ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಡ್ಯಾನ್ಸ್ ಅಂದ್ರೆ ಎಂತವರು ಮುಗಿ ಬೀಳ್ತಾರೆ. ಅವರ ನಟನೆ, ನಿರ್ದೇಶನ, ಕೊರಿಯೋಗ್ರಾಫಿ ಜೊತೆಗೆ ಸ್ವತಃ ಅವರೇ ಡ್ಯಾನ್ಸ್ ಮಾಡೋಕೆ ನಿಂತ್ರೆ ಶಿಳ್ಳೆ- ಚಪ್ಪಾಳೆಗಳ ಸುರಿಮಳೆ ಕಟ್ಟಿಟ್ಟ ಬುತ್ತಿ. ವಿಶ್ವ ಸಿನಿದುನಿಯಾಗೆ ತನ್ನ ಡ್ಯಾನ್ಸ್ ಗತ್ತು ಪರಿಚಯಿಸಿರೋ ಪ್ರಭುದೇವ, ಒಂದು ಮ್ಯೂಸಿಕಲ್ ಕನ್ಸಾರ್ಟ್ ಮಾಡ್ತಾರೆ ಅಂದ್ರೆ ಜನ ಕಾತರದಿಂದ ಕಾಯ್ತಾರೆ. ಸದ್ಯ ಬೇಸಗೆ ಶುರುವಾಗಿದ್ದು, ಚೆನ್ನೈನ YMCA ಮೈದಾನದಲ್ಲಿ ಇದೇ ಫೆಬ್ರವರಿ 22ರಂದು ಪ್ರಭುದೇವ ಮುಂದಾಳತ್ವದಲ್ಲಿ ಒಂದು ಕಾನ್ಸರ್ಟ್ ನಡೆಯುತ್ತಿದೆ. ಆದ್ರೆ ಅದು ರಿಹರ್ಸಲ್ ಹಂತದಲ್ಲೇ ನಟೀಂನಿಯೊಬ್ಬರು ಕಾನ್ಸರ್ಟ್ ನಿಂದ ಹೊರಬಂದಿದ್ದಾರೆ.
ತಮಿಳು ಹಾಗೂ ಮಲಯಾಳಂನಲ್ಲಿ ಹೆಸರು ಮಾಡಿದ ಸೃಷ್ಟಿ ಡಾಂಗೆ ಅನ್ನೋ ಚೆಲುವೆ, ಪ್ರಭುದೇವ ಕಾನ್ಸರ್ಟ್ ನಿಂದ ಏಕಾಏಕಿ ಹೊರಬಂದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದೊಂದು ಪೋಸ್ಟ್ ಕೂಡ ಹಾಕಿದ್ದಾರೆ. ಅದರಲ್ಲಿ ಅವ್ರ ಅಸಮಾಧಾನ, ಬೇಸರ, ನೋವು ಯಾರ ಮೇಲೆ..? ಏತಕ್ಕಾಗಿ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸೃಷ್ಟಿ ಡಾಂಗೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, *”ಕಲಾವಿದರ ಗೌರವ ಮತ್ತು ಸಹಯೋಗವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನನ್ನ ಪ್ರತಿಭೆಗೆ ಅನ್ಯಾಯ”* ಎಂದು ಸ್ಪಷ್ಟಪಡಿಸಿದ್ದಾರೆ. ಇದು ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಸವಾಲಾಗಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಪ್ರಭುದೇವರ ತಂಡದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತ, ಸೃಷ್ಟಿಯ ನಿರ್ಧಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಬೆಂಬಲಿಸುತ್ತಿದ್ದಾರೆ. ಕಲಾವಿದರ ಹಕ್ಕುಗಳಿಗಾಗಿ ನಿಲುವು ತೆಗೆದುಕೊಳ್ಳುವುದು ಮಹತ್ವದ್ದು ಎಂಬ ಅಭಿಪ್ರಾಯವೂ ಹರಡುತ್ತಿದೆ.
ಪ್ರಭುದೇವರ “ಲೈವ್” ಕನ್ಸರ್ಟ್ ಗಳು ಯಾವಾಗಲೂ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿ. ಆದರೆ, ಈ ಬಾರಿ ಸೃಷ್ಟಿ ಡಾಂಗೆರವರ ಹೊರಹೋಗುವಿಕೆ ಪ್ರಶ್ನೆಗಳನ್ನು ಎತ್ತಿದೆ. ಕಲಾವಿದರ ನಡುವಿನ ಸಂವಾದ ಮತ್ತು ಸಹಕಾರದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿತೋರಿಸಿದೆ. ಕನ್ಸರ್ಟ್ ನಂತರದ ಪ್ರತಿಕ್ರಿಯೆಗಳು ಏನಾಗಿವೆ ಎಂದು ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.