ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ನಿರ್ಮಾಪಕರ ಸಮೃದ್ಧಿ ಮಂಜುನಾಥ್ ಕನ್ನಡಾಭಿಮಾನ

ಅಂದು ಬೃಂದಾವಿಹಾರಿ ಬೆಂಬಲ..ಇಂದು ಪ್ರೇಮದ ಊರಲಿ ಸಾಥ್

Untitled design 2026 11 15T182317.240

“ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಒಗ್ಗಟ್ಟಿನ ಮಂತ್ರ ಮತ್ತು ಸಂಭ್ರಮದ ಅಲೆ ಜೋರಾಗಿದೆ. ಬೃಂದಾವಿಹಾರಿಯಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದ ಅನ್ನದಾತ ಮಂಜುನಾಥ್.  ಇಷ್ಟೇ ಅಲ್ಲ, ಅಂದು ‘ಪ್ರೇಮದ ಊರಲಿ’ ಸಿನಿಮಾಗೆ ಬೆನ್ನೆಲುಬಾಗಿ ನಿಂತಿದ್ದ ‘ಬೃಂದಾವಿಹಾರಿ’ ತಂಡಕ್ಕೆ ಇಂದು ‘ಪ್ರೇಮದ ಊರಲಿ’ ಟೀಮ್ ಸಾಥ್ ನೀಡುವ ಮೂಲಕ ಸಿನಿರಂಗದಲ್ಲಿ ಹೊಸ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

‘ಬೃಂದಾವಿಹಾರಿ’ ಚಿತ್ರದ ಪ್ರಿ-ಲೀಸ್ ಇವೆಂಟ್‌ನಲ್ಲಿ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅವರ ಎನರ್ಜಿ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ವರನಟ ಡಾ. ರಾಜ್‌ಕುಮಾರ್ ಅವರ ಎವರ್‌ಗ್ರೀನ್ ಹಾಗೂ ಕನ್ನಡಿಗರ ಹೆಮ್ಮೆಯ ಗೀತೆ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡಿಗೆ ಮಂಜುನಾಥ್ ಅವರು ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಇಡೀ ವೇದಿಕೆಗೆ ಹೊಸ ಕಳೆ ತಂದರು. ನಿರ್ಮಾಪಕರ ಈ ಸಕ್ಕತ್ ಡ್ಯಾನ್ಸ್ ನೋಡಿ ಸ್ವತಃ ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಚಪ್ಪಾಳೆ ತಟ್ಟಿ ಹುರಿದುಂಬಿಸಿದರೆ, ನೆರೆದಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು

ಇನ್ನು ‘ಬೃಂದಾವಿಹಾರಿ’ ಚಿತ್ರತಂಡಕ್ಕೆ ‘ಪ್ರೇಮದ ಊರಲಿ’ ಸಿನಿಮಾ ತಂಡ ವಿಶೇಷ ಸಾಥ್ ನೀಡುವ ಮೂಲಕ ಸ್ಯಾಂಡಲ್‌ವುಡ್‌ನ ಒಗ್ಗಟ್ಟನ್ನು ಪ್ರದರ್ಶಿಸಿತು. ವಿಶೇಷವೆಂದರೆ, ಅಂದು ಪ್ರೇಮದ ಊರಲಿ ಚಿತ್ರದ ಯಶಸ್ಸಿಗೆ ದಾರಿ ಮಾಡಿಕೊಟ್ಟು ಬೆನ್ನೆಲುಬಾಗಿ ನಿಂತಿದ್ದ ಇದೇ ಬೃಂದಾವಿಹಾರಿ ತಂಡಕ್ಕೆ, ಇಂದು ‘ಪ್ರೇಮದ ಊರಲಿ’ ಟೀಮ್ ಆಗಮಿಸಿ ಶುಭ ಹಾರೈಸಿದ್ದು ಕಾರ್ಯಕ್ರಮದ ಹೈಲೈಟ್ ಆಗಿತ್ತು. ಎರಡೂ ತಂಡಗಳ ಈ ಆತ್ಮೀಯ ಬಾಂಧವ್ಯ ಹಾಗೂ ಪರಸ್ಪರ ಬೆಂಬಲ ಕಂಡು ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದರು.

ಬೃಂದಾವನದ ಪವಿತ್ರ ಹಾಗೂ ರಮ್ಯವಾದ ಹಿನ್ನೆಲೆಯಲ್ಲಿ ಅರಳಿರುವ ‘ಬೃಂದಾವಿಹಾರಿ’ ಚಿತ್ರವು ಕೇವಲ ಒಂದು ಲವ್ ಸ್ಟೋರಿ ಮಾತ್ರವಲ್ಲದೆ, ಭಾವನೆಗಳ ಆಳವಾದ ಪಯಣವಾಗಿದೆ. ನಾಯಕ ಮಾಧವನ ಜೀವನದ ಪ್ರಮುಖ ಪಾತ್ರವಾಗಿರುವ ರಾಧಾ ಅವನಿಂದ ದೂರ ಸರಿದಾಗ ಬದುಕಿನಲ್ಲಿ ಆವರಿಸುವ ಶೂನ್ಯತೆ ಹಾಗೂ ನೋವನ್ನು ಕಥೆಯ ಆರಂಭದಲ್ಲಿ ಅತ್ಯಂತ ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ.

ಶ್ರೀನಿವಾಸ್ ರಾಜು ಅವರ ನಿರ್ದೇಶನ ಶೈಲಿಗೆ ತಕ್ಕಂತೆ ಕ್ಯಾಮೆರಾ ವರ್ಕ್ ಹಾಗೂ ಲೊಕೇಷನ್‌ಗಳು ಸಿನಿಮಾಗೆ ರಿಚ್ ಲುಕ್ ನೀಡಿವೆ. ಪ್ರತಿಯೊಂದು ಫ್ರೇಮ್ ಕೂಡ ಕಾವ್ಯಾತ್ಮಕವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ನೇರವಾಗಿ ಬೃಂದಾವನದ ಸುಂದರ ಲೋಕಕ್ಕೆ ಕರೆದೊಯ್ಯುವಲ್ಲಿ ತಂತ್ರಜ್ಞರು ಯಶಸ್ವಿಯಾಗಿದ್ದಾರೆ.

ಕೌಟುಂಬಿಕ ಮೌಲ್ಯಗಳು, ಕಣ್ಣಂಚಲ್ಲಿ ನೀರು ತರಿಸುವ ಸೆಂಟಿಮೆಂಟ್ ಹಾಗೂ ಮಧುರ ಸಂಗೀತದ ಸಮ್ಮಿಲನವಾಗಿರುವ ‘ಬೃಂದಾವಿಹಾರಿ’ ಸಿನಿಮಾವು ಪ್ರತಿಯೊಬ್ಬ ಕನ್ನಡಿಗರು ಕುಟುಂಬ ಸಮೇತ ಥಿಯೇಟರ್‌ನಲ್ಲಿ ನೋಡಲೇಬೇಕಾದ ಸುಂದರ ದೃಶ್ಯಕಾವ್ಯವಾಗಿದೆ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version