ದಸರಾ ಆಯುಧ ಪೂಜೆ ಹಿನ್ನೆಲೆ ಸ್ಯಾಂಡಲ್ವುಡ್ಗೆ ಹೊಚ್ಚ ಹೊಸ ಆಯುಧ ಎಂಟ್ರಿ ಕೊಟ್ಟಿದೆ. ಅದು ಬೇರಾರೂ ಅಲ್ಲ ಮ್ಯಾಂಗೋ ಪಚ್ಚ ಅಲಿಯಾಸ್ ಸಂಚಿತ್ ಸಂಜೀವ್. ಯೆಸ್.. ಬಾದ್ಷಾ ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಚೊಚ್ಚಲ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ದಸರಾ ಹಬ್ಬದ ಹಿನ್ನೆಲೆ ರಿಲೀಸ್ ಆಗಿರೋ ಮ್ಯಾಂಗೋ ಪಚ್ಚ ಸಿನಿಮಾದ ಲೇಟೆಸ್ಟ್ ಟೀಸರ್ ದೃಶ್ಯಗುಚ್ಚವಿದು. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಅಂದ್ರೆ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾ. ಇತ್ತೀಚೆಗೆ ಮಗಳ ಜೊತೆ ಮಗ ಅಂತ ಅಳಿಯನನ್ನ ಇಂಟ್ರಡ್ಯೂಸ್ ಮಾಡಿದ್ದ ಬಾದ್ಷಾ ಸುದೀಪ್ ಅವರೇ ಈ ಟೀಸರ್ನ ಲಾಂಚ್ ಮಾಡಿ ಬೆಸ್ಟ್ ವಿಶಸ್ ಹೇಳಿರೋದು ಇಂಟರೆಸ್ಟಿಂಗ್.
ಆಯುಧ ಪೂಜೆ ಹಿನ್ನೆಲೆ ಇಂಡಸ್ಟ್ರಿಗೆ ಹೊಸ ಆಯುಧ ಎಂಟ್ರಿ
ಮೈಸೂರು ಮ್ಯಾಂಗೋ ಪಚ್ಚನ ಸ್ಟೋರಿ ಜೊತೆ ಹಿಸ್ಟರಿ ರಿವೀಲ್
ಆಯುಧ ಪೂಜೆಯ ದಿನವೇ ಸಂಚಿತ್ ಮೊದಲ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಈ ಮೂಲಕ ಚಿತ್ರರಂಗಕ್ಕೆ ಹೊಸ ಆಯುಧ ಸಿಕ್ಕಂತಾಗಿದೆ. ಹೌದು.. ಪಚ್ಚ ಕೂಡ ಕಿಚ್ಚನಂತೆ ಅದೇ ವಾಯ್ಸ್, ಅದೇ ಖದರ್ ತೋರಿದ್ದಾರೆ. ಅಂದಹಾಗೆ ಮ್ಯಾಂಗೋ ಪಚ್ಚ ಮೈಸೂರು ಭಾಗದ ಕಥೆ. ಈ ದಸರಾ ಸಂಭ್ರಮದಲ್ಲೇ ಮೈಸೂರು ಭಾಗದ ಕಥೆಯ ಸಣ್ಣ ಝಲಕ್ ತೋರಿಸಿರುವುದು ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಈಗಾಗಲೇ ಚಿತ್ರದ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿತ್ತು. ಸಂಚಿತ್ ರೆಟ್ರೋ ಲುಕ್ ಕಲಾಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಭರ್ಜರಿ ಟೀಸರ್ ಅಭಿಮಾನಿಗಳ ನಿದ್ದೆಗೆಡಿಸುವಂತಿದೆ. ಮ್ಯಾಂಗೋ ಪಚ್ಚ ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು, ಬಹುತೇಕ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಸಂಚಿತ್ ಹೂವಿನ ಮಾರ್ಕೆಟ್ನಲ್ಲಿ ಸಿಗರೇಟ್ ಸೇದುತ್ತಾ ಎಂಟ್ರಿ ಕೊಡೋ ದೃಶ್ಯ ಕಿಕ್ ಕೊಡ್ತಿದೆ.
ಸುದೀಪ್ ಸೋದರಳಿಯನ ಖದರ್.. ಚಿತ್ರರಂಗಕ್ಕೆ ಭರವಸೆ
ಮಾವ ಕಿಚ್ಚ.. ಅಳಿಯ ಪಚ್ಚ.. ಅದೇ ವಾಯ್ಸ್.. ಅದೇ ಪವರ್
ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿದ್ದು, ಸಂಚಿತ್ ಈ ಸಣ್ಣ ಟೀಸರ್ನಲ್ಲೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ. ಮಾವನ ಹಾಗೆ ಸಂಚಿತ್ ಕೂಡ ಚಿತ್ರರಂಗದಲ್ಲಿ ಆರಡಿ ಕಟೌಟ್ ಆಗಿ ಮೆರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಿವೇಕ ನಿರ್ದೇಶನದ ಈ ಸಿನಿಮಾ, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳನ್ನ ಆಧರಿಸಿ ತಯಾರಾಗ್ತಿದೆ. ಕೆಆರ್ಜಿ ಸ್ಟುಡಿಯೋಸ್ ಹಾಗೂ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿವೆ.
ಸಂಚಿತ್ ಮೊದಲ ಸಿನಿಮಾ ಜಿಮ್ಮಿ ಕಾರಣಾಂತರಗಳಿಂದ ಸೆಟ್ಟೇರಲೇ ಇಲ್ಲ. ಆದ್ರೀಗ ಮ್ಯಾಂಗೋ ಪಚ್ಚ ಒಂದೊಳ್ಳೆ ಭರವಸೆ ಮೂಡಿಸಿದೆ. ಇಲ್ಲಿ ಸಂಚಿತ್ಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಂಡಿದ್ದು, ತಾರಾಗಣದಲ್ಲಿ ಮಯೂರ್ ಪಟೇಲ್, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಇದ್ದಾರೆ. ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಕ್ಯಾಮೆರಾ ಕೈಚಳಕ ಹಾಗೂ ವಿಶ್ವಾಸ್ ಆರ್ಟ್ ವರ್ಕ್ ಮ್ಯಾಂಗೋ ಪಚ್ಚ ಚಿತ್ರಕ್ಕಿದೆ.





