ಟೀಸರ್ ಹಾಗೂ ಸಾಂಗ್ಸ್‌ನಿಂದ ಭರವಸೆ ಮೂಡಿಸಿದ್ದ ಮರಳಿ ಮನಸಾಗಿದೆ ಚಿತ್ರ ಸೆನ್ಸಾರ್‌ನಲ್ಲಿ ಪಾಸ್ ಆಗಿದೆ. ಸೆನ್ಸಾರ್ ಅಧಿಕಾರಿಗಳಿಂದಲೂ ಮೆಚ್ಚುಗೆ ಪಡೆದಿರೋ ಫೀಲ್ ಗುಡ್ ಯೂತ್‌ಫುಲ್ ಎಂಟರ್‌ಟೈನರ್, ಥಿಯೇಟರ್‌ಗೆ ಎಂಟ್ರಿ ಕೊಡೋಕೆ ಡೇಟ್ ಕೂಡ ಫಿಕ್ಸ್ ಮಾಡಿಕೊಂಡಿದೆ.
ಮರಳಿ ಮನಸಾಗಿದೆ.. ಈ ಟೈಟಲ್ ಕೇಳ್ತಿದ್ದಂತೆ ಇದೊಂದು ಪಕ್ಕಾ ಫೀಲ್ ಗುಡ್ ಲವ್ ಸ್ಟೋರಿ ಅನಿಸಲಿದೆ. ಸಿಂಗಲ್ ಟೀಸರ್ ಹಾಗೂ ಸಾಂಗ್ಸ್‌ನಿಂದ ನೋಡುಗರ ಕಣ್ಮನ ತಣಿಸಿರೋ ಈ ಚಿತ್ರ ಇದೀಗ ಸೆನ್ಸಾರ್‌ನಿಂದ ಕೂಡ ಪಾಸ್ ಆಗಿ, ಚಿತ್ರ ವೀಕ್ಷಿಸಿದ ಸೆನ್ಸಾರ್ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್ ಪಡೆದಿರೋ ಮರಳಿ ಮನಸಾಗಿದೆ ಚಿತ್ರ ಪ್ರಮಾಣ ಪತ್ರದ ಜೊತೆ ಫೆಬ್ರವರಿ 12ರಂದು ತೆರೆಗೆ ತರೋದಾಗಿ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ.
ಪ್ರೇಮಿಗಳಿಗಾಗಿ ವ್ಯಾಲೆಂಟೈನ್ಸ್ ಡೇ ‘ಮರಳಿ ಮನಸಾಗಿದೆ’
ಫೆ-12ಕ್ಕೆ ಬೆಳ್ಳಿತೆರೆಗೆ.. ಸೆನ್ಸಾರ್‌ನಿಂದ U/A ಸರ್ಟಿಫಿಕೇಟ್
ನೋಡೋಕೆ ಇದು ಟ್ರಯಾಂಗಲ್ ಲವ್ ಸ್ಟೋರಿಯಂತಿದ್ದು, ಪಕ್ಕಾ ಯೂತ್‌ನೇ ಟಾರ್ಗೆಟ್ ಆಡಿಯೆನ್ಸ್ ಆಗಿ ಇಟ್ಕೊಂಡು ಸಿನಿಮಾ ಮಾಡಿದೆ ಚಿತ್ರತಂಡ. ಅರ್ಜುನ್ ವೇದಾಂತ ಹೀರೋ ಆಗಿ ಲೀಡ್‌ನಲ್ಲಿದ್ದು, ಅವರಿಗೆ ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್ ಅನ್ನೋ ಇಬ್ಬಿಬ್ಬರು ಚೆಂದುಳ್ಳಿ ಚೆಲುವೆಯರು ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಬೆನಕ ಟಾಕೀಸ್ ಬ್ಯಾನರ್‌ನಡಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದ ಈ ಸಿನಿಮಾಗೆ ನಾಗರಾಜ್ ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಿನು ಮನಸು ಸಂಗೀತ ಸಂಯೋಜನೆಯ ಹಾಡುಗಳು ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು, ಹಾಲೇಶ್ ಸಿನಿಮಾಟೋಗ್ರಫಿ, ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕಿದೆ. ಅಂದಹಾಗೆ ಈ ಸಿನಿಮಾ ರಿಲೀಸ್‌ಗೆ ಎರಡು ವಾರ ಮೊದಲೇ ಪೇಯ್ಡ್ ಪ್ರೀಮಿಯರ್ ಶೋಗಳನ್ನ ಆಯೋಜಿಸಿದೆ. ಇದು ಸಿನಿಮಾ ಮೇಲೆ ತಂಡಕ್ಕಿರೋ ಕಾನ್ಫಡೆನ್ಸ್ ಜೊತೆ ಚಿತ್ರಪ್ರೇಮಿಗಳ ಮೇಲೆ ಇರೋ ಆತ್ಮವಿಶ್ವಾಸದ ಪ್ರತೀಕವಾಗಿದೆ. ಜನವರಿ 31ರಿಂದ ಫೆಬ್ರವರಿ 8ರ ತನಕ ಆರ್ ಆರ್ ನಗರ, ಒರಾಯನ್ ಮಾಲ್, ವೈಟ್ ಫೀಲ್ಡ್, ಜೆಪಿ ನಗರ, ಮಾಲ್ ಆಫ್ ಏಷ್ಯಾ, ರಾಕ್‌ಲೈನ್ ಮಾಲ್ ಹೀಗೆ ಬೆಂಗಳೂರಿನಾದ್ಯಂತ ಶೋಗಳನ್ನ ಪ್ಲ್ಯಾನ್ ಮಾಡಲಾಗಿದೆ.
ಡಿಬಾಸ್ ದರ್ಶನ್ ಅವರ ಕಟ್ಟಾಭಿಮಾಭಿ ಆಗಿರೋ ನಿರ್ಮಾಪಕ ನವೀನ್ ಕುಮಾರ್, ಐಟಿ ಉದ್ಯೋಗಿ ಆಗಿದ್ದುಕೊಂಡು ದರ್ಶನ್‌ಗಾಗಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದು ಇಂಟರೆಸ್ಟಿಂಗ್. ದಚ್ಚು ಜೈಲಿಂದ ಹೊರಬರೋದನ್ನ ಕಾಯ್ತಿರೋ ನಿರ್ಮಾಪಕರು, ಬಂದ ಕೂಡಲೇ ತಮ್ಮ ಸಿನಿಮಾನ ತೋರಿಸಿ, ಆಶೀರ್ವಾದ ಪಡೆಯೋ ಧಾವಂತದಲ್ಲಿದ್ದಾರೆ.





