ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇತ್ತೀಚಿನ ಸೀರಿಯಲ್‌ಗಳು ಸಖತ್ ಸುದ್ದಿಯಲ್ಲಿವೆ.. ಅದರಲ್ಲೂ ಇದೀಗ ಟಾಪ್ 2 ಸೀರಿಯಲ್ ಗಳು ಜೋತೆಯಾಗಿ ಜನರನ್ನು ರಂಜಿಸಲು ಮುಂದಾಗಿದೆ. ಹೌದು, ‘ನಂದ ಗೋಕುಲ’ ಮತ್ತು ‘ಭಾರ್ಗವಿ LLB’ ಈಗ ವೀಕ್ಷಕರ ಮನಗೆದ್ದಿವೆ. ಈ ಎರಡೂ ಧಾರಾವಾಹಿಗಳು ತಮ್ಮ ರೋಚಕ ಕಥಾಹಂದರ ಮತ್ತು ಟ್ವಿಸ್ಟ್‌ಗಳಿಂದ TRP ದಾಖಲೆಯನ್ನು ಬರೆಯುತ್ತಿವೆ. ಹೌದು, ಇದೀಗ, ಈ ಎರಡು ಧಾರಾವಾಹಿಗಳ ‘ಮಹಾಸಂಗಮ’ ಜುಲೈ 21ರಿಂದ 25ರವರೆಗೆ ರಾತ್ರಿ 8:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ವೀಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.
‘ನಂದ ಗೋಕುಲ’ ಮತ್ತು ‘ಭಾರ್ಗವಿ LLB’ ಜನಪ್ರಿಯತೆ:
‘ನಂದ ಗೋಕುಲ’ ಧಾರಾವಾಹಿಯು ‘ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕತೆ’ಯನ್ನು ಭಾವನಾತ್ಮಕವಾಗಿ ಚಿತ್ರಿಸುತ್ತದೆ. ಈ ಧಾರಾವಾಹಿಯು ರಾತ್ರಿ 8:30ಕ್ಕೆ ಪ್ರಸಾರವಾಗುತ್ತದೆ. ಮತ್ತೊಂದೆಡೆ, ‘ಭಾರ್ಗವಿ LLB’ ಧಾರಾವಾಹಿಯು ‘ಸ್ವಾಭಿಮಾನದ ಮಹಾಸಂಘರ್ಷ’ವನ್ನು ತೋರಿಸುವ ಮೂಲಕ ರಾತ್ರಿ 9:00 ಗಂಟೆಗೆ ವೀಕ್ಷಕರನ್ನು ರಂಜಿಸುತ್ತಿದೆ. ಈ ಎರಡೂ ಧಾರಾವಾಹಿಗಳು ತಮ್ಮ ಭಾವನಾತ್ಮಕ ಕಥೆ, ಶಕ್ತಿಶಾಲಿ ಪಾತ್ರಗಳು ಮತ್ತು ರೋಚಕ ಟ್ವಿಸ್ಟ್‌ಗಳಿಂದ ಜನಮನ ಗೆದ್ದಿವೆ.
‘ಭಾರ್ಗವಿ LLB’ ಕಥಾಹಂದರ:
‘ಭಾರ್ಗವಿ LLB’ ಧಾರಾವಾಹಿಯ ಕೇಂದ್ರಬಿಂದುವಾಗಿರುವ ಭಾರ್ಗವಿಯು ಧೈರ್ಯಶಾಲಿ, ಮಧ್ಯಮ ವರ್ಗದ ಯುವತಿಯಾಗಿದ್ದು, ನ್ಯಾಯಕ್ಕಾಗಿ ದಿಟ್ಟವಾಗಿ ಹೋರಾಡುತ್ತಾಳೆ. ಆಕೆಯ ಎದುರಾಳಿಯಾದ ಜಯಪ್ರಕಾಶ್ ಪಾಟೀಲ್ ಒಬ್ಬ ಬಲಿಷ್ಠ, ಪ್ರಭಾವಶಾಲಿ ವಕೀಲನಾಗಿದ್ದು, ಗೆಲುವಿಗಾಗಿ ಯಾವ ಕಾನೂನನ್ನಾದರೂ ಮುರಿಯುವವನು. ಜೆಪಿ ಪಾಟೀಲ್ ಭಾರ್ಗವಿಯ ತಂದೆ ರವೀಂದ್ರ ಭಟ್ಕಳ್‌ರನ್ನು ಕೋರ್ಟ್‌ನಲ್ಲಿ ಅವಮಾನಿಸಿ, ಅವರ ವಕೀಲ ವೃತ್ತಿಯನ್ನೇ ತ್ಯಜಿಸುವಂತೆ ಮಾಡಿದ್ದಾನೆ. ಭಾರ್ಗವಿಯು ತನ್ನ ತಂದೆಯ ಅವಮಾನಕ್ಕೆ ಪ್ರತೀಕಾರವಾಗಿ ಜೆಪಿ ಪಾಟೀಲ್ ವಿರುದ್ಧ ಹೋರಾಡುತ್ತಾಳೆ.
