ಚಿತ್ರರಂಗದಲ್ಲಿ ನಟಿಯರ ಸೇಫ್ಟಿ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲ್ಲ. ಹೀಗೊಂದು ಅಲೆ ಸದ್ಯ ಪಕ್ಕದ ತೆಲುಗು ಚಿತ್ರರಂಗದಲ್ಲಿ ಭುಗಿಲೆದ್ದಿದೆ. ಅದಕ್ಕೆ ಕಾರಣವಾಗಿರೋದು ಬಾಹುಬಲಿ ಪ್ರಭಾಸ್‌ರ ರಾಜಾಸಾಬ್ ಚಿತ್ರದ ಸಾಂಗ್ ಲಾಂಚ್ ಇವೆಂಟ್. ಮಾಲ್‌ವೊಂದರಲ್ಲಿ ನಡೆದ ಕಾರ್ಯಕ್ರಮದ ಬಳಿಕ ನಿಧಿ ಅಗರ್ವಾಲ್ ಕಾರ್ ಹತ್ತೋಕೆ ಮಾಡಿದ ಹರಸಾಹಸದ ಕಥೆ ಇಲ್ಲಿದೆ ನೋಡಿ.
ಇದು ದಿ ರಾಜಾಸಾಬ್ ಚಿತ್ರದ ಆಲ್ಬಮ್‌ನ ಲೇಟೆಸ್ಟ್ ಸಾಂಗ್ ಝಲಕ್. ಸಹನಾ ಸಹನಾ ಅನ್ನೋ ಈ ರೊಮ್ಯಾಂಟಿಕ್ ಮೊಲೋಡಿ ಸಾಂಗ್ ಲಾಂಚ್ ಇವೆಂಟ್ ಇತ್ತೀಚೆಗೆ ಹೈದ್ರಾಬಾದ್‌ನ ಮಾಲ್‌ವೊಂದರಲ್ಲಿ ಅದ್ಧೂರಿಯಾಗಿ ನಡೆಯಿತು. ಆದ್ರೆ ಅಲ್ಲಿ ನೆರೆದಿದ್ದ ಚಿತ್ರಪ್ರೇಮಿಗಳು ಮಾತ್ರ ಸಹನೆ ಮೀರಿದ್ದು ಸುಳ್ಳಲ್ಲ.
ಪ್ರಭಾಸ್ ನಟಿ ನಿಧಿಗೆ ನೋ ಸೇಫ್ಟಿ.. ಭುಗಿಲೆದ್ದ ಆಕ್ರೋಶ..!!
ಸಾಂಗ್ ಲಾಂಚ್ ಇವೆಂಟ್.. ಕಾರ್ ಹತ್ತೋಕೆ ಹರಸಾಹಸ
ಯೆಸ್.. ಡಾರ್ಲಿಂಗ್ ಪ್ರಭಾಸ್ ಹಾಗೂ ನಿಧಿ ಅಗರ್ವಾಲ್ ನಟನೆಯಲ್ಲಿ ದಿ ರಾಜಾಸಾಬ್ ಸಿನಿಮಾ ಮೂಡಿ ಬಂದಿದ್ದು, ಜನವರಿ 9ಕ್ಕೆ ವರ್ಲ್ಡ್‌ವೈಡ್ ಗ್ರ್ಯಾಂಡ್ ರಿಲೀಸ್ ಆಗಲಿದೆ. ರೊಮ್ಯಾಂಟಿಕ್ ಹಾರರ್ ಜಾನರ್ ಸಿನಿಮಾ ಇದಾಗಿದ್ದು, ಚಿತ್ರತಂಡ ಪ್ರಭಾಸ್ ಅನುಪಸ್ಥಿತಿಯಲ್ಲಿ ಕೂಡ ಭರ್ಜರಿ ಪ್ರಮೋಷನ್ಸ್ ನಡೆಸ್ತಿದೆ. ಬರೀ ನಟಿಮಣಿಯರನ್ನಷ್ಟೇ ಇಟ್ಕೊಂಡು ಪ್ರಚಾರ ಕಾರ್ಯಗಳನ್ನ ನಡೆಸ್ತಿದೆ. ಲುಲು ಮಾಲ್‌ನಲ್ಲಿ ಸಹನಾ ಸಹನಾ ಸಾಂಗ್ ಲಾಂಚ್ ಇವೆಂಟ್‌ನ ನಡೆಸಿದ ಚಿತ್ರತಂಡ, ನಟಿಯರಿಗೆ ಕನಿಷ್ಟ ಮಟ್ಟದ ಸೇಫ್ಟಿ ನೀಡದೇ ಇದ್ದಿದ್ದನ್ನ ಎಲ್ಲರೂ ಮಾತನಾಡುವಂತೆ ಮಾಡಿದೆ.
