ಸಿನಿಮಾಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿರೋ ಇಂಡಿಯನ್ ಸ್ಪೀಲ್‌ಬರ್ಗ್ ರಾಜಮೌಳಿ, ತನ್ನ ಸಿನಿಮಾಗಳ ಜೊತೆಗೆ ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೂ ಸಪೋರ್ಟ್ ಮಾಡ್ತಿರ್ತಾರೆ. ಸದ್ಯ ಟೂರಿಸ್ಟ್ ಫ್ಯಾಮಿಲಿ ನೋಡಿ ದಿಲ್‌ಖುಷ್ ಆಗಿರೋ ಮೌಳಿ, ಅಷ್ಟೇ ಖುಷಿಯಿಂದ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ.
- ಟೂರಿಸ್ಟ್ ಫ್ಯಾಮಿಲಿ ಕೈ ಹಿಡಿದ ರಾಜಮೌಳಿ ಹೇಳಿದ್ದೇನು..?
- ಶಶಿಕುಮಾರ್- ಸಿಮ್ರಾನ್ ಕಾಂಬಿನೇಷನ್ ತಮಿಳು ಚಿತ್ರ..!
- 50 ಕೋಟಿ ಕ್ಲಬ್ ಸೇರಿದ ಚಿತ್ರವನ್ನು ವಿಮರ್ಶಿಸಿದ ಮೌಳಿ
ಎಸ್. ಎಸ್. ರಾಜಮೌಳಿ.. ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಫಿಲ್ಮ್ ಮೇಕರ್. ಇವರ ಸಕ್ಸಸ್‌ರೇಟ್ ಹಂಡ್ರೆಡ್ ಪರ್ಸೆಂಟ್. ಯಾಕಂದ್ರೆ ಮಾಡೋ ಸಿನಿಮಾಗಳ ಸಂಖ್ಯೆಗಿಂತ, ಮಾಡಿದ ಎಲ್ಲಾ ಸಿನಿಮಾಗಳು ಗೆಲ್ಲಬೇಕು ಅಂತ ಕ್ವಾಲಿಟಿ ಪ್ರಾಡಕ್ಟ್‌ಗಳನ್ನ ಕೊಡುವಂತಹ ಮಹಾನ್ ಮಾಂತ್ರಿಕ ಇವರು. ಇಂಡಿಯಾ ಇವ್ರನ್ನ ಭಾರತದ ಸ್ಪೀಲ್‌ಬರ್ಗ್ ಅಂತಲೇ ಕರೆಯುತ್ತೆ. ಅದಕ್ಕೆ ಅವರು ಅರ್ಹರು ಕೂಡ.
ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳಿಂದ ಸೌತ್ ಸಿನಿಮಾಗಳಿಗೆ ಇಂಟರ್‌ನ್ಯಾಷನಲ್ ಮಾರ್ಕೆಟ್‌ನಲ್ಲಿ ಬಹುದೊಡ್ಡ ಸ್ಥಾನಮಾನ ದಕ್ಕಿಸಿಕೊಟ್ಟ ಗರಿಮೆ ಇವರಿಗೆ ಸಲ್ಲುತ್ತದೆ.
ಬಾಲಿವುಡ್‌ಗೆ ಸೆಡ್ಡು ಹೊಡೆದು, ಸೌತ್ ಸಿನಿಮಾಗಳು ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸಬಲ್ಲವು, ಆಸ್ಕರ್ ಪ್ರಶಸ್ತಿಗಳನ್ನ ಕೂಡ ತರಬಲ್ಲವು ಅನ್ನೋದನ್ನ ತೋರಿಸಿಕೊಟ್ಟರು. ಸದ್ಯ ಮಹೇಶ್ ಬಾಬು ಜೊತೆ SSMB29 ಸಿನಿಮಾ ಮಾಡ್ತಿದ್ದಾರೆ ಮೌಳಿ.
