ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾನ ಅದ್ಯಾರೋ ಮಹಾನುಭಾವ ಮಂಚಕ್ಕೆ ಕರೆದಿದ್ದನಂತೆ. ಈ ವಿಚಾರ ಸ್ವತಃ ನಯನತಾರಾ ಅವ್ರೇ ಬಾಯಿಬಿಟ್ಟಿದ್ದಾರೆ. ಕಾಸ್ಟಿಂಗ್ ಕೌಚ್ ಮತ್ತೆ ಭುಗಿಲೇಳುತ್ತಿದ್ದು, ಈ ಬಹುಭಾಷಾ ಚೆಲುವೆಯನ್ನ ಕೆಣಕಿದ್ಯಾರು..? ಏನಂತ ಆಫರ್ ಕೊಟ್ಟಿದ್ದ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ. ಜಸ್ಟ್ ವಾಚ್.
ಚಿತ್ರರಂಗದಲ್ಲಿ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಷನ್‌ಗೆ ಸಜ್ಜಾಗಿರೋ ನಯನತಾರಾ ಮೂಲತಃ ನಮ್ಮ ಕನ್ನಡದವರು. ಯೆಸ್.. ಬೆಂಗಳೂರಿನಲ್ಲಿ ಮಲಯಾಳಿ ಕುಟುಂಬದಲ್ಲಿ ಜನಿಸಿದ ಈಕೆ ಬೆಳೆದಿದ್ದು ಕೂಡ ಇಲ್ಲೇನೇ. ಸದ್ಯ ವಿಘ್ನೇಶ್ ಶಿವನ್ ಅನ್ನೋ ಡೈರೆಕ್ಟರ್‌ನ ಮದ್ವೆ ಆಗಿ, ಇಬ್ಬರು ಮಕ್ಕಳೊಂದಿಗೆ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಸಿನಿಮಾವೊಂದಕ್ಕೆ ಬರೋಬ್ಬರಿ 8 ರಿಂದ 10 ಕೋಟಿ ದುಬಾರಿ ರೆಮ್ಯುನರೇಷನ್ ಪಡೆಯುವಂತಹ ಈಕೆ ಸೌತ್ ಲೇಡಿ ಸೂಪರ್ ಸ್ಟಾರ್ ಆಗಿ, ತಮಿಳಿನಿಂದ ಬಾಲಿವುಡ್‌ವರೆಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.
ನಯನತಾರಾನ ಮಂಚಕ್ಕೆ ಕರೆದಿದ್ದ ಮಹಾನುಭಾವ ಯಾರು..?
ನಿರ್ಮಾಪಕನಿಂದ ಬೇಡಿಕೆ.. ಆಫರ್ ರಿಜೆಕ್ಟ್ ಮಾಡಿದ ನಯನ
ಶಾರೂಖ್ ಖಾನ್ ಜೊತೆ ಜವಾನ್ ಚಿತ್ರದಲ್ಲಿ ನಟಿಸೋ ಮೂಲಕ ಬಾಲಿವುಡ್‌ಗೂ ಕಾಲಿಟ್ಟ ಈಕೆಗೂ ಆರಂಭದ ದಿನಗಳು ಅಷ್ಟು ಸುಲಭವಾಗಿ ಇರಲಿಲ್ಲ. ಹೆಣ್ಣಾಗಿ ಸಾಕಷ್ಟು ನೋವು, ಅವಮಾನ, ಅಪಮಾನಗಳನ್ನ ಎದುರಿಸಿಯೇ ಬಂದಿದ್ದಾರೆ. ಅದಕ್ಕೆ ಅವರು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ನೀಡಿರೋ ಸ್ಟೇಟ್‌ಮೆಂಟ್. ಯೆಸ್.. ಮತ್ತೊಮ್ಮೆ ಸೌತ್ ಸಿನಿದುನಿಯಾದಲ್ಲಿ ಕಾಸ್ಟಿಂಗ್ ಕೌಚ್ ಪೆಡಂಭೂತ ಭುಗಿಲೇಳುತ್ತಿದೆ. ಅದ್ರಲ್ಲೂ ತೆಲುಗು ಹಾಗೂ ಮಲಯಾಳಂನಲ್ಲಿ ಒಬ್ಬೊಬ್ಬರಾಗಿ ನಟಿಮಣಿಯರು ಬಾಯಿ ಬಿಡಲು ಆರಂಭಿಸಿದ್ದಾರೆ. ಅದಕ್ಕೆ ನಯನತಾರಾ ಕೂಡ ಧ್ವನಿ ಆಗಿದ್ದಾರೆ.
