ಶೆಟ್ಟಿ ಗ್ಯಾಂಗ್, ಶೆಟ್ಟಿ ಮಾಫಿಯಾ ಅಂದವ್ರಿಗೆ ರಾಜ್ ಬಿ ಶೆಟ್ಟಿ ಖಡಕ್ ಉತ್ತರ ಕೊಟ್ಟಿದ್ದಾರೆ. ಯೆಸ್.. ಭಿನ್ನ ಅಲೆಯ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ರಕ್ಷಿತ್, ರಿಷಬ್ ಹಾಗೂ ರಾಜ್.. ಇಬ್ಬರನ್ನೊಬ್ಬರು ಎಂದೂ ಬಿಟ್ಟುಕೊಡಲ್ಲ. ಸದ್ಯ ಸು ಫ್ರಮ್ ಸೋ ಎಲ್ಲೆಡೆ ಟಾಕ್ ಆಫ್ ದಿ ಟೌನ್ ಆಗಿದ್ದು, ಸಂದರ್ಶನವೊಂದರಲ್ಲಿ ಶೆಟ್ರ ಸ್ನೇಹ ಸಂಬಂಧ, ಕ್ರಿಯೇಟಿವಿಟಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
- ‘ಶೆಟ್ಟಿ ಮಾಫಿಯಾ’ ಅಂದವ್ರಿಗೆ ರಾಜ್ ಬಿ ಶೆಟ್ಟಿ ಖಡಕ್ ಉತ್ತರ..!
- ನೀವೂ ಮಾಡ್ಕೊಳಿ.. ಬೇಡ ಅಂದವ್ರು ಯಾರು ಎಂದ ರಾಜ್ ಶೆಟ್ಟಿ
- ರಕ್ಷಿತ್- ರಿಷಬ್ ಜೊತೆಗಿನ ಸ್ನೇಹ ಬಂಧ ಬಿಚ್ಚಿಟ್ಟ ಟೋಬಿ ಸ್ಟಾರ್
- ಈ ಶೆಟ್ಟಿ ತ್ರಯರ ಸ್ನೇಹ ‘ಗಾಢವಾಗಿದೆ.. ಪ್ರಾಮಾಣಿಕವಾಗಿದೆ’..!!
ಸು ಫ್ರಮ್ ಸೋ.. ಕಾಂತಾರ ಸಿನಿಮಾದಂತೆ ಕನ್ನಡಿಗರಿಗಾಗಿ ತಯಾರಾದ ಈ ಸಿನಿಮಾ ಸದ್ಯ ಕೇರಳ, ಆಂಧ್ರ ಸೇರಿದಂತೆ ಸಪ್ತ ಸಾಗರದಾಚೆ ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದ್ರ ಅಸಲಿ ರೂವಾರಿ ಒನ್ ಅಂಡ್ ಓನ್ಲಿ ರಾಜ್ ಬಿ ಶೆಟ್ಟಿ. ಯೆಸ್.. ಪರಭಾಷೆಗಳಲ್ಲಿ ಪ್ರೊಡ್ಯೂಸರ್ಸ್ ಕ್ಯೂ ನಿಂತಿದ್ದು, ಕಾಲ್‌ಶೀಟ್‌ಗಾಗಿ ಡೈರೆಕ್ಟರ್ಸ್ ಮನೆ ಬಾಗಿಲಿಗೆ ಬರ್ತಿರೋ ಶೆಟ್ರು, ಕನ್ನಡದ ಜೊತೆ ಜೊತೆಗೆ ಒಳ್ಳೆಯ ಕಂಟೆಂಟ್ ಬೇಸ್ಡ್ ಚಿತ್ರಗಳಲ್ಲಿ ಹೊರಗೂ ನಟಿಸ್ತಿದ್ದಾರೆ.
ನಟನೆ, ನಿರ್ದೇಶನದ ಜೊತೆ ಜೊತೆಗೆ ಚಿತ್ರ ನಿರ್ಮಾಣ ಕೂಡ ಮಾಡ್ತಿರೋ ರಾಜ್ ಶೆಟ್ಟಿ, ಸು ಫ್ರಮ್ ಸೋ ಸಿನಿಮಾಗೆ ಬಂಡವಾಳ ಹಾಕಿ, ಹತ್ತಾರು ಮಂದಿ ಹೊಸ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಇದು ರಾಜ್ ಬಿ ಶೆಟ್ಟಿ ಮಾತ್ರವಲ್ಲ. ಇವ್ರಿಗೆ ಸ್ಫೂರ್ತಿ ಆಗಿರೋ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕೂಡ ಅದನ್ನೇ ಮಾಡ್ತಾ ಬರ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭಿನ್ನ ಅಲೆಯ ಸಿನಿಮಾಗಳಿಂದ ಗುರ್ತಿಸಿಕೊಂಡ ಶೆಟ್ರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಆದ್ರೀಗ ಸಾಕಷ್ಟು ಮಂದಿ ಶೆಟ್ರು ಗ್ಯಾಂಗ್ ಕಟ್ಕೋತಾರೆ. ಶೆಟ್ಟಿ ಗ್ಯಾಂಗ್, ಶೆಟ್ಟಿ ಮಾಫಿಯಾ ಅಂತೆಲ್ಲಾ ಆಡಿಕೊಳ್ತಾರೆ. ಅಂಥವ್ರಿಗೆ ಖಾಸಗಿ ಸಂದರ್ಶನವೊಂದರ ಮೂಲಕ ಟೋಬಿ ಸ್ಟಾರ್ ಖಡಕ್ ಉತ್ತರ ಕೊಟ್ಟಿದ್ದಾರೆ. ನೀವೂ ಮಾಡ್ಕೊಳಿ. ಬೇಡ ಅಂದವ್ರು ಯಾರು..? ಅಂತ ಸ್ಟ್ರೈಟ್ ಹಿಟ್ ಆನ್ಸರ್ ನೀಡಿದ್ದಾರೆ. ಅಲ್ಲದೆ, ನಮ್ಮ ಸ್ನೇಹ ಗಾಢವಾಗಿದೆ ಹಾಗೂ ಪ್ರಾಮಾಣಿಕವಾಗಿದೆ ಅಂತ ಸ್ನೇಹ ಸಂಬಂಧಗಳನ್ನ ವಿವರಿಸಿದ್ದಾರೆ ರಾಜ್ ಶೆಟ್ಟಿ.
ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ರಾಜ್ ಶೆಟ್ಟಿ ಇಂಡಸ್ಟ್ರಿಗೆ ಬರೋ ವೇಳೆಗೆ ರಕ್ಷಿತ್ ಹಾಗೂ ರಿಷಬ್ ಚಿತ್ರರಂಗ ಪ್ರವೇಶಿಸಿ ಆಗಿತ್ತು. ಆದ್ರೆ ರಿಷಬ್ ಒಂದು ಮೊಟ್ಟೆಯ ಕಥೆ ಮೆಚ್ಚಿದ್ರು. ಆಗಲೇ ಇವರ ನಡುವಿನ ಸ್ನೇಹ ಗಾಢವಾಗಿತ್ತಂತೆ. ರಕ್ಷಿತ್‌ರ 777 ಚಾರ್ಲಿ ಹಾಗೂ ರಿಷಬ್‌ರ ಕಾಂತಾರ ಚಿತ್ರಗಳಿಗೆ ಬರಹ ವಿಭಾಗದಲ್ಲಿ ಸಾಥ್ ನೀಡಿದ್ರು ರಾಜ್ ಬಿ ಶೆಟ್ಟಿ. ಲಾಕ್‌ಡೌನ್ ಸಮಯದಲ್ಲಿ ತಯಾರಾದ ರಾಜ್‌ರ ಗರುಡ ಗಮನ ವೃಷಣ ವಾಹನ ಚಿತ್ರವನ್ನು ರಕ್ಷಿತ್ ಪ್ರೆಸೆಂಟ್ ಮಾಡಿದ್ರು ಎಂದಿದ್ದಾರೆ.
ಸಿನಿಮಾ ರಂಗದಲ್ಲಿ ಪ್ರಾಮಾಣಿಕ ಸ್ನೇಹಿತರು ಸಿಗೋದೇ ಕಷ್ಟ. ಆದ್ರೆ ರಕ್ಷಿತ್ ಹಾಗೂ ರಿಷಬ್ ತುಂಬಾ ಪ್ರಾಮಾಣಿಕವಾಗಿದ್ದಾರೆ. ಅದೇ ಕಾರಣದಿಂದ ನಮ್ಮ ಸ್ನೇಹ ತುಂಬಾ ಗಟ್ಟಿಯಾಗಿದೆ ಎಂದಿದ್ದಾರೆ. ಪರಸ್ಪರ ಒಬ್ಬರ ಸಿನಿಮಾಗಳನ್ನ ಮತ್ತೊಬ್ಬರು ನೋಡುವುದು, ಮೆಚ್ಚಿಕೊಳ್ಳುತ್ತೇವೆ ಎಂದಿದ್ದಾರೆ. ಸು ಫ್ರಮ್ ಸೋಗೆ ರಕ್ಷಿತ್ ವ್ಯಕ್ತಪಡಿಸಿದ ಮೆಚ್ಚುಗೆ ಬಗ್ಗೆಯೂ ಬಹಿರಂಗವಾಗಿ ಹಂಚಿಕೊಂಡಿದ್ದಾರೆ ರಾಜ್. ಆದ್ರೆ ಶೆಟ್ಟಿ ಗ್ಯಾಂಗ್, ಮಾಫಿಯಾ ಅಂತೆಲ್ಲಾ ಅಂದ್ರೆ, ನೀವೂ ಒಂದು ಗ್ಯಾಂಗ್ ಮಾಡ್ಕೊಳಿ ಬ್ರದರ್. ಯಾರು ಬೇಡ ಅಂದ್ರು..? ಅಂತ ಖಾರವಾಗಿಯೇ ಉತ್ತರ ನೀಡಿದ್ದಾರೆ. ಸದ್ಯ ಶೆಟ್ರ ಈ ಸ್ಟೇಟ್‌ಮೆಂಟ್ ಎಲ್ಲೆಡೆ ಮಾತನಾಡುವಂತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್