ತಮಿಳುನಾಡು ಪಾಲಿಟಿಕ್ಸ್‌ನ ಗೇಮ್ ಚೇಂಜರ್ ಆಗಿ ಸಿಎಂ ಪಟ್ಟಕ್ಕೇರಿದ ಟಿವಿಕೆ ಪಕ್ಷದ ದಳಪತಿ ವಿಜಯ್ ಗೆಲುವು ಎಂಥವ್ರಿಗೂ ಅಸೂಯೆ ತರಿಸುತ್ತೆ. ಈ ಬಗ್ಗೆ ಡಿಸಿಎಂ ಪವನ್ ಕಲ್ಯಾಣ್ ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ್ದು, ಸದ್ಯ ಆ ಹೇಳಿಕೆ ನ್ಯಾಷನಲ್ ಲೆವೆಲ್‌ನಲ್ಲಿ ಸುದ್ದಿ ಆಗ್ತಿದೆ. ಅಂಥದ್ದೇನು ಹೇಳಿದ್ರು ಅವರು ಅಂತೀರಾ..? ಈ ಸ್ಟೋರಿ ನೋಡಿ.
ದಳಪತಿ ವಿಜಯ್..ಎರಡೇ ವರ್ಷದಲ್ಲಿ ಟಿವಿಕೆ ಅನ್ನೋ ಹೊಸ ಪಕ್ಷ ಕಟ್ಟಿ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸುಮಾರು 108 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಸಿನಿಮೀಯ ಸ್ಟೈಲ್‌ನಲ್ಲಿ ಸಿಎಂ ಪದವಿಗೆ ಏರಿದ್ರು. ಇದು ನಿಜಕ್ಕೂ ಸಾರ್ವಕಾಲಿಕ ದಾಖಲೆಯೇ ಸರಿ. ವಿಜಯ್ ಸಿಎಂ ಆದ ಪರಿ ಎಂಥವ್ರಿಗೂ ಅಸೂಯೆ ತರಿಸುತ್ತೆ. ಅಂಥದ್ದು, ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ತರಿಸುವುದಿಲ್ಲವೇ..? ಅಫ್ ಕೋರ್ಸ್ ಅವರೇ ಹೇಳಿದಂತೆ ಕಟೌಟ್‌ಗಳನ್ನ ಇಟ್ಕೊಂಡೇ ಸಿಎಂ ಆಗಿಬಿಟ್ಟಿದ್ದಾರೆ ವಿಜಯ್.

ಸಿಎಂ ವಿಜಯ್ ಗೆಲುವು ನನಗೆ ಅಸೂಯೆ ತರಿಸಿದೆ
ರಾಜಮುಂಡ್ರಿಯಲ್ಲಿ ಆಂಧ್ರ ಡಿಸಿಎಂ ಓಪನ್ ಟಾಕ್

ರಾಜಮುಂಡ್ರಿಯಲ್ಲಿ ನಡೆದ ಜನಸೇನಾ ಕಾರ್ಯಕರ್ತರ ಸಭೆಯಲ್ಲಿ ಆಂಧ್ರ ಪ್ರದೇಶ್ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈ ಮಾತನ್ನ ಓಪನ್ ಆಗಿಯೇ ಹೇಳಿದ್ದಾರೆ. ನಾನು ತಮಿಳುನಾಡು ಪಾಲಿಟಿಕ್ಸ್ ನೋಡ್ತಿದ್ದೆ. ಅವರೆಷ್ಟು ಸುಖವಾಗಿ ರಾಜಕೀಯ ಮಾಡಿದ್ರು ಅನಿಸುತ್ತೆ. ನನಗೆ ಅಸೂಯೆ ತರಿಸುವಷ್ಟು ಸುಲಭವಾಗಿ ರಾಜಕಾರಣ ಮಾಡಿದ್ದಾರೆ. ಕಟೌಟ್‌ಗಳನ್ನ ಇಟ್ಕೊಂಡೇ ಗೆದ್ದು ಬಿಟ್ಟಿದ್ದಾರೆ. ಅದ್ಭುತವಾಗಿ ಸಿಎಂ ಆಗೋದ್ರು. ಒಂದೂವರೆ ದಶಕದಿಂದ ರಸ್ತೆಗಳಲ್ಲೇ ಒದ್ದಾಡ್ತಿದ್ದೀನಿ ನಾನು ಎಂದಿದ್ದಾರೆ. ಆದ್ರೆ ಬದಲಾವಣೆ ತರಬೇಕು ಅನ್ನೋ ಹುಚ್ಚು ನನ್ನದು. ಅದೇ ನನಗೆ ಬಹಳಷ್ಟು ಧೈರ್ಯ ನೀಡಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, 2019ರಲ್ಲಿ ರಾಜಮುಂಡ್ರಿಯಲ್ಲಿ ಜನ ರಸ್ತೆಗಳಲ್ಲಿ ಓಡಾಡೋಕೆ ಭಯ ಪಡ್ತಿದ್ರು. ಮಾನ್ಯ ಮುಖ್ಯಮಂತ್ರಿಗಳನ್ನ ಅಂದು ಸೆರೆಮನೆ ಸೇರುವಂತೆ ಮಾಡಿದ್ರು. ಈಗ ಪರಿಸ್ಥಿತಿಗಳು ಹಾಗೆ ಇಲ್ಲ. ಯಾಕಂದ್ರೆ ಆಗ ಚಂದ್ರಬಾಬು ನಾಯ್ಡು ಜೊತೆ ನಿಂತಿದ್ದೇ ನಮ್ಮ ಜನಸೇನಾ. ನನಗೆ ಅಧಿಕಾರದ ಆಸೆ, ಆಕಾಂಕ್ಷೆಗಳಿಲ್ಲ. ಯಾಕಂದ್ರೆ ನಾನು ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರ ಕುರುತು ಓದಿಕೊಂಡು ಬೆಳೆದವನು. ಅವರೆಲ್ಲಾ ಪದವಿಗಾಗಿ ಬದುಕಿದವರು ಅಲ್ಲವೇ ಅಲ್ಲ ಎಂದಿದ್ದಾರೆ.





