ಸ್ಯಾಂಡಲ್ ವುಡ್ ನಲ್ಲಿ ತಮ್ಮ ತಮ್ಮ ಪ್ರತಿಭೆಯನ್ನ ಪ್ರೂವ್ ಮಾಡೋಕೆ ಹಲವು ವಿಭಿನ್ನ ಪ್ರಯತ್ನಗಳನ್ನ ಯುವ ಪ್ರತಿಭೆಗಳು ಮಾಡ್ತಿರ್ತಾರೆ. ಸದ್ಯ ಇದೆ ಸಾಲಿಗೆ ಹರಿಶ್ ಲೇಖಿ ಕಥೆ ಬರೆದು ಆಕ್ಷನ್ ಕಟ್ ಹೇಳಿರೋ ಕುಣಿ ಅನ್ನೋ ಕಿರು ಚಿತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಹರೀಶ್ ಲೇಖಿ ನಿರ್ದೇಶನದ ಕುಣಿ ಸಿನಿಮಾ ವಿವಿಧ ಪಿಲಂ ಫೆಸ್ಟಿವಲ್ ನಲ್ಲಿ ಭಾಗಿಯಾಗಿ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.. ಮತ್ತು ನಾಗತಿಗಳ್ಳಿ ಚಂದ್ರಶೇಖರ್, ಕಾರ್ಕೋಚ್ ಸುಧಿ, ರಾಜೇಶ್ ನಟರಂಗ, ಸಾಗರ್ ಪುರಾಣಿಕ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರಿಂದ ಪ್ರಶಂಸೆ ಪಡೆದಿದೆ. ತಂದೆ ಮತ್ತು ಮಗನ ನಡುವೆ ನಡೆಯುವ ಕಥಾ ಹಂದರ ಹೊಂದಿರುವ ಕುಣಿ ಕಿರು ಚಿತ್ರವು ಸತ್ಯ ಹೆಗಡೆ ಸ್ಟಡಿಯೋಸ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಹರೀಶ್ ಲೇಖಿ ನಿರ್ದೇಶನದ, ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮತ್ತು ಚಿತ್ರಗಂಗದ ಗಣ್ಯರಿಂದ ಪ್ರಶಂಸೆ ಪಡೆದಿರುವ, ತಂದೆ ಮತ್ತು ಮಗನ ನಡುವೆ ನಡೆಯುವ ಕಥಾ ಹಂದರ ಹೊಂದಿರುವ, ಕುಣಿ ಕಿರು ಚಿತ್ರವು ಸತ್ಯ ಹೆಗಡೆ ಸ್ಟಡಿಯೋಸ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಈಗಾಗಲೇ ಸತ್ಯ ಹೆಗಡೆ ಸ್ಟುಡಿಯೋಸ್ ಯ್ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು. ಎಲ್ಲ ನೋಡುಗರಿಂದ ಉತ್ತಮ ಪ್ರಶಂಸೆ ದೊರೆಯುತ್ತಿದೆ. ಸದ್ಯದ ಎಲ್ಲರ ಮನೆಯ ಪರಿಸ್ಥಿತಿಗೆ ಈ ಚಿತ್ರದ ಕಥೆಯು ಕನ್ನಡಿ ಹಿಡಿದಂತಿದೆ.
ಈ ಕಿರುಚಿತ್ರದ ಬಗ್ಗೆ ನಟ ರಾಜೇಶ್ ನಟರಂಗ ಅವರು ಮಾತನಾಡಿ, ‘ಕುಣಿ ಕಿರುಚಿತ್ರ ಒಂದು ಉತ್ಕೃಷ್ಟವಾದ ಕೃತಿ. ಒಳ್ಳೆಯ ಥೀಮ್ ಇದರಲ್ಲಿದೆ. ಇದರ ಬರವಣಿಗೆ ಬಹಳ ಸೂಕ್ಷ್ಮ ಆಗಿದೆ. ನಮ್ಮ ಸುತ್ತಮುತ್ತ ನಡೆಯುವ ಕಥೆ ಇದಾಗಿದೆ ಎಂದಿದ್ದಾರೆ.
‘ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿ ಮಾಡಿದ ಕಿರುಚಿತ್ರ ಇದಾಗಿದೆ. ಎಲ್ಲ ಫ್ಯಾಮಿಲಿಯಲ್ಲಿ ಇರುವ ಸಂಕೀರ್ಣತೆಯನ್ನು ಈ ಕಿರುಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಈ ರೀತಿ ಪ್ರತಿಭೆಗಳು ಇನ್ನಷ್ಟು ಹೊರಬರಲಿ ಅಂತ ನಾನು ಹಾರೈಸುತ್ತೇನೆ’ ಎಂದು ಸಾಗರ್ ಪುರಾಣಿಕ್ ಅವರು ಹೇಳಿದ್ದಾರೆ. ನಟ ಕಾಕ್ರೋಚ್ ಸುಧಿ ಅವರಿಗೂ ಈ ಕಿರುಚಿತ್ರ ತುಂಬಾ ಇಷ್ಟ ಆಗಿದೆ.





