46 ವರ್ಷಗಳ ನಂತ್ರ ರಜನೀಕಾಂತ್- ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದ್ರೀಗ ಅದು ಅಫಿಶಿಯಲಿ ಅನೌನ್ಸ್ ಆಗಿದೆ. ದುಬೈನಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಿರೋ ಕಮಲ್, ಬಿಸ್ಕೆಟ್ ಕಥೆ ಕೂಡ ಹೇಳಿದ್ದಾರೆ. ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ಸ್ಫೂರ್ತಿಯ ಸೆಲೆ ಆಗಿರೋ ಈ ಲೆಜೆಂಡ್‌ಗಳ ಮಾಸ್ಟರ್‌ಪೀಸ್ ಕಹಾನಿ ಇಲ್ಲಿದೆ.
- ರಜನಿ-ಕಮಲ್ ಪ್ರಾಜೆಕ್ಟ್ ಕನ್ಫರ್ಮ್.. ಏನಿದು ಬಿಸ್ಕೆಟ್ ಕಥೆ..?
- ದುಬೈನಲ್ಲಿ ಕಮಲ್ ಹಾಸನ್ ಅಫಿಶಿಯಲ್ ಸ್ಟೇಟ್‌ಮೆಂಟ್..!
- 46 ವರ್ಷದ ನಂತ್ರ ರೀ ಯೂನಿಯನ್.. ಥ್ರಿಲ್ ಆದ ಫ್ಯಾನ್ಸ್
- ಬ್ಯುಸಿನೆಸ್‌ಗೆ ಇದು ಸರ್‌ಪ್ರೈಸ್.. ನಮಗಿದು ಸರ್‌ಪ್ರೈಸ್ ಅಲ್ಲ
ಸೂಪರ್ ಸ್ಟಾರ್ ರಜನೀಕಾಂತ್ ಚಿತ್ರರಂಗದಲ್ಲಿ ಯಶಸ್ವಿ 50 ವರ್ಷ ಪೂರೈಸಿರೋ ಸಿನಿಸಂತ. 74ರ ಹರೆಯದಲ್ಲೂ ಯಂಗ್‌ಸ್ಟರ್ಸ್‌ನ ನಾಚಿಸೋ ಎನರ್ಜಿ ಹೌಸ್. 171 ಸಿನಿಮಾಗಳಲ್ಲಿ ನಟಿಸಿರೋ ತಲೈವಾ, ಕೂಲಿ ಚಿತ್ರದ ಮೂಲಕ ವಿಶ್ವ ಸಿನಿದುನಿಯಾದಲ್ಲಿ ಇಂದಿಗೂ ಅದೇ ಗತ್ತು, ಗೈರತ್ತು ಪ್ರದರ್ಶಿಸ್ತಿರೋ ಸ್ಟೈಲ್ ಕಾ ಬಾಪ್.
ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಎಕ್ಸ್‌ಪೆರಿಮೆಂಟ್ಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಕಮಲ್, ಮೂಕಿ ಟು ಟಾಕಿ ವರೆಗೆ ಬರೋಬ್ಬರಿ 234 ಚಿತ್ರಗಳನ್ನ ಮಾಡಿ, ಇಂದಿಗೂ ಅದೇ ಡಿಮ್ಯಾಂಡ್ ಉಳಿಸಿಕೊಂಡಿರೋ ಮೋಸ್ಟ್ ಸ್ಟೈಲಿಶ್ ಸ್ಟಾರ್. 70 ವರ್ಷ ಹರೆಯದ ಕಮಲ್, ಇಂದಿನ ಸ್ಟಾರ್ಸ್ ಕೂಡ ಕಾಪಿ ಮಾಡುವಂತಹ ಸ್ಟೈಲಿಶ್ ಲುಕ್ಸ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಥಗ್ ಲೈಫ್ ಸಿನಿಮಾ ಅಟ್ಟರ್ ಫ್ಲಾಪ್ ಆದ್ರೂ, ಇನ್ನೂ ವಿಕ್ರಮ್ ಚಿತ್ರದ ಸಕ್ಸಸ್ ಗುಂಗಿನಿಂದ ಹೊರಬಂದಿಲ್ಲ. ಅದೇ ಸಿನಿಮೋತ್ಸಾಹದಲ್ಲಿದ್ದಾರೆ.
ಕಮಲ್ ಹಾಸನ್‌ಗೆ ವಿಕ್ರಮ್ ಹಾಗು ರಜನೀಕಾಂತ್‌ಗೆ ಕೂಲಿ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್, ಈ ಇಬ್ಬರೂ ಲೆಜೆಂಡ್‌ಗಳನ್ನ ಇಟ್ಕೊಂಡು ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಹೌದು, 46 ವರ್ಷಗಳ ನಂತ್ರ ತಲೈವಾ ರಜನೀಕಾಂತ್ ಕಮಲ್ ಹಾಸನ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ. ಅದೊಂದು ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಎನ್ನಲಾಗಿತ್ತು. ಆ ಪಮೆಗಾ ಪ್ರಾಜೆಕ್ಟ್ ಈಗ ಅಧಿಕೃತವಾಗಿದೆ.