ಮೊದಲೇ ಚಿತ್ರರಂಗದಲ್ಲಿ ನಟಿಮಣಿಯರಿಗೆ ಭದ್ರತೆ ಇಲ್ಲ ಅನ್ನೋ ಮಾತುಗಳಿವೆ. ಮಾನಸಿಕ, ದೈಹಿಕ ಕಿರುಕುಳಗಳ ನಡುವೆಯೂ ಸಾಕಷ್ಟು ಮಂದಿ ನಟಿಯರು ಚಿತ್ರರಂಗದಲ್ಲಿ ಬದುಕಿಗಾಗಿ ಹೋರಾಟ ನಡೆಸ್ತಿದ್ದಾರೆ. ಕೆಲವರು ಧೈರ್ಯದಿಂದ ಮೀಟೂ ಆರೋಪ ಮಾಡಿದ್ರೆ, ಇನ್ನೂ ಕೆಲವರು ಮಂಚಕ್ಕೆ ಕರೆದವರಿಗೆ ಮಂಗಳಾರತಿ ಮಾಡಿ, ಕಂಪ್ಲೆಂಟ್ ಕೊಟ್ಟ ನಿದರ್ಶನಗಳೂ ಇವೆ. ಅಂಥದ್ರಲ್ಲಿ ಬಹುಭಾಷಾ ನಟಿ ನಿಧಿ ಅಗರ್ವಾಲ್ ಅಂತಹ ಚೆಲುವೆಗೆ ಪ್ರಭಾಸ್ ಸಿನಿಮಾದ ಇವೆಂಟ್‌ನಲ್ಲಿ ಭದ್ರತೆ ಇಲ್ಲದಿರೋದು ದುರಂತವೇ ಸರಿ.
ಫ್ಯಾನ್ಸ್ ಟಾಕ್ಸಿಕ್ ವರ್ತನೆ.. ನಟಿಗೆ ಮುತ್ತಿಕೊಳ್ಳೋದು ಕಿರುಕುಳ
ಎಲ್ಲೆಡೆ ನಿಧಿ ಅಗರ್ವಾಲ್ ಟಾಕ್.. ಮಾನವೀಯತೆ ಬೇಡವೇ ?
ಮಾಲ್‌ನಲ್ಲಿ ಸಾಂಗ್ ಲಾಂಚ್ ಇವೆಂಟ್ ಬಳಿಕ ಮನೆಗೆ ತೆರಳಲು ಮುಂದಾದ ನಿಧಿ ಅಗರ್ವಾಲ್ ಹಾಗೂ ಮತ್ತೊಬ್ಬ ನಟಿ ಮೇಲೆ ಅಲ್ಲಿರೋ ಜನಸಮೂಹ ಮುಗಿಬಿದ್ದಿದೆ. ಐದಾರು ಮಂದಿ ಬೌನ್ಸರ್ಸ್ ಇದ್ದರೂ ಸಹ, ಹರಸಾಹಸ ಮಾಡಿ ಕಾರ್ ಒಳಹೊಕ್ಕಿದ್ದಾರೆ ನಿಧಿ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಮುಟ್ಟಬಾರದ ಕಡೆ ಮುಟ್ಟಿ, ಉಸಿರುಗಟ್ಟಿಸುವಂತೆ ಮಾಡಿದ್ದಾರೆ.
ಆ ದೃಶ್ಯಗಳು ಸದ್ಯ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಇದು ಅಭಿಮಾನಿಗಳ ಟಾಕ್ಸಿಕ್ ವರ್ತನೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಈ ರೀತಿ ನಟಿಯರಿಗೆ ಮುತ್ತಿಕೊಳ್ಳೋದು ಕೂಡ ಒಂದು ರೀತಿ ಕಿರುಕುಳವೇ ಆಗಿದೆ. ಜನ ಕನಿಷ್ಠ ಮಾನವೀಯತೆ ತೋರದೆ ಈ ರೀತಿ ವರ್ತಿಸಿರೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ.





