ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ರ OG, ಸದ್ಯ ಬಿಗ್ಗೆಸ್ಟ್ ಹಿಟ್ ಆಗಿದೆ. ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ಇದ್ದಾಗಲೇ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ ಸೆನ್ಸೇಷನಲ್ ಸ್ಟಾರ್ ಪವನ್. ಚಿಕ್ಕಬಳ್ಳಾಪುರದ ಚಿಂತಾಮಣಿಗೆ ಪವರ್ ಸ್ಟಾರ್ ಎಂಟ್ರಿ ಕೊಟ್ಟಿದ್ದು ಯಾಕೆ..? ಅವರು ತೋರಿದ ಕನ್ನಡಾಭಿಮಾನ ಎಂಥದ್ದು ಅನ್ನೋದನ್ನ ಈ ಸ್ಟೋರಿ ಮೂಲಕ ನೋಡಿ.
ಪವರ್ ಸ್ಟಾರ್ ಪವನ್ ಕಲ್ಯಾಣ್.. ಪವರ್ ಪಾಲಿಟಿಕ್ಸ್‌ಗೂ ಜೈ, ಹೀರೋ ಖದರ್ ತೋರೋಕೂ ಸೈ. ಈಗಾಗ್ಲೇ ಆಂಧ್ರ ಪಾಲಿಟಿಕ್ಸ್‌ನ ಗೇಮ್ ಚೇಂಜರ್ ಆಗಿ ಮಿಂಚು ಹರಿಸಿ, ಡಿಸಿಎಂ ಆಗಿ ಕಮಾಲ್ ಮಾಡ್ತಿದ್ದಾರೆ. ಒಂದ್ಕಡೆ ಡೆಪ್ಯೂಟಿ ಸಿಎಂ, ಮತ್ತೊಂದ್ಕಡೆ ಕಮಿಟ್ ಆಗಿರೋ ಸಿನಿಮಾಗಳ ರಿಲೀಸ್. ಸದ್ಯ ರೀಸೆಂಟ್ ಆಗಿ ರಿಲೀಸ್ ಆಗಿರೋ ಪವನ್‌ರ OG ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದು ಇನ್ನೂ ಥಿಯೇಟರ್‌ನಲ್ಲಿ ಇರುವಂತೆಯೇ ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ ಪವನ್.
ಚಿಂತಾಮಣಿಯಲ್ಲಿ OG ಪವನ್ ಕಲ್ಯಾಣ್.. ಜನವೋ ಜನ..!
ಕನ್ನಡದಲ್ಲೇ ಡಿಸಿಎಂ ಮಾತು.. ವಿಶ್ವೇಶ್ವರಯ್ಯ, ಕುವೆಂಪು ಕಂಪು
ಯೆಸ್.. ಇಂದು ಚಿಕ್ಕಬಳ್ಳಾಪುರದ ಚಿಂತಾಮಣಿಗೆ ಆಗಮಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ರನ್ನ ನೋಡಲು ಲಕ್ಷಾಂತರ ಮಂದಿ ಕಿಕ್ಕಿರಿದು ಸೇರಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಗೋಪಾಲ ಗೌಡರ ಬರ್ತ್ ಡೇ ಹಿನ್ನೆಲೆಯಲ್ಲಿ ಆ ಸಂಭ್ರಮಾಚರಣೆಗೆ ಸಾಕ್ಷಿ ಆದ್ರು ಓಜಿ ಸ್ಟಾರ್. ಹೆಲಿಕಾಪ್ಟರ್‌ನಲ್ಲಿ ಚಿಂತಾಮಣಿಗೆ ಆಗಮಿಸಿದ ಪವರ್ ಸ್ಟಾರ್‌ನ ಕಂಡು ಜನ ಹುಚ್ಚೆದ್ದು ಕುಣಿದರು. ಅದೊಂದು ಬರ್ತ್ ಡೇ ಸಂಭ್ರಮಾಚರಣೆಯಂತಿರದೆ, ಬಹುದೊಡ್ಡ ಸಮಾವೇಶದಂತೆ ರಂಗೇರಿತು.
ಕೇಕ್ ಕಟ್ ಮಾಡಿದ ಬಳಿಕ, ಗೋಪಾಲ ಗೌಡರಿಗೆ ಕೇಕ್ ತಿನ್ನಿಸಿ ಶುಭಾಶಯ ಕೋರಿದ್ರು ಡಿಸಿಎಂ ಪವನ್ ಕಲ್ಯಾಣ್. ಇನ್ನು ಮಾಜಿ ಡೆಪ್ಯೂಟಿ ಸ್ಪೀಕರ್ ಜೆ.ಕೆ. ಕೃಷ್ಣಾರೆಡ್ಡಿ ಮಾತಾಡ್ತಾ, ಬರ್ತ್ ಡೇ ಒಂದು ನೆಪ ಅಷ್ಟೇ. ಕರ್ನಾಟಕದ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಕೃಷ್ಣಾ ನದಿ ಹರಿಸಲು ಈ ಮೂಲಕ ನಾವು ಆಂಧ್ರ ಡಿಸಿಎಂಗೆ ಮನವಿ ಮಾಡ್ತಿದ್ದೇವೆ ಎಂದರು. ಅತ್ತ ಪವನ್ ಕಲ್ಯಾಣ್ ಸ್ವಚ್ಚ ಕನ್ನಡದಲ್ಲಿ ಭಾಷಣ ಆರಂಭಿಸಿ ಎಲ್ಲರನ್ನ ಚಕಿತಗೊಳಿಸಿದರು.
ಕರ್ನಾಟಕ ಗಡಿ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಮನವಿ
ಪವನ್ ಪವರ್ ಖದರ್‌ಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು..!
ಇದೇ ವೇಳೆ ಸಾಹಿತ್ಯ ಲೋಕದ ದಂತಕಥೆ ಕುವೆಂಪು ಹಾಗೂ ಚಿಕ್ಕಬಳ್ಳಾಪುರ ಮೂಲದವರಾದ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರನ್ನ ಕೂಡ ನೆನೆದರು ಓಜಿ ಸ್ಟಾರ್ ಪವನ್ ಕಲ್ಯಾಣ್.
ಆಂಧ್ರಕ್ಕೆ ಅಂಟಿಕೊಂಡಿರೋ ಗಡಿ ಜಿಲ್ಲೆಗಳಲ್ಲಿ ಪವನ್‌ರನ್ನ ಕನ್ನಡಿಗರು ಕೂಡ ತಮ್ಮ ಹೀರೋ ರೀತಿ ಆರಾಧಿಸ್ತಾರೆ, ಗೌರವಿಸ್ತಾರೆ ಹಾಗೂ ಪ್ರೀತಿಸ್ತಾರೆ. ಇನ್ನು ಕೃಷ್ಣಾರೆಡ್ಡಿ ಮನವಿಯಂತೆ ಮುಂದಿನ ದಿನಗಳಲ್ಲಿ ಆಂಧ್ರದಲ್ಲಿ ಹರಿಯುವ ಕೃಷ್ಣಾ ನದಿಯ ನೀರನ್ನು ನಮ್ಮ ಕರ್ನಾಟಕದ ಗಡಿ ಜಿಲ್ಲೆಗಳಿಗೆ ಹರಿಸಲು ಪವನ್ ಕಲ್ಯಾಣ್ ಮಹತ್ವದ ನಿರ್ಧಾರ ಕೈಗೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.