ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜೈಲು ಪಾಲಾಗಿರೋ ನಟಿ ಪವಿತ್ರಾ ಗೌಡ ಬೇಲ್ ಕನಸು ಭಗ್ನವಾಗಿದೆ. ಪಂಜರದಿಂದ ಹೊರಬಂದು ಸ್ವತಂತ್ರವಾಗಿ ಹಾರೋಕೆ ತುದಿಗಾಲಲ್ಲಿ ನಿಂತಿದ್ದ ಪವಿತ್ರಾಗೆ ಕೋರ್ಟ್ ಬಿಗ್ ಶಾಕ್ ನೀಡಿದೆ.
ಒಂದು ಮರ್ಡರ್.. ಅದೆಷ್ಟು ಮಂದಿ ಫ್ಯಾಮಿಲಿಗಳನ್ನ ಹಾಗೂ ಅವ್ರ ಕುಟುಂಬಸ್ಥರನ್ನ ಡಿಸ್ಟರ್ಬ್ ಮಾಡುತ್ತೆ ಅಲ್ವಾ..? ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಆ ಇಡೀ ಕೇಸ್‌ನಲ್ಲಿ ಭಾಗಿಯಾಗಿರೋ ಆರೋಪಿಗಳು, ಅವರ ಫ್ಯಾಮಿಲಿ ಮೆಂಬರ್ಸ್ ಹೀಗೆ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ದರ್ಶನ್ ಏನೋ ಇದ್ರೆ ನೆಮ್ದಿಯಾಗ್ ಇರ್ಬೇಕ್ ಅಂತ ಹಾಡು ಮಾಡಿದ್ರು. ಆದ್ರೆ ಎಷ್ಟರ ಮಟ್ಟಿಗೆ ನೆಮ್ಮದಿ ಸಿಕ್ಕಿದೆ ಅನ್ನೋದೇ ಯಕ್ಷ ಪ್ರಶ್ನೆ.

ಪವಿತ್ರಾ ಬೇಲ್ ಕನಸು ಭಗ್ನ.. ಪಂಜರ ಪಕ್ಷಿ ಸುಬ್ಬಿಗೆ ಶಾಕ್
ಪರಪ್ಪನ ಅಗ್ರಹಾರದಲ್ಲಿ ಸುಬ್ಬ ದರ್ಶನ್ ಫುಲ್ ಸೈಲೆಂಟ್..!
A1 ಆರೋಪಿ ಪವಿತ್ರಾ ಗೌಡ, A2 ಆರೋಪಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಒಂದಷ್ಟು ಮಂದಿ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಮತ್ತಷ್ಟು ಮಂದಿಗೆ ಬೇಲ್ ಸಿಕ್ಕಿದೆ ಆದ್ರೂ, ಎಳ್ಳಷ್ಟು ನೆಮ್ಮದಿ ಇಲ್ಲದೆ, ಯಾವಾಗ ಬೇಲ್ ಕ್ಯಾನ್ಸಲ್ ಆಗುತ್ತೋ ಅನ್ನೋ ಭಯದಲ್ಲಿ ಬದುಕುವಂತಾಗಿದೆ. ಆದ್ರೆ ಸುಬ್ಬ-ಸುಬ್ಬಿ ಅಂತ ಫೇಮಸ್ ಆಗಿರೋ ದರ್ಶನ್-ಪವಿತ್ರಾ ಲವ್ ಸ್ಟೋರಿಗೆ ಬಹುತೇಕ ಫುಲ್‌ಸ್ಟಾಪ್ ಬಿದ್ದಿದೆ. ದರ್ಶನ್ ಅಂತೂ ಹಣೆಬರಹ ಇದ್ದಂತೆ ಆಗಲಿ ಅಂತ ಫುಲ್ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಇತ್ತ ಪವಿತ್ರಾ ಗೌಡ ಮಗಳ ಬೋರ್ಡಿಂಗ್ ಎಕ್ಸಾಂ ನೆಪದಲ್ಲಿ 20 ದಿನ ಮಧ್ಯಂತರ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಆದ್ರೆ ಸೆಷನ್ಸ್ ಕೋರ್ಟ್ ನಲ್ಲಿ ಸುಬ್ಬಿಯ ಆ ಜಾಮೀನು ಅರ್ಜಿ ವಜಾ ಆಗಿತ್ತು. ನಂತ್ರ ಆಕೆ ಹೈ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ರು. ಆದ್ರೆ ಹೈ ಕೋರ್ಟ್‌ನಲ್ಲಿ ಹಿಯರಿಂಗ್ ಬರೋ ವೇಳೆಗೆ ಪವಿತ್ರಾ ಗೌಡ ಮಗಳ ಎಕ್ಸಾಂ ಮುಗಿದೇ ಹೋಗಿತ್ತು. ಹಾಗಾಗಿ ಹೇಗೋ ಕೋರ್ಟ್ ತನ್ನ ಇಂಟರಿಮ್ ಬೇಲ್‌ನ ಕ್ಯಾನ್ಸಲ್ ಮಾಡುತ್ತೆ ಅನ್ನೋದು ಪವಿತ್ರಾಗೆ ಅರಿವಾಗಿದೆ. ಅದೇ ಕಾರಣಕ್ಕೆ ಕೋರ್ಟ್ ಕ್ಯಾನ್ಸಲ್ ಮಾಡೋಕೆ ಮೊದಲು ತಾವೇ ಆ ಬೇಲ್ ಅರ್ಜಿಯನ್ನ ವಾಪಸ್ ಪಡೆದಿದ್ದಾರೆ.
ಮಗಳ ಎಕ್ಸಾಂ ನೆಪ.. 20 ದಿನ ಬೇಲ್‌ಗೆ ಪವಿತ್ರಾ ಅರ್ಜಿ..!
ಕೋರ್ಟ್ ನೀಡಿದ ಶಾಕ್‌ಗೆ ಬೇಲ್ ಅರ್ಜಿ ಹಿಂಪಡೆದ A1
ದರ್ಶನ್ ಜೊತೆ ಮಾತಾಡಬೇಕು ಅಂತ ಪರಿತಪಿಸುತ್ತಿರೋ ಪವಿತ್ರಾಗೆ ಕೇರ್ ಮಾಡ್ತಿಲ್ಲ ಡಿಬಾಸ್ ದರ್ಶನ್. ಪವಿತ್ರಾ ಇಂದ್ಲೇ ಇದೆಲ್ಲಾ ಆಯ್ತು ಅನ್ನೋ ಕಾರಣಕ್ಕೆ ಎಲ್ಲವೂ ಇದ್ದು, ಏನೂ ಇಲ್ಲದಂತೆ ನಾಲ್ಕು ಗೋಡೆಗಳ ಮಧ್ಯೆ ಪಂಜರದ ಪಕ್ಷಿಯಂತೆ ಜೀವಿಸ್ತಿದ್ದಾರೆ. ಕೋರ್ಟ್ ಟ್ರಯಲ್ಸ್ ಬೇರೆ ನಡೆಯುತ್ತಿದ್ದು, ಆರೋಪಿಗಳು ಹಾಗೂ ಅವ್ರ ಕುಟುಂಬಸ್ಥರ ನಿರೀಕ್ಷೆಯಂತೆ ಬೇಗ ಬೇಗ ಆಗ್ತಿಲ್ಲ. ಆಗುವುದೂ ಇಲ್ಲ. ಯಾಕಂದ್ರೆ ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಂತಹ ಸಾವಿರಾರು ಕೇಸ್‌ಗಳಿವೆ. ಹಾಗಾಗಿ ಎಲ್ಲಾ ಕಾನೂನು ಪ್ರಕ್ರಿಯೆಗಳು ಸಮಯಕ್ಕೆ ತಕ್ಕಂತೆಯೇ ನಡೆಯಲಿವೆ. ಇದನ್ನೆಲ್ಲಾ ನೋಡಿದ್ರೆ ಪಾಪ ಪವಿತ್ರಾ ಗೌಡ ಅಂತ ಅನಿಸದೇ ಇರದು. ಆದ್ರೆ ಕಾನೂನಿನ ಮುಂದೆ ಎಲ್ಲರೂ ಒಂದೇ ಅನ್ನೋದಕ್ಕೆ ಈ ಪ್ರಕರಣ ಜ್ವಲಂತ ಸಾಕ್ಷಿ ಆಗ್ತಿದೆ.





