ಮಾನ್‌ಸ್ಟರ್ ಪ್ರಶಾಂತ್ ನೀಲ್..ಇವ್ರು ಹೆಸರಿಗಷ್ಟೇ ಸಿಂಗಲ್, ಡೈರೆಕ್ಷನ್‌ಗೆ ಇಳಿದ್ರೆ ಒನ್ ಟು ಡಬಲ್. ಉಗ್ರಂ ಬಳಿಕ ಮಾಡಿದ ಎಲ್ಲಾ ಚಿತ್ರಗಳು ಎರಡೆರಡು ಭಾಗಗಳಾಗಿವೆ. ಸದ್ಯ ಡ್ರ್ಯಾಗನ್ ಕೂಡ ಅದೇ ಲಿಸ್ಟ್‌ಗೆ ಸೇರ್ತಿದೆ. ಜೂನಿಯರ್ ಎನ್‌ಟಿಆರ್-ನೀಲ್ ಜೋಡಿ ಏನೆಲ್ಲಾ ಮಾಡೋಕೆ ಹೊರಟಿದೆ ಅಂತೀರಾ..?
ತಮ್ಮ ಸಿನಿಮಾಗಳು ಹಾಗೂ ಅವುಗಳ ಮೇಕಿಂಗ್‌ನಿಂದ ಮಾನ್‌ಸ್ಟರ್ ಡೈರೆಕ್ಟರ್ ಅಂತ ಬಿರುದು ಪಡೆದಿರೋ ಪ್ರಶಾಂತ್ ನೀಲ್, ಸದ್ಯ ಜೂನಿಯರ್ ಎನ್‌ಟಿಆರ್ ನಟನೆಯ ಡ್ರ್ಯಾಗನ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಆದ್ರೆ ಇತ್ತೀಚೆಗೆ ಡ್ರ್ಯಾಗನ್ ಚಿತ್ರದಲ್ಲಿ ಇಲ್ಲಿಯವರೆಗೂ ಚಿತ್ರಿತಗೊಂಡ ಸಿನಿಮಾ ಫೂಟೇಜ್‌ನ ಶೇಕಡಾ 90ರಷ್ಟು ವಿಶ್ಯುವಲ್ಸ್ ಡಿಲೀಟ್ ಮಾಡಲಾಗಿದೆ. ಕೇವಲ 10 ಪರ್ಸೆಂಟ್ ಉಳಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಅದ್ರ ಹಿಂದಿನ ಅಸಲಿ ಕಥೆ ಈಗ ರಿವೀಲ್ ಆಗಿದೆ.

ಡ್ರ್ಯಾಗನ್ ಕೂಡ 2 ಪಾರ್ಟ್.. ಡಬಲ್ ಡೈರೆಕ್ಟರ್ ನೀಲ್
ಶೂಟ್ ಆದ ಫೂಟೇಜ್ ಡಿಲೀಟ್‌ಗೆ 2 ಪಾರ್ಟ್ ಕಾರಣ
ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಡ್ರ್ಯಾಗನ್ ಚಿತ್ರವನ್ನ ಎರಡು ಭಾಗಗಳಲ್ಲಿ ತಯಾರಿಸುವಂತೆ ಡೈರೆಕ್ಟರ್ ಪ್ರಶಾಂತ್ ನೀಲ್ ಮೇಲೆ ಒತ್ತಡ ಹೇರಿದೆ ಎನ್ನಲಾಗ್ತಿದೆ. ಅದೇ ಕಾರಣದಿಂದ ಕಥೆಯನ್ನ ಮತ್ತಷ್ಟು ಎನ್‌ಲಾರ್ಜ್ ಮಾಡೋ ಕಾರಣಕ್ಕೆ ನೀಲ್‌ಗೆ ಬೇರೆ ಮಾರ್ಗ ಇಲ್ಲದೆ, ಚಿತ್ರಿಸಿರೋದನ್ನ ಡಿಲೀಟ್ ಮಾಡಿ, ಹೊಸದಾಗಿ ಶೂಟಿಂಗ್ ಶುಭಾರಂಭ ಮಾಡಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ಎನ್‌ಟಿಆರ್‌ಗೆ ಪೆಟ್ಟು ಕೂಡ ಆಗಿದೆ. ಅದ್ರಿಂದ ರಿಕವರ್ ಆಗ್ತಿರೋ ತಾರಕ್‌ಗೆ ಸ್ವಲ್ಪ ದಿನ ರೆಸ್ಟ್ ಮಾಡಲು ಸೂಚಿಸಿದ್ದಾರಂತೆ ವೈದ್ಯರು.
