ಹನಿ ಫಿಲಂ ಮೇಕರ್ಸ್ ಲಾಂಛನದಲ್ಲಿ ಎನ್ ಎ.ಶಿವಕುಮಾರ್ (ಕುಮಾರ್ ನೊಣವಿನಕೆರೆ) ಹಾಗು ಸಹ ನಿರ್ಮಾಪಕ ಮಾಧವಾನಂದ Y ನಿರ್ಮಿಸುತ್ತಿರುವ ‘ನನ್ನ ಮಗಳೇ ಸೂಪರ್ ಸ್ಟಾರ್ ’ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಮುಗಿಸಿ, ಚಿತ್ರತಂಡ 14/10/2025 ಮಂಗಳವಾರ ಗುಬ್ಬಿ ಗೂಡು ವೆಜ್ ರೆಸಾರ್ಟ್ ನಲ್ಲಿ ಕುಂಬಳಕಾಯಿ ಒಡೆಯಿತು. ಚಿತ್ರೀಕರಣ ಬೆಂಗಳೂರು ಹಾಗು ಸುತ್ತ-ಮುತ್ತ ಜರುಗಿದ್ದು ಚಿತ್ರದ ಟೈಟಲ್ ಸಾಂಗ್ ಪೂರಕ ಸನ್ನಿವೇಶಗಳನ್ನು ನಿರ್ದೇಶಕ ಆಯುರ್ ನಿರ್ದೇಶನದಲ್ಲಿ ಛಾಯಾಗ್ರಾಹಕ ಸಚಿನ್ ಚಿತ್ರೀಕರಿಸಿಕೊಂಡರು.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ “ಸೀತಾರಾಮ” ಸೀರಿಯಲ್ ನ ಮೂಲಕ ನೋಡುಗರ ಮನ ಗೆದ್ದಿದ್ದ ಬೇಬಿ ರೀತು ಸಿಂಗ್, ಭಜರಂಗಿ ೨” ಖ್ಯಾತಿಯ ಚಲುವರಾಜ್, ಸಂಭ್ರಮಶ್ರೀ, ವಿಕ್ರಂ ಸೂರಿ, ಹಾಗು ವಿಶೇಷ ಪಾತ್ರದಲ್ಲಿ ಖ್ಯಾತ ಹಿರಿಯ ಸಾಹಿತಿ ಬಿ.ಆರ್ ಲಕ್ಷ್ಮಣರಾವ್, ಪರಿಸರ ಪ್ರೇಮಿ ರೇವತಿ ಕಾಮತ್, ಪ್ರತಿಭಾ ಸಂಶಿಮಠ, ರವೀಂದ್ರ ಸೊರಗಾವಿ, ಜ್ಞಾನೇಂದ್ರ ಮತ್ತಿತರರು ಚಿತ್ರದ ಭೂಮಿಕೆಯಲ್ಲಿದ್ದಾರೆ.
ಖ್ಯಾತ ಹಿರಿಯ ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಅವರು ಖುದ್ದು ಕೊನೆಯ ದೃಶ್ಯ ವೀಕ್ಷಿಸಲು ಬೆಂಗಳೂರು ಹೊರವಲಯಲ್ಲಿರುವ ಗುಬ್ಬಿಗೂಡು ವೆಜ್ ರೆಸಾರ್ಟ್ ಗೆ ಭೇಟಿ ನೀಡಿ ಚಿತ್ರತಂಡಕ್ಕೆ ಉತ್ಸಾಹ ನೀಡಿದರು. ಈ ಸಂಧರ್ದಲ್ಲಿ ಗುಬ್ಬಿಗೂಡು ವೆಜ್ ರೆಸಾರ್ಟ್ ಮಾಲೀಕರಾದ ಮಹೇಶ್ ಹಾಗು ಸ್ನೇಹಿತ ಚಂದರ್ ಜಿ ಅವರು ಉಪಸ್ಥಿತರಿದ್ದರು.
ಸಧ್ಯಕ್ಕೆ ವಿಶೇಷ ಪಾತ್ರದಲ್ಲಿ ಪರಿಸರ ಪ್ರೇಮಿ ರೇವತಿ ಕಾಮತ್ ಅವರ ಪಾತ್ರದ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಈ ವಿವರಗಳನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ. ಚಿತ್ರಕ್ಕೆ ಕೆವಿನ್ ಸಂಗೀತ ನೀಡಿದ್ದಾರೆ. ಸಂಕಲನ ಆಯುರ್, ಬಿ ಆರ್ ಲಕ್ಷ್ಮಣರಾವ್ ಗೀತ ಸಾಹಿತ್ಯ ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ರವೀಂದ್ರ ಸೊರಗಾವಿ, ಮಂಗಳ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ 1ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಸಹ ನಿರ್ಮಾಪಕ ಮಾಧವಾನಂದ ಅವರು ತಿಳಿಸಿದ್ದಾರೆ.