ಕನ್ನಡ ಚಿತ್ರರಂಗದ ಪ್ರಮುಖ ನಟಿ ರಚಿತಾ ರಾಮ್, ನವರಂಗ ಚಿತ್ರಮಂದಿರದಲ್ಲಿ ನಡೆದ ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಲಾಂಚ್‌ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ದರ್ಶನ್ ಅಭಿಮಾನಿಗಳು ,ನಟಿಗೆ ಮಾತನಾಡಲು ಬಿಡದೇ ಕಿರುಚಾಡಿದ್ದಾರೆ.
ಟೀಸರ್ ಲಾಂಚ್‌ನ ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಒಂದು ಕಡೆ ದುನಿಯಾ ವಿಜಯ್ ಫ್ಯಾನ್‌ಗಳು ‘ಸಲಗ’ ಎಂದು ಕೂಗಿದರೆ, ಇನ್ನೊಂದೆಡೆ ದರ್ಶನ್ ಫ್ಯಾನ್‌ಗಳು ‘ಡಿ ಬಾಸ್’ ಎಂದು ಗರ್ಜಿಸಿದರು. ಈ ಮಧ್ಯೆ ರಚಿತಾ ಮಾತನಾಡಲು ಆಗದೆ ವೇದಿಕೆಯ ಮುಂದೆ ಕುಳಿತು ನಂತರ ಮಾತನಾಡಿದರು.
ಲ್ಯಾಂಡ್ ಲಾರ್ಡ್’ ಚಿತ್ರದ ಕುರಿತು ಮಾತನಾಡಿದ ರಚಿತಾ ರಾಮ್, ಲ್ಯಾಂಡ್ ಲಾರ್ಡ್ ಕಥೆಯನ್ನು ನಾನು ಲೋಕೇಶ್ ಕನಕರಾಜ್ ಮತ್ತು ದರ್ಶನ್ ಅವರಿಗೆ ಹೇಳಿದ್ದೆ. ಅವರು ಇಬ್ಬರೂ ಈ ಕಥೆಯನ್ನು ಒಪ್ಪಿಕೊಂಡಾಗ ಈ ಚಿತ್ರ ನಿರ್ಮಾಣವಾಯಿತು. ಲ್ಯಾಂಡ್ ಲಾರ್ಡ್’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ದಿಕ್ಕನ್ನು ಸೂಚಿಸಬಹುದು ಎಂದು ನಟಿ ರಚಿತಾ ರಾಮ್ ತಿಳಿಸಿದ್ದಾರೆ.