ತಾರಕ್‌ಗೆ ಶೂಟಿಂಗ್ ವೇಳೆ ಪೆಟ್ಟಾಗಿದೆ. ಆ ನೋವಿನಿಂದ ಬಳಲುತ್ತಿದ್ದಾರೆ ಅನ್ನೋದಕ್ಕೆ ಹೈದ್ರಾಬಾದ್‌ನಲ್ಲಿ ನಡೆದ ಕಾಂತಾರ-1 ಚಿತ್ರದ ಪ್ರೀ ರಿಲೀಸ್ ಇವೆಂಟ್ ಸಾಕ್ಷಿ ಆಗಿದೆ. ಅಂದು ಚೀಫ್ ಗೆಸ್ಟ್ ಆಗಿ ವೇದಿಕೆಗೆ ಆಗಮಿಸಿದ್ದ ತಾರಕ್, ಪದೇ ಪದೆ ತಮ್ಮ ಎಡಗೈನಿಂದ ಬಲಭಾಗದ ರಿಬ್ಸ್‌ನ ಪದೇ ಪದೆ ಹಿಡ್ಕೊಳ್ತಿದ್ರು. ಆ ಒದ್ದಾಟವನ್ನು ನಾವು ಈಗ ಸ್ಮರಿಸಿಕೊಳ್ಳಬಹುದು. ಇನ್ನು ಡ್ರ್ಯಾಗನ್ ಚಿತ್ರದ ಸಿನಿಮಾಟೋಗ್ರಾಫರ್ ಭುವನ್ ಗೌಡ ಮದ್ವೆಗೂ ಇದ್ರಿಂದ ಒಂದು ಬ್ರೇಕ್ ಸಿಕ್ಕಂತಾಗಿದೆ. ಅದೇ ಗ್ಯಾಪ್‌ನಲ್ಲಿ ಭುವನ್ ಹಸೆಮಣೆ ಏರಿರೋದು ವಿಶೇಷ.

ಆ್ಯಕ್ಷನ್ ಸೀಕ್ವೆನ್ಸ್ ವೇಳೆ NTRಗೆ ಪೆಟ್ಟು.. ಸದ್ಯಕ್ಕಿಲ್ಲ ಶೂಟ್
ಉಗ್ರಂ ಬಿಟ್ರೆ ನೀಲ್ ಎಲ್ಲಾ ಚಿತ್ರಗಳ ಡಬ್ಕಿ ಡಬಲ್ ಗುರು..!
ಅಂದಹಾಗೆ ಪ್ರಶಾಂತ್ ನೀಲ್ ಹೆಸರಿಗಷ್ಟೇ ಒಬ್ಬರು. ಆದ್ರೆ ಅವರಲ್ಲಿ ಇಬ್ಬರು ಡೈರೆಕ್ಟರ್‌ಗಳಿದ್ದಾರೆ. ಅದೇ ಕಾರಣದಿಂದ ಉಗ್ರಂ ಸಿನಿಮಾ ಹೊರತುಪಡಿಸಿ, ಉಳಿದಂತೆ ಎಲ್ಲಾ ಚಿತ್ರಗಳು ಎರಡೆರಡು ಭಾಗಗಳಲ್ಲಿ ತಯಾರಾಗಿವೆ. ಆಗ್ತಿವೆ ಕೂಡ. ಕೆಜಿಎಫ್ ಎರಡು ಅವತರಣಿಕೆಗಳಲ್ಲಿ ಬಂತು. ಸಲಾರ್ ಎರಡನೇ ಭಾಗ ಶೌರ್ಯಂಗ ಪರ್ವ ಶುಭಾರಂಭ ಆಗಬೇಕಿದೆ. ಡ್ರ್ಯಾಗನ್ ಕೂಡ ಈಗ ಅದೇ ಲಿಸ್ಟ್‌ಗೆ ಸೇರಿರೋದು ಇಂಟರೆಸ್ಟಿಂಗ್.
ಇನ್ಮೇಲೆ ಪ್ರಶಾಂತ್ ನೀಲ್‌ನ ಡೈರೆಕ್ಟರ್ ಬದಲಿಗೆ ಡಬಲ್ ಡೈರೆಕ್ಟರ್ ಅಂತ ಕರೆಯೋಕೆ ಶುರು ಮಾಡಿದ್ರೂ ಅಚ್ಚರಿಯಿಲ್ಲ. ಇದೀಗ ಡ್ರ್ಯಾಗನ್ ಕಥೆ ಮೇಲೆ ರೀ ವರ್ಕ್ ಮಾಡ್ತಿರೋ ನೀಲ್, ಸದ್ಯದಲ್ಲೇ ಶೂಟಿಂಗ್ ಆರಂಭಿಸೋ ಧಾವಂತದಲ್ಲಿದ್ದಾರೆ.





