ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಅನಿಸಿಕೊಂಡಿರೋ ಲವ್ ಮಾಕ್ಟೇಲ್-3 ಟೀಂ, ಗ್ರ್ಯಾಂಡ್ ಸಕ್ಸಸ್ ಮೀಟ್ ಮಾಡೋ ಬದಲಿಗೆ ಕ್ಲ್ಯಾರಿಫಿಕೇಷನ್ ಮೀಟ್ ಮಾಡುವ ಹಾಗಾಗಿದೆ. ಯೆಸ್.. ಕೃತಿಚೌರ್ಯ ಆರೋಪ ಹೊತ್ತಿರೋ ಮಾಕ್ಟೇಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ, ಅಲಿಗೇಷನ್ ಮಾಡಿರೋರ ಮೇಲೆ ಕಿಡಿಕಾರಿದ್ರು. ಮಾನನಷ್ಟ ಮೊಕದ್ದಮೆ ಹಾಕೋದಾಗಿಯೂ ಹೇಳಿದ್ದಾರೆ..ಇದರ ಫುಲ್ ಸ್ಟೋರಿ ಇಲ್ಲಿದೆ ನೋಡಿ..
- ಬಾಕ್ಸ್ ಆಫೀಸ್, ಕೃತಿಚೌರ್ಯ.. ಮಿಲನಾ-ಕೃಷ್ಣ ಕೊಟ್ರು ಸ್ಪಷ್ಟನೆ
- ರಾಘವೇಂದ್ರ ನಾಯ್ಕ್, ಪಾಂಡೆಗೆ ನೋಟಿಸ್.. ನೋ ಕಾಂಪ್ರಮೈಸ್
- ಪುಕ್ಸಟ್ಟೆ ಪಬ್ಲಿಸಿಟಿ ನಮಗೆ ಬೇಕಿಲ್ಲ.. ‘ಮಾಕ್ಟೇಲ್’ ಜೋಡಿ ಕಿಡಿ..!
- 4 ವರ್ಷ ತಗೊಂಡು ಮಾಡಿದ ಕಥೆ.. ನಾನೇ ರೈಟರ್ ಎಂದ ಕೃಷ್ಣ
ಲವ್ ಮಾಕ್ಟೇಲ್ ಸೀರೀಸ್ ಸಿನಿಮಾಗಳು.. ಇವು ಬರೀ ಸಿನಿಮಾಗಳಷ್ಟೇ ಅಲ್ಲ. ದಶಕಗಳ ಕಾಲ ಚಿತ್ರರಂಗದಲ್ಲಿ ಕಲಾ ಸೇವೆ ಮಾಡ್ತಾ ಬರ್ತಿರೋ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್‌ರ ಕನಸಿನ ಕೂಸುಗಳು. ಅವ್ರ ಡೀಪ್ ಎಮೋಷನ್. ಸೋತರೂ ಗೆದ್ದರೂ ಸಿನಿಮಾಗಾಗಿಯೇ ಪರಿತಪಿಸೋ ಕ್ಯೂಟ್ ಜೋಡಿಯ ಪರಿಶ್ರಮದ ಪ್ರತಿಫಲವಿದು. 2020ರ ಲವ್ ಮಾಕ್ಟೇಲ್, 2022ರ ಲವ್ ಮಾಕ್ಟೇಲ್-2 ಹಾಗೂ ಸದ್ಯ ರಿಲೀಸ್ ಆಗಿರೋ ಲವ್ ಮಾಕ್ಟೇಲ್-3 ಮೂರಕ್ಕೆ ಮೂರೂ ಬ್ಲಾಕ್ ಬಸ್ಟರ್ ಹಿಟ್ಸ್.
ಇಷ್ಟು ದಿನದಿಂದ ಇಲ್ಲದೇ ಇರೋದು, ಇದೀಗ ದಿಢೀರ್ ಅಂತ ರಾಘವೇಂದ್ರ ನಾಯ್ಕ್ ಅನ್ನೋರು ಈ ಲವ್ ಮಾಕ್ಟೇಲ್-3 ಕಥೆ ನನ್ನದು. ನನಗೆ ಮೋಸ ಆಗಿದೆ ಅಂತ ಆರೋಪಿಸ್ತಿದ್ದಾರೆ. ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ಕೃಷ್ಣ-ಮಿಲನಾ ಜೋಡಿ, ಸೆಲೆಬ್ರೇಷನ್ ಮಾಡಿಕೊಳ್ಳೋದು ಬಿಟ್ಟು, ಸ್ಪಷ್ಟನೆ ನೀಡುವಂತಹ ಪರಿಸ್ಥಿತಿ ಎದುರಾಗಿರೋದು ಬೇಸರದ ಸಂಗತಿ. ಯೆಸ್.. ತಮ್ಮ ಮೇಲಿನ ಆರೋಪಗಳೆಲ್ಲಕ್ಕೂ ಸ್ಪಷ್ಟನೆ ನೀಡಿದ ಕೃಷ್ಣ, ಮಿಲನಾ… ಆರೋಪ ಮಾಡಿದವ್ರಿಗೆ ಲೆಫ್ಟು ರೈಟು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾನು ಈ ಸಿನಿಮಾಗೆ ಬರೀ ಡೈರೆಕ್ಟರ್ ಅಷ್ಟೇ ಅಲ್ಲ. ಬರಹಗಾರ ಕೂಡ ಹೌದು. ನಾಲ್ಕು ವರ್ಷಗಳಿಂದ ಕಥೆ ಮಾಡಿದ್ದೀನಿ. ವರ್ಷಕ್ಕೆ ಕನಿಷ್ಟ 150 ಕಥೆ ಕೇಳ್ತೀನಿ. 