ಹರಿಹರ ವೀರಮಲ್ಲು ಫ್ಲಾಪ್ ಆಯ್ತು ಅಂತ ಆಡಿಕೊಂಡಿದ್ದವ್ರಿಗೆ ಗೇಮ್ ಚೇಂಜರ್ ಪವನ್ ಕಲ್ಯಾಣ್, ಓಜಿ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಬಾಕ್ಸ್ ಆಫೀಸ್ ಸುನಾಮಿ ಆಗಿರೋ ಓಜಸ್ ಗಂಭೀರ ಒಂದೇ ದಿನದಲ್ಲಿ ಬರೋಬ್ಬರಿ 154 ಕೋಟಿ ಲೂಟಿ ಮಾಡಿದೆ. ಇಷ್ಟಕ್ಕೂ ಹೇಗಿದೆ ಪವರ್ ಸ್ಟಾರ್ ಕ್ರೇಜ್..? ಡಿಸಿಎಂ ಆದ್ರೂ ಕುಗ್ಗದ ಪವನ್ ಖದರ್ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದಿದೆ ನೋಡಿ
ದೆ ಕಾಲ್ ಹಿಮ್ ಓಜಿ.. ನಿನ್ನೆಯಷ್ಟೇ ವರ್ಲ್ಡ್‌ವೈಡ್ ರಿಲೀಸ್ ಆಗಿರೋ ಪಕ್ಕದ ಟಾಲಿವುಡ್ ಸಿನಿಮಾ. ಪವರ್ ಸ್ಟಾರ್ ಪವನ್ ಕಲ್ಯಾಣ್ ಲೀಡ್‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ ಕೂಡ ಖಡಕ್ ಖಳನಾಯಕನಾಗಿ ಧೂಳೆಬ್ಬಿಸಿದ್ದಾರೆ. ಅಂದಹಾಗೆ ಈ ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು, ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಮೊದಲ ದಿನವೇ ಬರೋಬ್ಬರಿ 154 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿ ನ್ಯೂ ರೆಕಾರ್ಡ್ ಬರೆದಿದೆ.
ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!
ಒಂದೇ ದಿನದಲ್ಲಿ ದಾಖಲೆ 154ಕೋಟಿ ರೂಪಾಯಿ ಲೂಟಿ
ಯೆಸ್.. ಗ್ಯಾಂಗ್‌ಸ್ಟರ್ ಆ್ಯಕ್ಷನ್ ಕ್ರೈಂ ಜಾನರ್ ಸಿನಿಮಾ ಇದಾಗಿದ್ದು, ಇಲ್ಲಿ ರಕ್ತದೋಕುಳಿ ಜೋರಿದೆ. ವಿಂಟೇಜ್ ಪವನ್ ಕಲ್ಯಾಣ್ ಕಾಣಸಿಗಲಿದ್ದು, ತಲ್ವಾರ್ ಹಿಡಿದು ಹಲ್‌ಚಲ್ ಎಬ್ಬಿಸಿದ್ದಾರೆ ಪವನ್. ಬಹುಶಃ ಪವನ್ ಫ್ಯಾನ್ಸ್ ತಮ್ಮ ನೆಚ್ಚಿನ ನಾಯಕನಟನನ್ನ ಈ ರೀತಿಯ ಪಾತ್ರಗಳಲ್ಲಿ ನೋಡೋಕೆ ಇಷ್ಟ ಪಡ್ತಾರೆ ಅನಿಸುತ್ತೆ. ಅದೇ ಕಾರಣದಿಂದ ಎಲ್ಲೆಡೆ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಫ್ಯಾನ್ಸ್ ಜೊತೆ ಪ್ರೇಕ್ಷಕರು ಕೂಡ ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಕೆಲವೆಡೆ ಥೇಟ್ ಪವನ್ ರೀತಿ ಲಾಂಗ್, ತಲ್ವಾರ್‌ಗಳನ್ನ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಅದ್ರಿಂದ ಸಿನಿಮಾ ಸ್ಕ್ರೀನ್ ಪರದೆ ಹರಿದು ಹೈರಾಣ ಕೂಡ ಆಗಿದೆ. ಅಷ್ಟರ ಮಟ್ಟಿಗೆ ಕ್ರೇಜ್ ಜೊತೆ ಫಜೀತಿಗೆ ಈ ಸಿನಿಮಾ ನಾಂದಿ ಹಾಡಿದೆ. ಅಂದಹಾಗೆ ಈ ಹಿಂದಿನ ಹರಿಹರ ವೀರಮಲ್ಲು ಸಿನಿಮಾದ ಸೋಲಿನಿಂದ ಕಂಗೆಟ್ಟಿದ್ದ ಪವನ್ ಈ ಓಜಸ್ ಗಂಭೀರ ಪಾತ್ರದಿಂದ ಆಡಿಕೊಳ್ಳೋರ ಬಾಯಿ ಮುಚ್ಚಿಸಿದ್ದಾರೆ. ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗೋ ಮೂಲಕ ಪವನ್ ಮತ್ತೊಮ್ಮೆ ಕ್ರೇಜ್ ಕಾ ಬಾಪ್ ಅನ್ನೋದು ಪ್ರೂವ್ ಆಗಿದೆ.
