ಲ್ಯಾಂಡ್‌ಲಾರ್ಡ್ ಇದೇ ತಿಂಗಳಾಂತ್ಯಕ್ಕೆ ತೆರೆಗೆ ಬರ್ತಿರೋ ಈ ವರ್ಷದ ಮೊದಲ ಬಿಗ್ ಸ್ಟಾರ್ ಮೂವಿ. ಜನವರಿ 23ಕ್ಕೆ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಶೂಟಿಂಗ್ ಮಾತ್ರ ಇನ್ನೂ ಬ್ಯಾಲೆನ್ಸ್ ಉಳಿಸಿದೆ ಚಿತ್ರತಂಡ. ಯೆಸ್.. ರಾಜ್ ಬಿ ಶೆಟ್ಟಿಗೊಂದು ಬೊಂಬಾಟ್ ಐಟಂ ಡ್ಯಾನ್ಸ್ ಮಾಡಿಸ್ತಿದಾರೆ. ನಂಬರ್ ಮಾಡಿಸ್ತಿದ್ದು.. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
ಲ್ಯಾಂಡ್‌ಲಾರ್ಡ್.. ಜನವರಿ 23ಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಸ್ಯಾಂಡಲ್‌ವುಡ್‌ನ ಈ ವರ್ಷದ ಬಿಗ್ ಬಜೆಟ್ ಮೂವಿ. ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ನ ಈ ಸಿನಿಮಾ, ಹೊಸ ವರ್ಷದ ಮೊದಲ ಬಿಗ್ ಸ್ಟಾರ್ ಮೂವಿ ಕೂಡ ಹೌದು. ಸ್ಯಾಂಪಲ್ಸ್‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿರೋ ಈ ಲ್ಯಾಂಡ್‌ಲಾರ್ಡ್ ಅಡ್ಡಾದಿಂದ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.
ಶೂಟಿಂಗ್ ಬ್ಯಾಲೆನ್ಸ್.. ರಿಲೀಸ್ ಡೇಟ್ ಮಾತ್ರ ಅನೌನ್ಸ್..!
ಲ್ಯಾಂಡ್‌ಲಾರ್ಡ್ ದುನಿಯಾದಲ್ಲಿ ನಡೆಯುತ್ತಿರೋದೇನು ?
ಜನವರಿ 23ಕ್ಕೆ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿರೋ ಚಿತ್ರತಂಡ, ಇನ್ನೂ ಒಂದು ಹಾಡಿನ ಶೂಟಿಂಗ್ ಬ್ಯಾಲೆನ್ಸ್ ಉಳಿಸಿದೆ ಅಂದ್ರೆ ನೀವು ನಂಬಲೇಬೇಕು. ಯೆಸ್.. ಇದೇ ಜನವರಿ 8ರಿಂದ 11ನೇ ತಾರೀಖು ಒಳಗೆ ಲ್ಯಾಂಡ್‌ಲಾರ್ಡ್ ಚಿತ್ರದ ಬಾಕಿ ಉಳಿದಿರೋ ಆ ಹಾಡನ್ನ ಚಿತ್ರಿಸಲು ನಿರ್ದೇಶಕ ಜಡೇಶ್ ಕೆ ಹಂಪಿ ಪ್ಲ್ಯಾನ್ ಮಾಡಿದ್ದಾರೆ. ಅಂದಹಾಗೆ ಇದು ಅಂತಿಂಥ ಸಾಂಗ್ ಅಲ್ಲ. ಪಡ್ಡೆ ಹುಡುಗರ ನಿದ್ದೆ ಕೆಡಿಸೋ ಐಟಂ ನಂಬರ್.