2-3 ನಿಮಿಷದಲ್ಲಿ ಕಥೆ ಹೇಳ್ತಾರೆ. ರಾಘವೇಂದ್ರ ನಾಯ್ಕ್ ಹೇಳಿರೋದು ನಿಜ. ನಾನು ಸೇಮ್ ಕಾನ್ಸೆಪ್ಟ್ ಮಾಡಿದೀನಿ. ಕ್ಲೈಮ್ಯಾಕ್ಸ್‌ನಲ್ಲಿ ಹೆಣ್ಣು ಮಗುನ ದತ್ತು ತಗೋತಾನೆ. ಸಿಂಗಲ್ ಪೇರೆಂಟ್ ಹೆಣ್ಣು ಮಗುನ ದತ್ತು ತಗೊಳೋ ಹಾಗಿಲ್ಲ ಅನ್ನೋದು ನನ್ನ ಸಿನಿಮಾದ ಕಾನ್ಸೆಪ್ಟ್. ಸ್ಕ್ರೀನ್ ಪ್ಲೇ, ಡೈಲಾಗ್ಸ್, ಸೀನ್ಸ್ ಯಾವುದೂ ನಿಂದಲ್ಲ. ಮತ್ತೆ ಯಾಕಯ್ಯ ಬಂದಿದ್ದೀಯಾ..? ಅಂತ ಕೃಷ್ಣ ಜಾಡಿಸಿದ್ದಾರೆ.
ಗುರುದೇಶ್ ಪಾಂಡೆಗೂ ಹಿಗ್ಗಾಮುಗ್ಗ ಜಾಡಿಸಿದ ಕೃಷ್ಣ, ಕಾಂಪ್ರಮೈಸ್ ಆಗುವ ಮಾತೇ ಇಲ್ಲ. ಲೀಗಲ್ ನೋಟಿಸ್ ಕಳುಹಿಸಲಿದ್ದೇವೆ ಎಂದಿದ್ದಾರೆ. ಇನ್ನೂ ನೆಗೆಟಿವ್ ಪಬ್ಲಿಸಿಟಿ, ಪುಕ್ಸಟ್ಟೆ ಪಬ್ಲಿಸಿಟಿ ನಮಗೆ ಬೇಕಾಗಿಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ ಎಂದ ಮಿಲನಾ, ಕಥೆ ಕದ್ದು ಸಿನಿಮಾ ಮಾಡ್ಬೇಕು ಅನ್ನೋದಾದ್ರೆ ನಾವು ಸಿನಿಮಾನೇ ಮಾಡಲ್ಲ. ನೇಮು ಫೇಮು ಮಾಡೋದು ಸೆಕೆಂಡರಿ. ಆದ್ರೆ ಮಾನ ಮರ್ಯಾದೆಗೆ ಬದುಕ್ತಿದ್ದೀವಿ. ಕಥೆ ಕದ್ದಿದ್ದಾರೆ ಅನ್ನೋದೇ ಜೋಕ್ ಎಂದರು.
ಒಟ್ಟಾರೆ ಸ್ನೇಹ, ಪ್ರೀತಿಯಿಂದ ಶುರುವಾದ ಕೃಷ್ಣ ಮಿಲನಾ ಜರ್ನಿ, ಮದ್ವೆ, ಮಗಳು, ಡೈರೆಕ್ಟರ್, ನಿರ್ಮಾಪಕರ ಪಟ್ಟ.. ಹೀಗೆ ಬಯಸಿದ್ದೆಲ್ಲಾ ತಂದುಕೊಟ್ಟಿದೆ ಲವ್ ಮಾಕ್ಟೇಲ್ ಸೀರೀಸ್. ಹೀಗಿರುವಾದ ಕೃತಿಚೌರ್ಯ ಮಾಡಿ ಸಿನಿಮಾ ಮಾಡುವ ದರ್ದು ಇವರಿಗಿಲ್ಲ ಅನ್ನೋದು ಇಡೀ ಇಂಡಸ್ಟ್ರಿಗೆ ಗೊತ್ತು. ಒಂದು ವೇಳೆ ಕೃತಿ ಚೌರ್ಯ ಮಾಡಿರೋದಕ್ಕೆ ಪ್ರಾಪರ್ ಪ್ರೂಫ್ ಇದ್ರೆ ದಾರಾಳವಾಗಿ ಕೋರ್ಟ್‌ನಲ್ಲಿ ಪ್ರೂವ್ ಮಾಡಿ, ನ್ಯಾಯ ದಕ್ಕಿಸಿಕೊಳ್ಳಲಿ ರಾಘವೇಂದ್ರ ನಾಯ್ಕ್. ಆದ್ರೆ ಇಲ್ಲಿ ಈ ರೀತಿಯ ಕೆಸರೆರಚಾಟ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ. ಇದೊಂಥರಾ ಮಾನಹಾನಿ ಆಗಲಿದೆ. ಕಲೆಯ ಕಗ್ಗೊಲೆ ಅನಿಸಲಿದೆ. ಅದು ಎಂದೂ ಆಗಬಾರದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





