ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇಗೆ ಕೌಂಟ್‌ಡೌನ್ ಶುರುವಾಗಿದೆ. ನಾಳೆ 11 ಗಂಟೆಗೆ ಅಟ್ಲೀ ಜೊತೆಗಿನ ಸಿನಿಮಾದ ಟೈಟಲ್ ರಿವೀಲ್ ಆಗಲಿದ್ದು, ಅದಕ್ಕೂ ಮುನ್ನ ಫಸ್ಟ್‌ಲುಕ್ ರಿಲೀಸ್ ಆಗಿದೆ. ಸೈನ್ಸ್ ಫಿಕ್ಷನ್ ಮೂವಿಯ ಏಲಿಯನ್ ಕೈ ಮಾತ್ರ ನೋಡುಗರ ಹುಬ್ಬೇರಿಸುವಂತಿದೆ.
ಪುಷ್ಪ ಚಿತ್ರದ ಮೂಲಕ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬಡ್ತಿ ಪಡೆದ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ಪುಷ್ಪ-2 ಮೂಲಕ 1800 ಕೋಟಿ ಬ್ಯುಸಿನೆಸ್ ಕೊಟ್ಟರು. ಅದ್ರಿಂದ ಇಡೀ ಸಿನಿದುನಿಯಾದ ಹುಬ್ಬೇರಿಸೋ ಮೂಲಕ, ಸೆನ್ಸೇಷನಲ್ ಸ್ಟಾರ್ ಡೈರೆಕ್ಟರ್‌ಗಳೆಲ್ಲಾ ಅಲ್ಲುಗೆ ಸಿನಿಮಾ ಮಾಡೋಕೆ ಕ್ಯೂ ನಿಲ್ಲುವಂತಾಯ್ತು. ಆದ್ರೆ ಅಲ್ಲು ಡೇಟ್ಸ್ ಮಾತ್ರ ಜವಾನ್ ಡೈರೆಕ್ಟರ್ ಅಟ್ಲೀಗೆ ನೀಡಿದ್ರು. AA22xA6 ಮೂವಿ ಅಫಿಶಿಯಲಿ ಸೆಟ್ಟೇರಿತ್ತು ಕೂಡ. ಪ್ರತಿಷ್ಠಿತ ಸನ್ ಪಿಕ್ಚರ್ಸ್ ಬ್ಯಾನರ್ ಈ ಚಿತ್ರಕ್ಕೆ ಸುಮಾರು 800 ಕೋಟಿ ಬಜೆಟ್ ಹಾಕಿದ್ದು, ಇದೀಗ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ಸ್‌ನಲ್ಲಿ ಬ್ಯುಸಿ ಆಗಿದೆ ಟೀಂ.
‘ಮ್ಯಾಡ್ ಮ್ಯಾಕ್ಸ್ ಸ್ಟೈಲ್’ ಅವತಾರದಲ್ಲಿ ಅಲ್ಲು ಸರ್‌ಪ್ರೈಸ್
ಸೈನ್ಸ್ ಫಿಕ್ಷನ್ ಮೂವಿಯಲ್ಲಿ ಕಿಕ್ ಕೊಡ್ತಿದೆ ಏಲಿಯನ್ ಕೈ..!
ನಾಳೆ ಅಂದ್ರೆ ಏಪ್ರಿಲ್ 8ಕ್ಕೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇ. ಸೆಲೆಬ್ರೇಷನ್‌ಗೆ ಕ್ಷಣಗಣನೆ ಶುರುವಾಗಿದ್ದು, ಬೆಳಗ್ಗೆ 11 ಗಂಟೆಗೆ ಈ ಅಟ್ಲೀ-ಅಲ್ಲು ಕಾಂಬೋ ಚಿತ್ರದ ಟೈಟಲ್ ಹಾಗೂ ಟೀಸರ್ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ಆದ್ರೆ ಅದಕ್ಕೂ ಮುನ್ನ ಇಂದು ಈ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ರಿವೀಲ್ ಆಗಿದೆ. ವೈಲ್ಡ್ ಅನಿಮಲ್ ಅಥ್ವಾ ಏಲಿಯನ್ ಕೈ ನಂತಿರೋ ಈ ಫಸ್ಟ್‌ಲುಕ್ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.
ಮೊದಲೇ ಹೇಳಿದಂತೆ ಇದೊಂದು ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಜಾನರ್ ಮೂವಿ. ಹಾಲಿವುಡ್‌ನ ಸ್ಟುಡಿಯೋಗಳಲ್ಲಿ ಇದರ ವಿಎಫ್‌ಎಕ್ಸ್ ಹಾಗೂ ಗ್ರಾಫಿಕಲ್ ಕೆಲಸಗಳು ಸಾಗ್ತಿವೆ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್ ಹಾಗೂ ಜಾಹ್ನವಿ ಕಪೂರ್ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇಲ್ಲಿ ಅಲ್ಲು ಒಂದಲ್ಲ ಎರಡಲ್ಲ ಮೂರು ಜನರೇಷನ್ ಕ್ಯಾರೆಕ್ಟರ್‌ಗಳನ್ನ ಅವ್ರೇ ನಿಭಾಯಿಸಿದ್ದಾರಂತೆ. ತಾತ, ತಂದೆ ಹಾಗೂ ಇಬ್ಬರು ಮಕ್ಕಳ ರೋಲ್‌ಗಳಲ್ಲಿ ಅವರೇ ಬಣ್ಣ ಹಚ್ಚಿದ್ದು, ನಾಲ್ಕು ಪಾತ್ರಗಳಲ್ಲಿ ಕನ್ಫ್ಯೂಸ್ ಮಾಡಲಿದ್ದಾರೆ
ಪುಷ್ಪ ಸ್ಟಾರ್‌ಗೆ ಅಟ್ಲೀ ಆ್ಯಕ್ಷನ್ ಕಟ್.. ಹಾಲಿವುಡ್ ಶೈಲಿ ಚಿತ್ರ
ಅಲ್ಲು ಅರ್ಜುನ್ ಬರ್ತ್ ಡೇಗೆ ಟೈಟಲ್ ಜೊತೆ ಗ್ಲಿಂಪ್ಸ್ ಗಿಫ್ಟ್
ಶಂಕರ್ ನಿರ್ದೇಶನದ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ರೋಬೋ 2.O ಸಿನಿಮಾದಲ್ಲಿ ಖಳನಾಯಕ ಅಕ್ಷಯ್ ಕುಮಾರ್ ಲುಕ್ಸ್ ತುಂಬಾ ಭಯಾನಕವಾಗಿತ್ತು. ಸದ್ಯ ಈ ಅಲ್ಲು-ಅಟ್ಲೀ ಮೂವಿಯಲ್ಲೂ ಅಂಥದ್ದೇ ಡಿಫರೆಂಟ್ ಲುಕ್ಸ್‌ನ ಟ್ರೈ ಮಾಡಿದ್ದಾರೆ ಅನಿಸ್ತಿದೆ. ನೋಡುಗರನ್ನ ಒಂದು ಹೊಸ ಪ್ರಪಂಚಕ್ಕೆ ಕರೆದೊಯ್ಯುವ ಮುನ್ಸೂಚನೆ ಅಂತೂ ಇದ್ರಿಂದ ಸಿಕ್ಕಾಗಿದೆ. ಸೋ.. ಎಲ್ಲರ ಚಿತ್ತ ನಾಳೆ ಬಿಡುಗಡೆ ಆಗುವ ಫಸ್ಟ್‌ಲುಕ್‌ನತ್ತ ನೆಟ್ಟಿದೆ.