ಹೌದು.. ಇದೇ ಮೊದಲ ಬಾರಿಗೆ ರಾಜ್ ಬಿ ಶೆಟ್ಟಿ ಐಟಂ ಡ್ಯಾನ್ಸ್‌ವೊಂದರಲ್ಲಿ ಕಾಣಸಿಗಲಿದ್ದಾರೆ. ನಟ, ಸಹನಟ, ಖಳನಟನಾಗಿ ಮಿಂಚಿರೋ ರಾಜ್ ಶೆಟ್ರು 45 ಚಿತ್ರದ ಆ್ಯಫ್ರೋ ಟಪಾಂಗ್ ಸಾಂಗ್‌ನಲ್ಲಿ ಅದ್ಭುತ ಡ್ಯಾನ್ಸರ್ ಅನ್ನೋದನ್ನ ಪ್ರೂವ್ ಮಾಡಿದ್ರು. ಇದೀಗ ಮತ್ತೇರಿಸೋ ಅಂತಹ ಗ್ಲಾಮರ್ ಡಾಲ್ ಜೊತೆ ಸ್ಟೆಪ್ ಹಾಕಲಿದ್ದಾರಂತೆ. ಅಂದಹಾಗೆ ಆ ಐಟಂ ಡ್ಯಾನ್ಸರ್ ಆಗಿ ಯಾರು ಬರ್ತಾರೆ ಅನ್ನೋದೇ ಸಸ್ಪೆನ್ಸ್.
ರಾಜ್ ಶೆಟ್ರ ಐಟಂ ಡ್ಯಾನ್ಸ್.. ಬಳುಕಿಸೋದ್ಯಾರು ಸೊಂಟ..?
ಜನವರಿ 8 ರಿಂದ 11ರ ತನಕ ಶೂಟಿಂಗ್.. ಅನೂಪ್ ಲೈನ್ಸ್!
ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಅನಿಸಿಕೊಂಡಿರೋ ರಾಜ್ ಬಿ ಶೆಟ್ಟಿ ತರಹೇವಾರಿ ಪಾತ್ರಗಳಲ್ಲಿ ಪ್ರೇಕ್ಷಕರನ್ನ ರಂಜಿಸುತ್ತಾ ಬರ್ತಿದ್ದಾರೆ. ಈ ಬಾರಿ ಸೊಂಟ ಬಳುಕಿಸೋ ಗ್ಲಾಮರ್ ಡಾಲ್ ಜೊತೆ ಕುಣೀತಾರೆ ಅನ್ನೋದೇ ಇಂಟರೆಸ್ಟಿಂಗ್. ಈಗಾಗ್ಲೇ ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ಆಳುವವನಾಗಿ ದಿ ರೂಲರ್ ಟೀಸರ್‌ನಲ್ಲಿ ತಮ್ಮ ವಿಲನ್ ಖದರ್ ತೋರಿದ್ದಾರೆ ರಾಜ್ ಬಿ ಶೆಟ್ಟಿ. ಇದೀಗ ಸಾಂಗ್ ಮೂಲಕ ಕೂಡ ರಂಜಿಸೋಕೆ ತಯಾರಾಗ್ತಿದ್ದಾರೆ.
ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಸಾಂಗ್‌ಗೆ ಸಾಹಿತ್ಯ ರಚಿಸಿದ್ದ ಅನೂಪ್ ಭಂಡಾರಿ ಅವರೇ ಈ ಲ್ಯಾಂಡ್‌ಲಾರ್ಡ್ ಐಟಂ ನಂಬರ್‌ಗೂ ಪದಗಳನ್ನ ಪೋಣಿಸಿದ್ದು, ಅಜನೀಶ್ ಕಂಪೋಸ್ ಮಾಡಿದ್ದಾರೆ. ರವಿ ಸಂತೈ ಹೈಕ್ಳು ಆರ್ಟ್ ವರ್ಕ್‌ನಲ್ಲಿ ಕಲರ್‌ಫುಲ್ ಸೆಟ್ ತಯಾರಾಗ್ತಿದ್ದು, ಈ ಹಾಡೊಂದಕ್ಕೇನೇ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿದ್ದಾರೆ ನಿರ್ಮಾಪಕರು. ಸಾರಥಿ ಫಿಲಂಸ್ ಬ್ಯಾನರ್‌ನಡಿ ಸತ್ಯ ಪ್ರಕಾಶ್ ಹಾಗೂ ಹೇಮಂತ್ ಗೌಡ ಅವರು ಲ್ಯಾಂಡ್‌ಲಾರ್ಡ್‌ಗೆ ಬಂಡವಾಳ ಹೂಡಿದ್ದು, 80ರ ದಶಕದ ಹೋರಾಟಕ ಕಿಚ್ಚಿನ ಕಥೆ ಬೆಳ್ಳಿಪರದೆ ಮೇಲೆ ಅನಾವರಣಗೊಳ್ಳಲಿದೆ.