ಹೌದು, ಸೈಮಾ ಅವಾರ್ಡ್ ಪಡೆಯಲು ದುಬೈಗೆ ತೆರಳಿದ್ದ ಕಮಲ್ ಹಾಸನ್, ಅದೇ ವೇದಿಕೆಯಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸೋ ಮೂಲಕ ನಾನು-ರಜನೀಕಾಂತ್ ಇಬ್ಬರೂ ನಟಿಸ್ತಿರೋದು ನಿಜ ಎಂದಿದ್ದಾರೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಿರೋದು ನಮಗೇನೂ ಸರ್‌ಪ್ರೈಸ್ ಅಲ್ಲ. ಬ್ಯುಸಿನೆಸ್ ವಿಚಾರದಲ್ಲಿ ಅದು ಸರ್‌ಪ್ರೈಸಿಂಗ್ ಅನಿಸಬಹುದು. ನಾವು ಬಹಳ ದಿನಗಳಿಂದ ಒಟ್ಟಿಗೆ ನಟಿಸೋ ಯೋಜನೆ ಇತ್ತು. ಕೋವಿಡ್ ಸಮಯದಲ್ಲಿ ಮಾಡ್ಬೇಕು ಅಂದ್ಕೊಂಡಿದ್ದೆವು. ಅದು ಆಗ ಆಗಲಿಲ್ಲ. ಈಗ ಮಾಡ್ತಿದ್ದೀವಿ ಎಂದಿದ್ದಾರೆ.
ಅಂದಹಾಗೆ ನಾವಿಬ್ಬರೂ ಬಹಳ ವರ್ಷಗಳ ಹಿಂದೆ ಒಟ್ಟಿಗೆ ಇದ್ದೆವು. ಆಮೇಲೆ ನಿರ್ದೇಶಕರುಗಳು ಬಿಸ್ಕೆಟ್‌ನ ಅರ್ಧ ಅರ್ಧ ಮಾಡಿ ಇಬ್ಬರಿಗೂ ನೀಡ್ತಿದ್ರು. ಆದ್ರೀಗ ನಮಗೆ ಫುಲ್ ಬಿಸ್ಕೆಟ್ ಬೇಕು. ಅಂತಹ ಕಂಟೆಂಟ್ ಸಿಕ್ಕಿದೆ. ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ ಅಂತ ತಲೈವಾ ಜೊತೆಗಿನ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ ಕಮಲ್.
ಈ ಹಿಂದೆ 1975ರ ಅಪೂರ್ವ ರಾಗಂಗಳ್ ಚಿತ್ರದಲ್ಲೇ ರಜನಿ-ಕಮಲ್ ಒಟ್ಟಿಗೆ ಕಮಾಲ್ ಮಾಡಿದ್ರು. ಅದರಲ್ಲಿ ಕಮಲ್ ಹಾಸನ್ ಹೀರೋ ಆದ್ರೆ ರಜನೀಕಾಂತ್ ವಿಲನ್. ಆ ಬಳಿಕ ಒಂದಷ್ಟು ಚಿತ್ರಗಳಲ್ಲಿ ಇವರಿಬ್ಬರೂ ತೆರೆ ಹಂಚಿಕೊಂಡರಾದ್ರೂ 1979ರ ಅಲಾವುದ್ದೀನುಮ್ ಅರ್ಪುತ ವಿಲಕ್ಕುಂ ಚಿತ್ರವೇ ಕೊನೆ. ಅದಾದ ಬಳಿಕ ಒಂದೇ ಒಂದು ಚಿತ್ರದಲ್ಲಿ ಕೂಡ ಒಟ್ಟಿಗೆ ನಟಿಸಿಲ್ಲ. ಇದೀಗ ಆ ಅವಕಾಶ ಕೂಡಿ ಬಂದಿದೆ.
ರಜನಿಯ ಇತ್ತೀಚಿನ ಎಲ್ಲಾ ಸಿನಿಮಾಗಳು ಮಾಸ್ ಮಸಾಲ ಎಂಟರ್‌ಟೈನರ್‌ಗಳೇ. ಕನಿಷ್ಟ 400 ರಿಂದ 500 ಕೋಟಿ ಬಾಕ್ಸ್ ಆಫೀಸ್‌ಗೆ ಮೋಸ ಇಲ್ಲ. ಇನ್ನು ವಿಕ್ರಮ್ ಚಿತ್ರದಿಂದ ಕಮಲ್ ಹಾಸನ್ ಕೂಡ ಫೀನಿಕ್ಸ್‌ನಂತೆ ಎದ್ದು ಬಂದರು. ಹಾಗಾಗಿ ರಜನಿ-ಕಮಲ್ ಮಾಡೋ ಈ ಮೆಗಾ ಮಸ್ ಚಿತ್ರ ರಿಲೀಸ್ ಆದ್ರೆ, ಇಲ್ಲಿಯವರೆಗೂ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಅನಿಸಿಕೊಂಡಿರೋ ಆಮೀರ್ ಖಾನ್‌ರ ದಂಗಲ್ ಚಿತ್ರದ 2200 ಕೋಟಿ ರೆಕಾರ್ಡ್‌ನ ಒಂದೇ ವಾರದಲ್ಲಿ ಈ ಕಾಂಬೋ ಉಡೀಸ್ ಮಾಡಿದ್ರೂ ಅಚ್ಚರಿಯಿಲ್ಲ.