ಗ್ಯಾಂಗ್‌ಸ್ಟರ್ ಖದರ್ ತೋರಿದ ಪವರ್ ಸ್ಟಾರ್ ಪವನ್..!
ಮೋಸ್ಟ್ ವಯಲೆನ್ಸ್.. ಮೋರ್ ಬಾಕ್ಸ್ ಆಫೀಸ್ ಕಲೆಕ್ಷನ್
ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡಿದ ಬಳಿಕ ಸುಮಾರು 6 ವರ್ಷಗಳ ಗ್ಯಾಪ್ ತೆಗೆದುಕೊಂಡ ಡೈರೆಕ್ಟರ್ ಸುಜೀತ್, ಈ ಬಾರಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಕತ್ತಿಗಳು, ಗನ್‌ಗಳ ಮೊರೆತದಿಂದ ಗಲ್ಲಾ ಪೆಟ್ಟಿಗೆಗೆ ತುಫಾನ್ ತಂದಿದ್ದಾರೆ. ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದ್ದು, ಪರಭಾಷಿಗರು ಕೂಡ ಸಿನಿಮಾ ನೋಡಿ ವ್ಹಾವ್ ಅಂತಿದ್ದಾರೆ. ಆದ್ರೆ ಸಿನಿಮಾದುದ್ದಕ್ಕೂ ರಕ್ತಪಾತಗಳೇ ಹೆಚ್ಚಾಗಿದ್ದು, ಎಮೋಷನ್ಸ್‌ನ ಇನ್ನಷ್ಟು ಬ್ಲೆಂಡ್ ಮಾಡಿದ್ದಿದ್ರೆ ಸಿನಿಮಾ ಮತ್ತಷ್ಟು ವೇಗ ಪಡೆದುಕೊಳ್ತಿತ್ತು ಸಿನಿಮಾ ಎನ್ನಲಾಗ್ತಿದೆ. ಆದ್ರೆ ವಯಲೆನ್ಸ್ ಇದ್ದಷ್ಟೂ ಜನ ಮುಗಿಬಿದ್ದು ನೋಡ್ತಾರೆ ಅನ್ನೋದಕ್ಕೆ ಈ ಸಿನಿಮಾ ಮತ್ತೊಮ್ಮೆ ಜ್ವಲಂತ ಸಾಕ್ಷಿಯಾಗಿದೆ.
ಅಂದಹಾಗೆ ಮೊದಲ ದಿನವೇ ಈ ಓಜಿ ಸಿನಿಮಾ, ವರ್ಲ್ಡ್‌ವೈಡ್ ಬರೋಬ್ಬರಿ 154 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮುಖೇನ ನೂತನ ದಾಖಲೆ ಕೂಡ ಬರೆದಿದೆ. ಇದು ಪವನ್ ಕಲ್ಯಾಣ್ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಡೇ ಕಲೆಕ್ಷನ್ ಎನ್ನಲಾಗ್ತಿದೆ. ಇದು ಹೀಗೆಯೇ ಮುಂದುವರೆದರೆ ಬಹುಬೇಗ 1000 ಕೋಟಿ ಕ್ಲಬ್ ಸೇರಲಿದೆ. ಆಂಧ್ರ ಡಿಸಿಎಂ ಆಗಿದ್ದುಕೊಂಡು ಪವನ್ ಆನ್ ಸ್ಕ್ರೀನ್ ಹಾಗೂ ರಿಯಲ್ ಲೈಫ್‌ನಲ್ಲಿ ಹೀಗೆ ಹೀರೋ ಆಗಿ ಮಿಂಚ್ತಿರೋದು ಅವ್ರ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ.