ಅಂದಹಾಗೆ ನಯನತಾರಾ ಅಂತಹ ಚೆಲುವೆಯನ್ನ ಕೂಡ ನಿರ್ಮಾಪಕನೊಬ್ಬ ಮಂಚಕ್ಕೆ ಕರೆದಿದ್ದನಂತೆ. ಅದನ್ನ ಇತ್ತೀಚೆಗೆ ಬಹಿರಂಗಪಡಿಸಿರೋ ನಯನತಾರಾ, ಆತನ ಹೆಸರು ಹಾಗೂ ಸಿನಿಮಾದ ಹೆಸರು ಪ್ರಸ್ತಾಪಿಸಿಲ್ಲ. ನನಗೆ ಸಿನಿಮಾದಲ್ಲಿ ಅವಕಾಶ ನೀಡಲು ಒಂದು ಕಂಡಿಷನ್ ಹಾಕಿದ್ರು. ಆದ್ರೆ ನಾನು ಆ ಕಂಡಿಷನ್ ಜೊತೆ ಸಿನಿಮಾ ಆಫರ್‌ನ ಕೂಡ ತಿರಸ್ಕರಿಸಿದೆ ಎಂದಿದ್ದಾರೆ.
ಮತ್ತೆ ಭುಗಿಲೆದ್ದ ಕಾಸ್ಟಿಂಗ್ ಕೌಚ್.. ಸಿಡಿದ ಸೂಪರ್ ಸ್ಟಾರ್..!
ಮಕ್ಕಳಾದ ಬಳಿಕ ಬಹುಭಾಷಾ ನಟಿ ಓಪನ್ ಆಗ್ತಿರೋದ್ಯಾಕೆ..?
ಎಲ್ಲಾ ಓಕೆ.. ಮದ್ವೆ, ಮಕ್ಕಳಾಗಿ, ಲೈಫ್ ಸೆಟಲ್ ಆಗಿರೋ ನಯನತಾರಾ ಈಗ ಯಾಕೆ ಈ ವಿಷಯ ಹೊರತಂದಿದ್ದಾರೆ ಅಂತ ಒಂದಷ್ಟು ನೆಟ್ಟಿಗರು ಕಾಲೆಳೆಯಲು ಆರಂಭಿಸಿದ್ದಾರೆ. ತೆಲುಗಿನ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಕೇಸ್ ಬಳಿಕ, ಮಲಯಾಳಂನಲ್ಲಿ ಹೇಮಾ ಕಮಿಟಿ ಆಗಿದೆ. ಕಂಗನಾ ರಣಾವತ್, ರಾಧಿಕಾ ಆಪ್ಟೆ ಅಂತಹವರನ್ನೇ ನಿರ್ಮಾಪಕರುಗಳು ಮಂಚಕ್ಕೆ ಕರೆಯೋದನ್ನ ಬಿಟ್ಟಿಲ್ಲ. ಹೀಗಿರುವಾಗ ನಯನತಾರ ಕೂಡ ಈಗ ಆ ಕರಾಳ ಸತ್ಯವನ್ನು ಬಹಿರಂಗಪಡಿಸಿ, ಎಲ್ಲರ ಹುಬ್ಬೇರಿಸಿದ್ದಾರೆ.
ಸದ್ಯ ನಯನತಾರಾ ನಮ್ಮ ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಟಾಕ್ಸಿಕ್, ಮೆಗಾಸ್ಟಾರ್ ಚಿರಂಜೀವಿಯ ಮನ ಶಂಕರ್ ವಾರ ಪ್ರಸಾದ್ ಗಾರು, ದುನಿಯಾ ವಿಜಯ್ ಜೊತೆ ಮೂಕುತಿ ಅಮ್ಮನ್-2, ಮಲಯಾಳಂನ ಡಿಯರ್ ಸ್ಟೂಡೆಂಟ್ಸ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಡ ನಟಿಯಾಗಿದ್ದುಕೊಂಡು, ನಿರ್ಮಾಪಕರುಗಳ ಮುಖವಾಡ ಕಳಚಲು ಮನಸ್ಸು ಮಾಡ್ತಿರೋ ಇವರುಗಳ ಧೈರ್ಯ ನಿಜಕ್ಕೂ ಮೆಚ್ಚಲೇಬೇಕು. ಆದ್ರೆ ಆ ಆಸಾಮಿ ಹೆಸರು ಸಮೇತ ಬಹಿರಂಗಪಡಿಸಿದ್ದಿದ್ರೆ ಚೆನ್ನಾಗಿರ್ತಿತ್ತು ಅನ್ನೋದು ಸದ್ಯದ ಟಾಕ್.





