ರಂಗಸ್ಥಳಂ ಬಳಿಕ ಮತ್ತೊಮ್ಮೆ ಡಿ ಗ್ಲಾಮರ್ ಲುಕ್‌ನಲ್ಲಿ ಕಿಕ್ ಕೊಡೋಕೆ ಬರ್ತಿದ್ದಾರೆ ಚಿರು ತನಯ ರಾಮ್ ಚರಣ್. ಪೆದ್ದಿ ಟೀಸರ್ ನೋಡಿ ದಂಗಾಗಿದ್ದ ಸಿನಿರಸಿಕರು, ಇದೀಗ ಚಿಕಿರಿ ಸ್ಟೆಪ್ಸ್‌ಗೆ ಪ್ಯಾನ್ ಇಂಡಿಯಾ ಕ್ಲೀನ್ ಬೋಲ್ಡ್ ಆಗುವಂತಾಗಿದೆ. ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಗ್ಲಾಮರ್ ಜೊತೆ ಚರಣ್ ಚಿಕಿರಿ ರಾ & ರಗಡ್ ಸ್ಟೆಪ್ಸ್ ಹೇಗಿದೆ ಹೀಳ್ತೀವಿ ಈ ಸ್ಟೋರಿ ನೋಡಿ.
ಅಬ್ಬಬ್ಬಾ.. ಇದೇನ್ ಡ್ಯಾನ್ಸಾ ಅಥ್ವಾ ಏನ್ ಗುರು..? ಸ್ಪ್ರಿಂಗ್ ತರಹ ಆಡ್ತಿದ್ದಾರಲ್ವಾ ಅಂತ ಹುಬ್ಬೇರಿಸಬೇಡಿ. ನಿಮ್ಮ ಊಹೆ ನಿಜಾನೇ. ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್, ತಂದೆಯನ್ನ ಮೀರಿಸಬಲ್ಲಂತಹ ಡ್ಯಾನ್ಸರ್ ಅನ್ನೋದು ಈ ಹಾಡಿನಿಂದ ಗೊತ್ತಾಗ್ತಿದೆ. ಯೆಸ್.. ಇದು ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ನೆಕ್ಸ್ಟ್ ವೆಂಚರ್ ಪೆದ್ದಿ ಚಿತ್ರದ ಫಸ್ಟ್ ಡ್ಯಾನ್ಸಿಂಗ್ ನಂಬರ್.
ಪೆದ್ದಿ ಚರಣ್ ಚಿಕಿರಿ ಸ್ಟೆಪ್‌ಗೆ ಪ್ಯಾನ್ ಇಂಡಿಯಾ ಬೋಲ್ಡ್
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತೆ ಡ್ಯಾನ್ಸ್ ರೂಲ್ಡ್
ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾಹ್ನವಿ ಹಾಗೂ ಚರಣ್ ಜೋಡಿಯ ಈ ಸಿನಿಮಾ, ಕಂಪ್ಲೀಟ್ ಹಳ್ಳಿ ಸೊಗಡು, ಸೊಬಗಿನಿಂದ ಕೂಡಿರಲಿದೆ. ಪೆದ್ದನಂತೆ ಪೆದ್ದಿ ರೋಲ್ ಮಾಡ್ತಿರೋ ಚರಣ್, ಆಫ್ಟರ್ ರಂಗಸ್ಥಳಂ ಒನ್ಸ್ ಅಗೈನ್ ಡಿ ಗ್ಲಾಮರ್ ರೋಲ್‌ನಲ್ಲಿ ಮಿಂಚು ಹರಿಸಲಿದ್ದಾರೆ. ಇಲ್ಲಿ ಗಡ್ಡ, ಕೂದಲು ಬಿಟ್ಕೊಂಡು, ಪ್ಯಾಂಟ್ ಮಡಚಿಕೊಂಡು, ಮೂಗಿಗೆ ಉಂಗುರ ಹಾಕಿಕೊಂಡು, ಬಾಯಲ್ಲಿ ಬೀಡಿ, ಕಾಲಲ್ಲಿ ಚಪ್ಪಲಿ.. ಥೇಟ್ ಹಳ್ಳಿ ಗಮಾರನಂತೆ ಕಾಣಿಸಿಗ್ತಾರೆ ನಾಯಕನಟ. ಅಂದಹಾಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿಯ ಚಿಕರಿ ಹಾಡಿಗೆ ಇಡೀ ದುನಿಯಾ ಬೆರಗಾಗಿದೆ.
ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಹಾಗೂ ಬುಚ್ಚಿಬಾಬು ನಿರ್ದೇಶನದ ಪೆದ್ದಿ ಚಿತ್ರದ ಈ ಚಿಕರಿ ಹಾಡಿನಲ್ಲಿ ಹುಕ್ ಸ್ಟೆಪ್ ಸಖತ್ ಮಜಬೂತಾಗಿದ್ದು, ಬಾಲಾಜಿ ಸಾಹಿತ್ಯ ಪಕ್ಕಾ ನಾಟಿ ಸ್ಟೈಲ್‌ನಲ್ಲಿದೆ. ಅಂದಹಾಗೆ ಕನ್ನಡದಲ್ಲಿ ಕೂಡ ಮಜಾ ಕೊಡ್ತಿರೋ ಚಿಕಿರಿ ಚಿಕಿರಿ ಸಾಂಗ್‌ಗೆ ಚಿಕ್ಕಬಳ್ಳಾಪುರದ ವರದರಾಜು ಸಾಹಿತ್ಯ ರಚಿಸಿದ್ದು, ಸಂಜೀತ್ ಹೆಗ್ಡೆ ಕಂಠದಲ್ಲಿ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ಇನ್ನು ನಾಯಕನಟಿ ಜಾಹ್ನವಿಯನ್ನ ದೇವರ ಚಿತ್ರಕ್ಕಿಂತ ಬ್ಯೂಟಿಫುಲ್ ಆಗಿ ತೋರಿಸಲಾಗಿದ್ದು, ಎಲ್ಲೆಡೆ ಚಿಕಿರಿ ಅಂತ ಗುನುಗುವಂತಾಗಿದೆ.
ಎ.ಆರ್. ರೆಹಮಾನ್ ಟ್ಯೂನ್.. ಜಾನಿ ಮಾಸ್ಟರ್ ಸ್ಟೆಪ್ಸ್..!!
ಜಾಹ್ನವಿ ಗ್ಲಾಮರ್ ರಂಗು.. ಚಿರು ತನಯನ ಡ್ಯಾನ್ಸ್ ಗುಂಗು
ನಮ್ಮ ಶಿವರಾಜ್‌ಕುಮಾರ್ ಕೂಡ ಈ ಪೆದ್ದಿ ಚಿತ್ರದಲ್ಲೊಂದು ಪ್ರಧಾನ ಪಾತ್ರ ಪೋಷಿಸಿದ್ದು, ಮುಂದಿನ ವರ್ಷ ಮಾರ್ಚ್ 27ಕ್ಕೆ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ ಸಿನಿಮಾ.





