ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಮಾಜಿ ಅತ್ತಿಗೆ, ನಟಿ ಮಲೈಕಾ ಅರೋರಾ ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ವೀಕ್ಷೀಸಿದ್ದರು. ಮಾಜಿ ಶ್ರೀಲಂಕಾ ಕ್ರಿಕೆಟರ್ ಕುಮಾರ ಸಂಗಕ್ಕರ್ ಕೂಡ ಆ ಪಂದ್ಯದಲ್ಲಿದ್ದರು. ಇದರಿಂದಾಗಿ ಇಬ್ಬರ ನಡುವೆ ಸಂಬಂಧ ಇದೆ ಎಂಬ ಗಾಸಪ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿವೆ.
ಮಲೈಕಾಗೆ ಈಗ ವಯಸ್ಸು 50 ದಾಟಿದೆ. ಆದರೆ ಈ ವಯಸ್ಸಿನಲ್ಲೂ ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಹೆಸರು ಹಲವರ ಜೊತೆ ತಳುಕು ಹಾಕಿಕೊಂಡಿದ್ದು ಗೊತ್ತೇ ಇದೆ. ಈಗ ಮತ್ತೆ ಅರೋರಾ ಅವರ ಹೆಸರು ಮಾಜಿ ಶ್ರೀಲಂಕನ್ ಕ್ರಿಕೆಟರ್ ಕುಮಾರ ಸಂಗಕ್ಕರ್ ಜೊತೆ ಕೇಳಿ ಬರ್ತಿರೋದು ವಿಶೇಷ. ಇದಕ್ಕೆ ಕಾರಣ ಮಾರ್ಚ್ 30ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವು ಗುವಾಹಟಿಯ ಸ್ಟೇಡಿಯಂನಲ್ಲಿ ನಡೆದಿದೆ. ಸಾಮಾನ್ಯವಾಗಿ ಮುಂಬೈನಲ್ಲಿ ಪಂದ್ಯ ನಡೆದಾಗ ಬಾಲಿವುಡ್ ಸೆಲೆಬ್ರಿಟಿಗಳು ಹಾಜರಿ ಹಾಕುವುದು ಸಾಮಾನ್ಯ. ಆದರೆ ಗುವಾಹಟಿಗೆ ಮಲೈಕಾ ಅವರು ಆಗಮಿಸಿದ್ದು ಏಕೆ ಎನ್ನುವ ಪ್ರಶ್ನೆ ಈಗ ಅನೇಕರಲ್ಲಿ ಮೂಡಿಬಂದಿದೆ.
ಕುಮಾರ್ ಸಂಗಕ್ಕರ್ ಅವರು ರಾಜಸ್ಥಾನ್ ರಾಯಲ್ಸ್ ನ ಮಾಜಿ ಕೋಚ್. ಈ ಕಾರಣ ಅವರು RR ತಂಡವನ್ನು ಬೆಂಬಲಿಸಿದ್ದಾರೆ ಹಾಗೂ ಮಲೈಕಾ ಕೂಡ ರಾಜಸ್ಥಾನವನ್ನು ಬೆಂಬಲಿಸಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಈ ಬಗ್ಗೆ ಅಭಿಮಾನಿಗಳು ‘ನೀವು ಡೇಟ್ ಮಾಡುತ್ತಿದ್ದೀರಾ’ ಎಂದು ಪ್ರಶ್ನೆ ಮಾಡ್ತಿದ್ದಾರೆ. ಸಾಲದು ಅಂತ ಸ್ಟೇಡಿಯಂನಲ್ಲಿ ಕುಮಾರ್ ಸಂಗಕ್ಕರ್ ಹಾಗೂ ಮಲೈಕಾ ಅಕ್ಕಪಕ್ಕ ಕೂತು ಫೋರು ಸಿಕ್ಸ್ ಗಳನ್ನ ಚಿಯರ್ ಮಾಡ್ಕೊಂಡ್ ಎಂಜಾಯ್ ಮಾಡಿದ್ದಾರೆ.
ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಎಲ್ಲರಿಗೂ ಗೊತ್ತಿರುವಂತೆ ಮಲೈಕಾಗಿಂತ ಅರ್ಜುನ್ ಅವರು ವಯಸ್ಸಿನಲ್ಲಿ ತುಂಬಾನೇ ಸಣ್ಣವರು. ಆದಾಗ್ಯೂ ಇವರ ಪ್ರೇಮಕ್ಕೆ ತೊಂದರೆ ಉಂಟಾಗಿರಲಿಲ್ಲ. ಅರ್ಜುನ್ ಕಪೂರ್ ಅವರು ಸಾಕಷ್ಟು ಟ್ರೋಲ್ ಆದರು. ಕೊನೆಗೆ ಇವರ ಮಧ್ಯೆ ಬ್ರೇಕಪ್ ಆಯ್ತು. ಅರ್ಜುನ್ ಕಪೂರ್ ಗೂ ಮುನ್ನ ಮತ್ತಿಬ್ಬರ ಜೊತೆ ಬ್ರೇಕಪ್ ಮಾಡ್ಕೊಂಡಿದ್ದ ಮಲೈಕಾ, ಇದೀಗ ಮೂವರನ್ನೂ ಬಿಟ್ಟು ನಾಲ್ಕನೇ ವ್ಯಕ್ತಿ ಜೊತೆ ರಿಲೇಶನ್ಶಿಪ್ ನಲ್ಲಿ ಇದ್ದಾರಾ ಅನ್ನೋ ಕುತೂಹಲ ಮೂಡಿಸಿದ್ದಾರೆ. 50ರ ಹರೆಯದಲ್ಲೂ ಬ್ಯೂಟಿ ಮೆಂಟೇನ್ ಮಾಡಿರೋ ಮಲೈಕಾ, ಈಗಲೂ ಸಖತ್ ಹಾಟ್. ಕುಮಾರ್ ಸಂಗಕ್ಕರ್ ಮ್ಯಾಟರ್ ನಿಜವಾದ್ರೆ ಲಂಕಾಗೆ ಹೋಗಿ ಸೆಟಲ್ ಆಗ್ತಾರಾ ಅನ್ನೋದು ಕಾದು ನೋಡಬೇಕಿದೆ.





