ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಬರ್ತ್ ಡೇ ಸಂಭ್ರಮ. ಜಾವಾ ಏರಿ ದುರಹಂಕಾರ ಮೆರೆಯೋಕೆ ಸಜ್ಜಾಗ್ತಿರೋ ಈಕೆ ಸ್ವತಃ ತನ್ನನ್ನ ತಾನು ದುರಹಂಕಾರಕ್ಕೆ ಬ್ರಾಂಡ್ ಅಂಬಾಸಿಡರ್ ಮಾಡ್ಕೊಂಡಿದ್ದಾರೆ. ಕಿಚ್ಚ ಸುದೀಪ್ ಬಗ್ಗೆ ರಾಗ್ಸ್ ಹೇಳಿದ್ದೇನು..? ಜಾವಾ ಅಪ್ಡೇಟ್ಸ್ ಏನು..? ಎಷ್ಟನೇ ಬರ್ತ್ ಡೇ..? ಯಾರೆಲ್ಲಾ ಇದ್ರು ಅನ್ನೋದಕ್ಕೆ ಈ ಸೆಲೆಬ್ರೇಷನ್ ಝಲಕ್ ಒಮ್ಮೆ ನೋಡಿ.
- ದುರಹಂಕಾರಕ್ಕೆ ಬ್ರಾಂಡ್ ಅಂಬಾಸಿಡರ್ ಆದ್ರೇಕೆ ರಾಗಿಣಿ ?
- ಜಾವಾ ಏರಿದ ಆರ್ ಕ್ವೀನ್ಗೆ ಬಾದ್ಷಾ ಜೊತೆ ನಟಿಸುವಾಸೆ
- ತುಪ್ಪದ ಹುಡ್ಗಿ ಜರ್ನಿಗೆ 15 ವರ್ಷ.. ಗ್ಯಾರಂಟಿ ಜೊತೆ ಹರುಷ
- ಪೌರ ಕಾರ್ಮಿಕರಿಂದ ಫಸ್ಟ್ ಲುಕ್.. ಕೇಕ್ ಕತ್ತರಿಸಿ ಸಂಭ್ರಮ
ರಾಗಿಣಿ ದ್ವಿವೇದಿ.. ಮಧ್ಯೆಪ್ರದೇಶದಲ್ಲಿ ಹುಟ್ಟಿ, ಬೆಳೆದು, ಕರ್ನಾಟದ ಬೆಂಗಳೂರಿನಲ್ಲಿ ಸೆಟಲ್ ಆಗಿರೋ ನಟಿಮಣಿ. ಇಲ್ಲೇ ಕರಿಯರ್ ಕಟ್ಟಿಕೊಂಡ ಈಕೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 15 ವರ್ಷಗಳಾಗ್ತಿದೆ. ಹೌದು.. 20ನೇ ವಯಸ್ಸಿಗೆ ಸುದೀಪ್ ನಟನೆಯ ವೀರ ಮದಕರಿ ಚಿತ್ರದಿಂದ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟ ರಾಗಿಣಿ, ಶಿವಣ್ಣ, ಉಪೇಂದ್ರ, ಸುದೀಪ್, ದುನಿಯಾ ವಿಜಯ್ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ಸ್ ಜೊತೆ ತೆರೆಹಂಚಿಕೊಂಡಿದ್ದಾರೆ ರಾಗಿಣಿ.
ಕನ್ನಡದ ಜೊತೆ ಬಾಲಿವುಡ್, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳಲ್ಲೂ ಛಾಪು ಮೂಡಿಸಿರೋ ರಾಗಿಣಿ ಚಿತ್ರರಂಗಕ್ಕೆ ಕಾಲಿಟ್ಟು ಒಂದೂವರೆ ದಶಕ. ಆ ಸಂಭ್ರಮದ ಜೊತೆಗೆ ಇಂದು ತಮ್ಮ 35ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ತುಪ್ಪದ ಹುಡುಗಿ, ಇದೀಗ ಸಿನಿ ಕರಿಯರ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಅರಂಭಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ ಜಾವಾ ಸಿನಿಮಾ ಮೂಲಕ ಮಹತ್ವದ ಹೆಜ್ಜೆ ಇಡ್ತಿದ್ದಾರೆ.
ಬಿಚ್ಚುಗತ್ತಿ ಫೇಮ್ ರಾಜವರ್ಧನ್ ಜೊತೆ ಕೊಲ್ಯಾಬೊರೇಟ್ ಆಗಿರೋ ರಾಗಿಣಿ, ನಟನೆ ಜೊತೆ ನಿರ್ಮಾಣ ಸಂಸ್ಥೆ ಕೂಡ ಆರಂಭಿಸ್ತಿದ್ದಾರೆ. ಅಭಿಮಾನಿಗಳಿಂದ ಆರ್ ಕ್ವೀನ್ ಅನ್ನೋ ಪಟ್ಟ ಪಡೆದಿರೋ ರಾಗಿಣಿ ದ್ವಿವೇದಿ, ಪೌರ ಕಾರ್ಮಿಕರಿಂದ ಜಾವಾ ಚಿತ್ರದ ಫಸ್ಟ್ಲುಕ್ ಲಾಂಚ್ ಮಾಡಿಸಿದ್ದು ಇಂಟರೆಸ್ಟಿಂಗ್. ಪೋಸ್ಟರ್ನಲ್ಲಿ ದುರಹಂಕಾರದ ಬ್ರಾಂಡ್ ಅಂಬಾಸಿಡರ್ ಅಂತ ಬರೆದಿದ್ದು, ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ ಜಾವಾ ಫಸ್ಟ್ ಲುಕ್.
ಕಿಚ್ಚ ಸುದೀಪ್ ಮೂಲಕ ಕರಿಯರ್ ಆರಂಭಿಸಿದ ರಾಗಿಣಿ, ಮತ್ತೊಮ್ಮೆ ಸುದೀಪ್ ಜೊತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ, ತಮ್ಮ ಮುಂದಿನ ನಡೆ ಬಗ್ಗೆ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಒಟ್ಟಾರೆ ರಾಗಿಣಿ ನ್ಯೂ ಇನ್ನಿಂಗ್ಸ್ಗೆ ಶುಭವಾಗಲಿ. ಹ್ಯಾಪಿ ಬರ್ತ್ ಡೇ ರಾಗ್ಸ್. ಸದಾ ರಂಜಿಸುತ್ತಲೇ ಇರಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್