾನ್ಸ್ ನಡುವೆ ಕೇಳಿಬರುತ್ತಿವೆ.
ಫೇಸ್‌ಬುಕ್‌ನಲ್ಲಿ ಏಕಾಏಕಿ ‘777 ಚಾರ್ಲಿ’ ಸ್ಯಾಡ್ ಫೋಟೋ ಪೋಸ್ಟ್
ರಶ್ಮಿಕಾ ಮದುವೆ ಚರ್ಚೆಯ ನಡುವೆ ರಕ್ಷಿತ್ ಏಕಾಂಗಿ ಪೋಸ್ಟ್..!
ಅಲ್ಲದೆ, ರಕ್ಷಿತ್ ಶೆಟ್ಟಿ ಈಗ ತಮ್ಮ ಹುಟ್ಟೂರಾದ ಉಡುಪಿಯಲ್ಲಿ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಹೊರಬಂದಿದೆ. ಸಿನಿಮಾ ಕೆಲಸಗಳಿಂದ ದೂರ ಇದ್ದರೂ ಅವರು ಸೃಜನಾತ್ಮಕ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ರಕ್ಷಿತ್ ಅಲೆವೂರು ದೊಡ್ಡಮನೆ ಕುಟುಂಬ ನಡೆಸುವ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲೂ ಭಾಗಿಯಾಗಿದ್ರು. ಸಿನಿಮಾ ಮೌನದ ಮಧ್ಯೆ ಅವರ ಈ ಸರಳ ಜೀವನಶೈಲಿ ಕೂಡ ಅಭಿಮಾನಿಗಳು ಇಷ್ಟ ಪಡ್ತಾರೆ. ಜೊತೆಗೆ ರಕ್ಷಿತ್ ಆಪ್ತ ಗೆಳೆಯ ಪ್ರಮೋದ್ ಕೂಡ ಮಾತನಾಡಿದ್ದು ರಕ್ಷಿತ್ ಸ್ಕ್ರಿಪ್ಟ್ ನಲ್ಲಿ ಬ್ಯುಸಿ ಇದ್ದಾರೆ ಫಿನಿಕ್ಸ್ ನಂತೆ ಎದ್ದು ಬರ್ತಾನೆ ವೇಟ್ ಮಾಡಿ ಅಂದಿದ್ರು.
ಒಟ್ಟಾರೆ ನೋಡಿದ್ರೆ ಒಂದು ವರ್ಷದ ಮೌನದ ನಂತರ ರಕ್ಷಿತ್ ಶೆಟ್ಟಿಯ ಒಂದು ಫೋಟೋ ಪೋಸ್ಟ್ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು ಇದು ಕೇವಲ ನೆನಪುಗಳ ಪೋಸ್ಟ್ ಅಂತ ಹೇಳುತ್ತಿದ್ದರೆ ಇನ್ನೂ ಕೆಲವರು “ಸಿಂಪಲ್ ಸ್ಟಾರ್ ದೊಡ್ಡ ಕಂಬ್ಯಾಕ್‌ಗೆ ಸಿದ್ಧರಾಗುತ್ತಿದ್ದಾರೆ” ಎಂದು ಹೇಳುತ್ತಿದ್ದಾರೆ. ಯಾವುದು ಸತ್ಯ ಅನ್ನೋದಕ್ಕೆ ಉತ್ತರ ಸಿಗಬೇಕಾದರೆ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಅಪ್‌ಡೇಟ್‌ವರೆಗೂ ಕಾಯಲೇಬೇಕು.





