ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಅಡವಿ ಶೇಷ್ ಹೊಚ್ಚ ಹೊಸ ಸಿನಿಮಾಗಳ ಸಾಂಗ್ಸ್ ಸಖತ್ ಟ್ರೆಂಡಿಂಗ್‌ನಲ್ಲಿವೆ. ದಿ ಪ್ಯಾರಡೈಸ್ ಚಿತ್ರಕ್ಕಾಗಿ ನಾನಿ ಡಬಲ್ ಜಡೆಯಲ್ಲಿ ಮೈಂಡ್ ಬ್ಲೋಯಿಂಗ್ ಡ್ಯಾನ್ಸ್ ಮಾಡಿದ್ದಾರೆ. ಇತ್ತ ಡಕಾಯಿತ್ ಪ್ರೇಮ ಕಥೆ ಕೂಡ ಹಾರ್ಟ್ ಟಚಿಂಗ್ ಆಗಿದೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ಡಬಲ್ ಜಡೆಯಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಪ್ಯಾರಡೈಸ್ ಕಿಕ್
- ಆಯಾ ಶೇರ್ ಝಲಕ್.. ಬೇರ್ ಬಾಡಿಯಲ್ಲಿ ಕಲ್ಟ್ ಮ್ಯಾನರಿಸಂ
ಇದು ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಿ ಪ್ಯಾರಡೈಸ್ ಚಿತ್ರದ ಮೊದಲ ಸಾಂಗ್ ಝಲಕ್. ತಮಿಳಿನ ಸೆನ್ಸೇಷನಲ್ ಕಂಪೋಸರ್ ಅನಿರುದ್ದ್ ರವಿಚಂದರ್ ಸಂಯೋಜನೆಯ ಹಾಡು ಇದಾಗಿದ್ದು, ಸಿನಿಮಾದ ಟೈಟಲ್, ಕಥೆ, ಪಾತ್ರದಂತೆ ಈ ಹಾಡು ಕೂಡ ಸಿಕ್ಕಾಪಟ್ಟೆ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಅದ್ರಲ್ಲೂ ನಾನಿಯ ಲುಕ್ಸ್ ಕಣ್ಣು ಕುಕ್ಕುವಂತಿವೆ. ಎರಡು ಜಡೆಯಲ್ಲಿ ನಾನಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಸಿಕ್ಕಿದ್ದಾರೆ.
ಶ್ರೀಕಾಂತ್ ಒಡೇಲಾ ನಿರ್ದೇಶನದ ಈ ಸಿನಿಮಾ ಸ್ಯಾಂಪಲ್ಸ್‌ನಿಂದ ಅತೀವ ನಿರೀಕ್ಷೆ ಮೂಡಿಸಿದ್ದು, ನಾನಿ ಡಿಫರೆಂಟ್ ಸ್ಟೈಲು, ಮ್ಯಾನರಿಸಂನಿಂದ ಮಿಂಚುತ್ತಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಮೂರೇ ದಿನದಲ್ಲಿ 35 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದಿದ್ದು, ಪ್ಯಾನ್ ಇಂಡಿಯಾ ಕಮಾಲ್ ಮಾಡ್ತಿದೆ.
- ಮೋಸವೇ ತಿಳಿಯದ ‘ಡಕಾಯಿತ್’ಗೆ ಮೃಣಾಳ್ ಮೋಸ..!!
- ಜೈಲಲ್ಲಿ ಅಡವಿ ಶೇಷ್.. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಆಗಿದ್ದೇನು ಗೊತ್ತಾ?
ಇದು ಅಡವಿ ಶೇಷ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಡಕಾಯಿತ್ ಚಿತ್ರದ ಮೊದಲ ಸಾಂಗ್ ಝಲಕ್. ಎಲ್ಲರ ದಿಲ್ ದೋಚಿರೋ ಮೃಣಾಳ್ ಠಾಕೂರ್, ಅಡವಿ ಶೇಷ್‌ಗೆ ಜೋಡಿಯಾಗಿರೋ ಈ ಸಿನಿಮಾ, ಟೀಸರ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿತ್ತು. ಇದೀಗ ಈ ಹಾರ್ಟ್ ಬ್ರೇಕಿಂಗ್ ಸಾಂಗ್‌ನಿಂದ ಗಮನ ಸೆಳೆಯುತ್ತಿದೆ. ಹೆಸರಿಗಷ್ಟೇ ಡಕಾಯಿತ್. ಆದ್ರೆ ಮೋಸವೇ ತಿಳಿಯದ ನಿಷ್ಕಲ್ಮಶ ಮನಸ್ಸಿನ ಹೀರೋಗೆ ಪ್ರೀತಿಸಿ, ನಂಬಿಕೆ ದ್ರೋಹ ಮಾಡಿದ ನಾಯಕನಟಿಯ ಮೇಲೆ ಈ ಸಾಂಗ್ ನಿಂತಿದೆ.
ಭೀಮ್ಸ್ ಸಂಗೀತ ಸಂಯೋಜನೆಯ ಈ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೀರೋ ಜೈಲಿಗೆ ಯಾಕೆ ಹೋದ..? ಫ್ಲ್ಯಾಶ್‌ಬ್ಯಾಕ್ ಲವ್ ಎಷ್ಟು ಇಂಟೆನ್ಸ್ ಆಗಿದೆ..? ನಾಯಕಿ ಮೋಸ ಮಾಡಿದ್ಧಾದ್ರೂ ಏಕೆ ಹೀಗೆ ಸಾಷಕ್ಟು ಪ್ರಶ್ನೆಗಳನ್ನ ಮೂಡಿಸುತ್ತೆ ಈ ಹಾಡು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