ಕನಸಲ್ಲೂ ಸಿನಿಮಾನೇ ಜೀವಿಸೋ ರಾಜಮೌಳಿ, ಹಗಲಿರುಳು ಅದರದ್ದೇ ಧ್ಯಾನದಲ್ಲಿರ್ತಾರೆ. ಅಂತಹ ರಾಜಮೌಳಿ ನಾಲ್ಕೈದು ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೂ ಸಹ, ತನ್ನ ಸಿನಿಮಾಗಳ ಜೊತೆ ಬೇರೆ ಸದಭಿರುಚಿಯ, ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೂ ಸಾಥ್ ಕೊಡ್ತಾರೆ.
ತೆಲುಗು ಚಿತ್ರರಂಗದ ಸಾಲು ಸಾಲು ಸಿನಿಮಾಗಳ ಪ್ರಮೋಷನ್ಸ್‌ನಲ್ಲಿ ಭಾಗಿಯಾಗಿದ್ರು. ಇದೀಗ ತಮಿಳಿನ ಒಂದು ಸಣ್ಣ ಬಜೆಟ್‌ನ ಅದ್ಭುತ ಸಿನಿಮಾ ನೋಡಿ, ಮನಸಾರೆ ಹೊಗಳಿ, ತನ್ನದೇ ಸೋಶಿಯಲ್ ಮೀಡಿಯಾದಲ್ಲಿ ಅದ್ರ ಬಗ್ಗೆ ಪೋಸ್ಟ್ ಕೂಡ ಹಾಕಿದ್ದಾರೆ.
ಮೌಳಿಯನ್ನ ಅಷ್ಟರ ಮಟ್ಟಿಗೆ ಕಾಡಿದಂತಹ ಸಿನಿಮಾ ಶಶಿಕುಮಾರ್ ಹಾಗೂ ಸಿಮ್ರಾನ್ ನಟನೆಯ ಟೂರಿಸ್ಟ್ ಫ್ಯಾಮಿಲಿ. ಯೆಸ್.. ಇತ್ತೀಚೆಗೆ ಸಿನಿಮಾ ನೋಡಿರೋ ರಾಜಮೌಳಿ, ಇತ್ತೀಚಿನ ದಿನಗಳಲ್ಲಿನ ದಿ ಬೆಸ್ಟ್ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್ ಕೊಟ್ಟ ಚಿತ್ರವಿದು ಅಂತ ಅದರ ಕಚಗುಳಿ ಇಡೋ ಹಾಸ್ಯದ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ನಿರ್ದೇಶಕ ಅಭಿಶನ್ ಜೀವಿಂತ್ ನಿರ್ದೇಶನ ಹಾಗೂ ಬರವಣಿಗೆ ಬಗ್ಗೆ ಸಹ ಪ್ರಶಂಸಿಸಿದ್ದಾರೆ.
ಶ್ರೀಲಂಕಾದಿಂದ ಮಿಸ್ ಆಗಿ ತಮಿಳುನಾಡಿಗೆ ಬರುವ ಫ್ಯಾಮಿಲಿಯೊಂದು, ಕೇರಳಾ ಮೂಲದವರು ಅಂತ ಹೇಳಿ ಐಡೆಂಟಿಟಿ ಪಡೆದುಕೊಳ್ಳುತ್ತೆ. ನಂತರ ಆಗುವ ಬೆಳವಣಿಗೆಗಳಿಂದ ಆ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತೆ. ಅದನ್ನ ಸೇವ್ ಮಾಡೋಕೆ ದೃಶ್ಯಂ ಸಿನಿಮಾದಲ್ಲಿನ ತರಹ ನಾಯಕನಟ ಶಶಿಕುಮಾರ್ ಏನೆಲ್ಲಾ ಮಾಡ್ತಾರೆ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ. ಏಪ್ರಿಲ್ 29ಕ್ಕೆ ತೆರೆಕಂಡ ಈ ಸಿನಿಮಾ 50ಕೋಟಿ ಗಳಿಸಿ, ನೂರು ಕೋಟಿಯತ್ತ ಮುನ್ನುಗ್ಗುತ್ತಿದೆ.