ಭಾರ್ಗವಿಯ ಜೀವನದಲ್ಲಿ ಅನಿರೀಕ್ಷಿತ ತಿರುವು ಬರುವುದು ಜೆಪಿ ಪಾಟೀಲ್‌ರ ಮಗ ಅರ್ಜುನ್ ಪಾಟೀಲ್‌ನನ್ನು ಭೇಟಿಯಾದಾಗ. ಶ್ರೀಮಂತ ಕುಟುಂಬದಿಂದ ಬಂದರೂ ಸಹೃದಯಿಯಾದ ಅರ್ಜುನ್, ಭಾರ್ಗವಿಯನ್ನು ಮೊದಲ ದೃಷ್ಟಿಯಲ್ಲೇ ಪ್ರೀತಿಸುತ್ತಾನೆ. ಆದರೆ, ಭಾರ್ಗವಿಯು ತನ್ನ ತಂದೆಯ ವಿರುದ್ಧ ಹೋರಾಡುವ ವಕೀಲೆ ಎಂಬ ಸತ್ಯವು ಅರ್ಜುನ್‌ಗೆ ತಿಳಿದಿಲ್ಲ. ಈ ಭಾವನಾತ್ಮಕ ಸಂಘರ್ಷವು ‘ಭಾರ್ಗವಿ LLB’ ಧಾರಾವಾಹಿಯನ್ನು ರೋಚಕಗೊಳಿಸಿದೆ.
ಮಹಾಸಂಗಮದಲ್ಲಿ ಹೊಸ ತಿರುವು:
‘ನಂದ ಗೋಕುಲ’ ಧಾರಾವಾಹಿಯ ನಾಯಕ ವಲ್ಲಭ, ಭಾರ್ಗವಿಗೆ ಅರ್ಜುನ್ ಮೇಲಿನ ಆಕೆಯ ಪ್ರೀತಿಯನ್ನು ಅರಿತು ಅದನ್ನು ಒಪ್ಪಿಕೊಳ್ಳಲು ಪ್ರೇರೇಪಿಸುತ್ತಾನೆ. ಇದೇ ಸಮಯದಲ್ಲಿ, ತಂದೆಯ ಮಾತಿನಿಂದ ಬೇಸರಗೊಂಡು ಮನೆಯಿಂದ ದೂರವಾಗಿರುವ ವಲ್ಲಭನಿಗೆ, ಭಾರ್ಗವಿಯು ತಂದೆ-ತಾಯಿಯ ಮಹತ್ವವನ್ನು ತಿಳಿಸಿ, ಮನೆಗೆ ಮರಳುವಂತೆ ಪ್ರೇರಣೆ ನೀಡುತ್ತಾಳೆ. ಈ ಭಾವನಾತ್ಮಕ ಸಂಗಮವು ಎರಡೂ ಧಾರಾವಾಹಿಗಳ ಕಥೆಗೆ ಹೊಸ ಆಯಾಮವನ್ನು ತರುತ್ತದೆ. ಈ ‘ಮಹಾಸಂಗಮ’ ಜುಲೈ 21ರಿಂದ 25ರವರೆಗೆ ರಾತ್ರಿ 8:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.